ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಂಥಕಥೆ’ಯಿಂದ ರಂಗನ ಒಲುಮೆಯತ್ತ...

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನೆಯೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠಶಾಲೆ. ಸರಿಗಮಪದ... ಲಯಬದ್ಧವಾಗಿ ಹಾಡುವಾಗಲೇ ನಟನೆಯ ಆಸೆ. ಸಿನಿಮಾ ನಟಿಯಾಗು ಎನ್ನುವ ಚಿಕ್ಕಪ್ಪನ ಒತ್ತಾಸೆ. ಚೆನ್ನೈನಲ್ಲಿ ಒಂದು ವರ್ಷ ನಟನೆಯ ತರಬೇತಿ.

ಅಭಿನಯ ಕಲೆಯ ಕಲಿಕೆಯಲ್ಲಿರುವಾಗಲೇ ತೆಲುಗು ಚಿತ್ರರಂಗದಿಂದ ಅವಕಾಶ. ಮಹಿಳಾ ಪ್ರಧಾನ ಚಿತ್ರದ ನಾಯಕಿ... ಅದು ಪಕ್ಕಾ ಸಾಂಪ್ರದಾಯಿಕ ಪಾತ್ರ. ಆದರೆ ಮನಸ್ಸಿನಲ್ಲಿ ಅಂದುಕೊಂಡಿದ್ದ ಗ್ಲಾಮರಸ್ ಪಾತ್ರಗಳಿಗೆ ಪ್ರವೇಶಿಸುವ ಬಯಕೆ ಕಾರ್ಯರೂಪಕ್ಕಿಳಿದಿದ್ದು ತಾಯ್ನೆಲ ಕನ್ನಡದಲ್ಲಿ.

ಇದು ‘ಸೂಪರೋ ರಂಗ’ ಚಿತ್ರದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ರಾವ್ ಬಯೊಡೇಟ. ಪ್ರಿಯಾಂಕಾ ಮೈಸೂರಿನವರು. ಬಾಲ್ಯದ ಶಿಕ್ಷಣ ನಡೆದದ್ದು ಅಲ್ಲಿಯೇ. ಶಾಸ್ತ್ರೀಯ ಸಂಗೀತದವನ್ನು ಉಸಿರಂತೆ ಆಲಾಪಿಸುವ ಕುಟುಂಬದಲ್ಲಿ ಬೆಳೆದವರು. ಬಿಬಿಎಂ ಪದವಿ ಪೂರೈಸಲು ಬೆಂಗಳೂರಿಗೆ ಬಂದಾಗಲೇ ಅವರಿಗೆ ನಟಿಯಾಗುವ ತುಡಿತ ಹೆಚ್ಚಾಗಿದ್ದು. ‘ಕಲೆ ಸುಲಭವಾಗಿ ಒಲಿಯುವುದಿಲ್ಲ’ ಎನ್ನುವುದನ್ನು ಕುಟುಂಬದ ವಾತಾವರಣದಿಂದ ಅರಿತಿದ್ದ ಪ್ರಿಯಾಂಕಾ ಅಭಿನಯ ಕಲಿಕೆಗಾಗಿ ಚೆನ್ನೈನತ್ತ ಸಾಗಿದರು. ರಂಗಭೂಮಿಯಲ್ಲೂ ತೊಡಗಿದರು.

ರಂಗಭೂಮಿಯಲ್ಲಿ ನಟನೆಯ ಹೊಸತನಗಳನ್ನು ಆವಾಹಿಸಿಕೊಳ್ಳುತ್ತಿರುವಾಗಲೇ ತಮಿಳಿಗೆ ರೀಮೇಕ್ ಆಗುತ್ತಿದ್ದ ಮಲಯಾಳಂನ ‘ನೀಕೊ ನಾಚ’ ಚಿತ್ರದ ನಾಯಕಿಯಾಗಲು ಅವಕಾಶ ಬಂದಿತ್ತು. ಪಾತ್ರ ಇಷ್ಟವಾಗದ ಕಾರಣ ಚಿತ್ರದಿಂದ ಅವರು ದೂರಸರಿದರು. ಚೆನ್ನೈನಿಂದ ಬೆಂಗಳೂರಿಗೆ ಹಿಂದಿರುಗಿ ಕನ್ನಡದಲ್ಲಿ ಅವಕಾಶಗಳನ್ನು ಹುಡುಕಿದರು.

‘ದೇವದಾಸ್’ ಚಿತ್ರದಲ್ಲಿ ಇಲಿಯಾನಾಗೆ ಅವಕಾಶ ಕೊಡಿಸಿದ್ದ ತೆಲುಗು ನಿರ್ದೇಶಕ ನಾಗುಲು ಅವರ ಕಣ್ಣಿಗೆ ಪ್ರಿಯಾಂಕಾ ಛಾಯಾಚಿತ್ರ ಬಿತ್ತು. ಅರೆ! ಈಕೆ ದೇವದಾಸ್ ಚಿತ್ರದಲ್ಲಿ ನಟಿಸಿದ್ದ ಇಲಿಯಾನ ರೀತಿ ಇದ್ದಾಳೆ. ತಮ್ಮ ಮುಂದಿನ ಚಿತ್ರಕ್ಕೆ ಈಕೆಯೇ ನಾಯಕಿ ಎಂದು ತೀರ್ಮಾನಿಸಿ ಚೆನ್ನೈನಿಂದ ಬೆಂಗಳೂರಿಗೆ ಬಂದು ಪ್ರಿಯಾಂಕಾಗೆ ‘ವಿಂಥಕಥಾ’ ಚಿತ್ರದ ಬಗ್ಗೆ ಹೇಳಿ, ಕಾಲ್ ಶೀಟ್ಗೆ ಸಹಿ ಪಡೆದು ಹೋಗಿದ್ದರಂತೆ ನಾಗುಲು.

‘ವಿಂಥಕಥಾದಲ್ಲಿ ರಂಗಭೂಮಿಯಲ್ಲಿ ಕಲಿತ್ತಿದ್ದನ್ನೆಲ್ಲ ಧಾರೆ ಎರೆಯಲು ಅವಕಾಶವಾಯಿತು. ‘ವಿಂಥಕಥಾ’ ಎಂದರೆ ವ್ಯತ್ಯಾಸವಾದ ಕಥೆ ಎಂದರ್ಥ. ಹುಡುಗಿಯೊಬ್ಬಳ ಬದುಕಿನ ವ್ಯತ್ಯಯವೇ ವಿಂಥಕಥೆ. ಚಿತ್ರ ವ್ಯಾಪಾರಿ ದೃಷ್ಟಿಕೋನದಲ್ಲಿದ್ದರೂ ಕಲಾತ್ಮಕ ಸ್ಪರ್ಶ ಇದೆ’ ಎಂದು ಮೊದಲ ಚಿತ್ರದ ಬೆಡಗುಗಳನ್ನು ಬಿಚ್ಚುತ್ತಾರೆ ಪ್ರಿಯಾಂಕಾ.

ಚಿತ್ರದಲ್ಲಿ ಲಂಗ–ದಾವಣಿಯಲ್ಲಿ ಅಭಿನಯಿಸುವ ಪಕ್ಕಾ ಸಾಂಪ್ರದಾಯಿಕ ಪಾತ್ರ ಅವರದ್ದು. ಶಾಸ್ತ್ರೀಯ ಸಂಗೀತದ ಲಯದಲ್ಲಿರುವ ಒಂದು ಹಾಡಿಗೆ ದನಿಯೂ ಆಗಿದ್ದಾರೆ. ‘ವಿಂಥಕಥಾ’ ಅಕ್ಟೋಬರ್ ಮೊದಲ ವಾರ ಬಿಡುಗಡೆಯಾಗಲಿದೆ. ಪ್ರಿಯಾಂಕಾ ಹೆಚ್ಚು ಅಪೇಕ್ಷಿಸುವುದು ಗ್ಲಾಮರ್ ಪಾತ್ರಗಳನ್ನು. ತಮಿಳು ಮತ್ತು ತೆಲುಗಿನಲ್ಲಿ ಸಾಂಪ್ರದಾಯಿಕ ಪಾತ್ರಗಳಿಗೆ ಅವಕಾಶ ಬಂದಿತ್ತಂತೆ. ಚಿತ್ರಜೀವನದ ಆರಂಭದಲ್ಲಿಯೇ ಏಕಾತನತೆಯ ಪಾತ್ರಗಳು ಬೇಡ ಎಂಬ ಕಾರಣಕ್ಕೆ ಆ ಅವಕಾಶಗಳನ್ನು ಒಪ್ಪಿಕೊಳ್ಳಲಿಲ್ಲವಂತೆ.

ಕನ್ನಡದ ಅವರ ಮೊದಲ ಚಿತ್ರ ’ಸೂಪರೋ ರಂಗ’ ಅವರು ಬಯಸಿದ್ದ ಪಾತ್ರವನ್ನೇ ನೀಡಿದೆ. ಚಿತ್ರದಲ್ಲಿ ಅವರದ್ದು ನಾಯಕಿಯ ತಂಗಿಯ ಪಾತ್ರ. ಗ್ಲಾಮರ್ಗೆ ಹೆಚ್ಚು ಅವಕಾಶವಿದೆಯಂತೆ. ‘ನಾಯಕಿಯಾಗಲೇ ಬೇಕು ಎಂದು ಚಿತ್ರರಂಗಕ್ಕೆ ಬಂದವಳಲ್ಲ ನಾನು. ಕಲಾವಿದೆಯಾಗಲು ಬಂದವಳು. ಪಾತ್ರಕ್ಕೆ ಪ್ರಾಮುಖ್ಯ ಇರಬೇಕು’ ಎಂದು ಎಲ್ಲ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚುವ ಬಯಕೆಯನ್ನು ಹಂಚಿಕೊಳ್ಳುತ್ತಾರೆ. ಹಲವು ಜಾಹೀರಾತು ಕಂಪೆನಿಗಳ ರಾಯಭಾರಿಯಾಗಿರುವ ಅವರಿಗೆ ಫ್ಯಾಷನ್ ಕೋರ್ಸ್ ಮಾಡುವ ಆಸೆ.

–ಡಿ.ಎಂ.ಕುರ್ಕೆ ಪ್ರಶಾಂತ.
ಚಿತ್ರ: ಕೆ.ಎನ್. ನಾಗೇಶ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT