ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಸಲಾತಿ ಹೆಚ್ಚಳಕ್ಕೆ ಸಂಘಟಿತ ಹೋರಾಟ’

Last Updated 2 ಜನವರಿ 2014, 9:52 IST
ಅಕ್ಷರ ಗಾತ್ರ

ಹೊಸಪೇಟೆ: ‘ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ ೧೫ಕ್ಕೆ ಹೆಚ್ಚಿಸಬೇಕು. ಇದಕ್ಕಾಗಿ ಸಮಾಜದಿಂದ ಸಂಘಟಿತ ಹೋರಾಟಕ್ಕೆ ನಡೆಸಲಾಗುವುದು’ ಎಂದು ಬಿಎಸ್‌ಆರ್‌ ಕಾಂಗ್ರೆಸ್ ಸಂಸ್ಥಾಸಪಕ, ಶಾಸಕ ಬಿ.ಶ್ರೀರಾಮುಲು ಹೇಳಿದರು. ನಗರದ ಶ್ರೀವಾಲ್ಮೀಕಿ ಕಲ್ಯಾಣಮಂಟಪದಲ್ಲಿ ಕರ್ನಾಟಕ ಪ.ಪಂ(ಎಸ್‌ಟಿ) ಮೀಸಲಾತಿ ಹಕ್ಕುಗಳ ಜನಪರ ಸಂಘಟನೆಗಳ ಒಕ್ಕೂಟ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ.ಪಂ ಮೀಸಲಾತಿ ಪ್ರಮಾಣ ಹೆಚ್ಚಳ ನಮ್ಮ ಸಂವಿಧಾನ ಹಕ್ಕು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಪಟ್ಟಣ ಪಂಚಾಯಿತಿಗೆ ನೀಡಲಾದ ಮೀಸಲಾತಿಯು ಎರಡು ದಶಕಗಳ ಹಿಂದಿನ ಜನಗಣತಿ ಆಧಾರದಲ್ಲಿ ನಿಗದಿಪಡಿಸಲಾಗಿದೆ. ಈಗ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದೆ’ ಎಂದು ಹೇಳಿದರು. ‘ಪ.ಪಂಗಡಕ್ಕೆ ಶೇ ೭.೫ರಷ್ಟು ಮೀಸಲಾತಿ ನೀಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿದ್ದು, ಅದನ್ನು ಶೀಘ್ರ ಜಾರಿಗೊಳಿಸಬೇಕು. ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳವಾದರೂ ಶೇ ೩ ಮೀಸಲಾತಿ ನಿಗದಿಮಾಡಿರುವುದು ನ್ಯಾಯಸಮ್ಮತವಲ್ಲ’ ಎಂದು ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದರು.

‘ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮುದಾಯದ ಎಲ್ಲ ಶಾಸಕರು ಪಕ್ಷಾತೀತವಾಗಿ ಮತ್ತು ಸಂಸದರಾಗಿರುವ ಸಮಾಜದ ೧೮ ಜನಪ್ರತಿನಿಧಿಗಳು ಮೀಸಲಾತಿ ಹೆಚ್ಚಳಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ನಿಯೋಗದೊಂದಿಗೆ ತೆರಳುತ್ತೇವೆ’ ಎಂದರು.

‘ಈ ಮೊದಲು ಪಕ್ಷಾತೀತವಾಗಿ ಶಾಸಕ ಮತ್ತು ಸಂಸದರು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ವಾಲ್ಮೀಕಿ ಜಯಂತಿಗೆ ರಜೆ ಮತ್ತು ಸರ್ಕಾರವೇ ಆಚರಿಸುವ ತೀರ್ಮಾನಕ್ಕೆ ಬರಲು ಶ್ರಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಸ್ವಾಮೀಜಿಯ ಮಾರ್ಗದರ್ಶನದಂತೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದರು.

ಮಾಜಿ ಶಾಸಕ, ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸೋಮಲಿಂಗಪ್ಪ ಮಾತನಾಡಿ, ‘ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಮೀಸಲಾತಿ ದೊರೆಯುತ್ತಿಲ್ಲ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಶೇ ೬.೭೫ ಎಸ್ಟಿ ಜನಸಂಖ್ಯೆಯನ್ನು ದಾಖಲೆಯಲ್ಲಿ ತೋರಿಸಲಾಗುತ್ತಿದೆ. ಗುಜರಾತ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೇ ೧೫, ಮಹಾರಾಷ್ಟ್ರದಲ್ಲಿ ಶೆ ೧೧, ತಮಿಳುನಾಡಿನಲ್ಲಿ ಶೇ ೫೩ ಮೀಸಲಾತಿ ನೀಡಲಾಗಿದೆ. ರಾಜ್ಯದಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಸಂಘಟಿತರಾಗಿ ಹೋರಾಟ ನಡೆಸಬೇಕಿದೆ’ ಎಂದರು.

ವಿಚಾರ ಸಂಕಿರಣದ ಸಾನಿಧ್ಯ ವಹಿಸಿದ್ದ ವಾಲ್ಮೀಕಿ  ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿಪಿಐ(ಎಂ)ನ ವಿ.ಎಸ್.ಶಿವಶಂಕರ್, ಮೀನಹಳ್ಳಿ ತಾಯಣ್ಣ, ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವರಾಮ ಗುಜ್ಜಲ, ಜಂಬಾನಳ್ಳಿ ವೆಂಕೋಬಣ್ಣ, ನಾಯ್ಕರ ವೇದಿಕೆಯಲ್ಲಿ ಉಪಸ್ಥಿತಿರಿದ್ದರು. ಪ್ರಾಂಶುಪಾಲ ಡಾ.ಕಡ್ಲಬಾಳ ಪನ್ನಂಗಧರ, ಡಾ.ಮಂಜುನಾಥ ಬೇವಿನಕಟ್ಟಿ, ಬಿಇಒ ಪಿ.ಸುನಂದಾ, ಮಂಜುನಾಥ ಡೊಳ್ಳಿನ, ಡಿ.ಸಿದ್ದಣ್ಣ, ಡ.ರಮೇಶನಾಯ್ಕ, ಪೂಜಾರಿ ಹನುಮಂತಪ್ಪ, ಸಂವಾದ ಮತ್ತು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಬುಡಕಟ್ಟು ಮಕ್ಕಳು ವಿಚಾರ ಸಂಕಿರಣ ಉದ್ಘಾಟಿಸಿದರು.

ನಾಣಿಕೇರಿ ತಿಮ್ಮಯ್ಯ, ಜಿ.ಕೆ.ಹನುಮಂತಪ್ಪ, ಕಿಚಡಿ ಲಕ್ಷ್ಮಣ, ತಾರಿಹಳ್ಳಿ ಹುಲುಗಜ್ಜಪ್ಪ, ತಾ.ಪಂ. ಸದಸ್ಯರು, ನಗರಸಭಾ ಸದಸ್ಯರು, ವಕೀಲರು, ಕಟಿಗಿ ರಾಮಕೃಷ್ಣ, ದೇವರಮನಿ ಶ್ರೀನಿವಾಸ ಮತ್ತಿತರರು ಭಾಗವಹಿಸಿದ್ದರು. ಧರ್ಮದರ್ಶಿ ಬಿ.ಎಸ್.ಜಂಬಯ್ಯನಾಯಕ ಸ್ವಾಗತಿಸಿದರು. ಮರಡಿ ಜಂಬಯ್ಯನಾಯಕ ಪ್ರಾಸ್ತಾವಿಕ ಮಾತನಾಡಿದರು. ಪಿ.ವಿ.ವೆಂಕಟೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT