ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿ ಅನುಕರಿಸುವ ವ್ಯಕ್ತಿತ್ವ ಶಿಕ್ಷಕರದಾಗಲಿ’

Last Updated 21 ಸೆಪ್ಟೆಂಬರ್ 2013, 10:15 IST
ಅಕ್ಷರ ಗಾತ್ರ

ಮಂಗಳೂರು: ‘ವಿದ್ಯಾರ್ಥಿಗಳು ಇಷ್ಟಪಟ್ಟು ಅನುಕರಿಸುವಂತಹ ವ್ಯಕ್ತಿತ್ವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು’ ಎಂದು ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಾಂದ ಸರಸ್ವತಿ ಹೇಳಿದರು.

ಶಿಕ್ಷಕರಲ್ಲಿ ಮೌಲ್ಯ ತುಂಬುವ ಸಲುವಾಗಿ ಇಲ್ಲಿನ ರಾಮಕೃಷ್ಣ ಮಠದ ಆಶ್ರಯ ದಲ್ಲಿ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಹಮ್ಮಿಕೊಂಡ ‘ವಿವೇಕ ಸಂವರ್ಧನ’ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು. ‘ರಾಷ್ಟ್ರ ನಿರ್ಮಾಣ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಇದಕ್ಕೆ ಉತ್ತಮ ಉದಾಹರಣೆ ಜಪಾನ್. ಎರಡನೇ ವಿಶ್ವಯುದ್ಧದ ಸಂದರ್ಭ ಅಕ್ಷರಶಃ ಬೂದಿಯಾಗಿದ್ದ ಆ ದೇಶವು 25 ವರ್ಷಗಳಲ್ಲಿ ವಿಶ್ವದ ಗಮನ ಸೆಳೆಯುವಷ್ಟು ಅಭಿವೃದ್ಧಿ ಸಾಧಿಸಿತು. ಇದಕ್ಕೆ ಕಾರಣ ಉತ್ಸಾಹಿ ಯುವಕ ಯುವತಿಯರನ್ನು ಶಿಕ್ಷಕರನ್ನಾಗಿ ನೇಮಿಸಿ, ಜನರಲ್ಲಿ ಅಭಿವೃದ್ಧಿಯ ಕನಸು ಮತ್ತು ರಾಷ್ಟ್ರಾಭಿಮಾನ ತುಂಬಿಸಿದ್ದು’ ಎಂದರು.

‘ಶಿಕ್ಷಣ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದು ಕುತೂಹಲಕಾರಿ. ಮಕ್ಕಳು ಮನೆಯ ಹಿರಿಯರನ್ನು ಅನುಕರಿಸುತ್ತವೆ ಎಂಬುದನ್ನು ಅರಿತ ಹಿರಿಯರು ಆತಂಕ ಕ್ಕೊಳಗಾದರು. ಮಕ್ಕಳು ನಮ್ಮನ್ನು ಅನುಕರಿಸುವುದು ಬೇಡ ಎಂದು ತೀರ್ಮಾನಿಸಿದ ಅವರು, ಅದಕ್ಕಾಗಿ ಆದರ್ಶ ವ್ಯಕ್ತಿಯನ್ನು ಹುಡುಕಿ ಅವರ ಬಳಿ ತಮ್ಮ ಮಕ್ಕಳನ್ನು ಬಿಟ್ಟರು. ಆ ವ್ಯಕ್ತಿಯ ಬೇಕು ಬೇಡಗ ಳನ್ನೆಲ್ಲಾ ಊರಿನವರೇ ವಹಿಸಿ ಕೊಂಡರು. ಮಕ್ಕಳು ಅನುಸ ರಿಸುವಂತಹ ಆದರ್ಶವನ್ನು ಹೊಂದಿದ್ದೇವೆಯೇ ಎಂದು ಶಿಕ್ಷಕ ವೃತ್ತಿ ಯಲ್ಲಿ ತೊಡಗಿ ಸಿಕೊಂಡವರು ಆತ್ಮಾವ ಲೋಕನ ಮಾಡಿಕೊಳ್ಳಬೇಕು’ ಎಂದರು.

‘ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೀತಿಸ ಬೇಕು. ವಿಷಯವನ್ನು ಕಲಿಸು ವುದಕ್ಕಿಂತಲೂ ಇದು ಮುಖ್ಯ. ಅವರು ನಿಷ್ಕಳಂಕ ವ್ಯಕ್ತಿತ್ವನ್ನು ಹೊಂದಿರಬೇಕು. ಯಾವುದೇ ದುರಭ್ಯಾಸಗಳಿದ್ದರೂ ತಪ್ಪಿಯೂ ವಿದ್ಯಾರ್ಥಿಗಳ ಮುಂದೆ ಪ್ರಕಟಪಡಿಸಬಾರದು. ನೆಚ್ಚಿನ ಗುರುಗಳು ಕಲಿಸುವ ಪಾಠ ವಿದ್ಯಾರ್ಥಿಗೆ ಹೆಚ್ಚು ಇಷ್ಟವಾಗುತ್ತದೆ. ಶಿಕ್ಷಕ ಉತ್ತಮ ಸಂಶೋಧಕನಾಗಿರಬೇಕು. ಪ್ರತಿನಿತ್ಯ ಹೊಸ ವಿಧಾನಗಳ ಮೂಲಕ ವಿಷಯವನ್ನು ಕಲಿಸುವುದರಿಂದ ವಿದ್ಯಾರ್ಥಿಗಳ ಕುತೂಹಲವನ್ನು ಹೆಚ್ಚಿಸಬಹುದು’ ಎಂದರು.
‘ದಡ್ಡ ಮಕ್ಕಳನ್ನು ಹೊಂದಿದವರು ಅದೃಷ್ಟವಂತರು. ಇಂದು ಮಕ್ಕಳು ಇಂಗ್ಲಿಷ್‌ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದರೆ ಅದಕ್ಕೆ ಶಿಕ್ಷಕರು ಕಾರಣ. ಪಠ್ಯ ಪುಸ್ತಕ ಸೀಮಿತವಾಗಿರದೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತುಂಬುವ ಎಲ್ಲಾ ಅವಕಾಶಗಳನ್ನು ಶಿಕ್ಷಕರು ಬಳಸಿ ಕೊಳ್ಳಬೇಕು’ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌ ಮಾತನಾಡಿ, ‘15 ವರ್ಷ ಕಲಿತು ಪದವಿ ಪಡೆದ ವಿದ್ಯಾರ್ಥಿಯಲ್ಲೂ ನೈತಿಕ, ಸಾಮಾಜಿಕ ಪ್ರಜ್ಞೆ ಜಾಗೃತ ವಾಗುತ್ತಿಲ್ಲ ಏಕೆ ಎಂಬ ಪ್ರಶ್ನೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಕೇಳಿಕೊಳ್ಳಬೇಕು’ ಎಂದರು.

‘ಜೀವನಕಲೆಯನ್ನು ಕಲಿಸಿಕೊಡುವುದೇ ಶಿಕ್ಷಣದ ಉದ್ದೇಶ. ಮೂಲಸೌಕರ್ಯ ನಿರ್ಮಿಸಿದ ಮಾತ್ರಕ್ಕೆ ರಾಷ್ಟ್ರನಿರ್ಮಾಣವಾಗುವುದಿಲ್ಲ. ವಿದ್ಯಾರ್ಥಿಗಳಲ್ಲಿ ನಾಗರಿಕ ಜವಾಬ್ದಾರಿ ಗಳನ್ನು ತುಂಬಬೇಕು’ ಎಂದು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಸೆಸ್‌ ಜಯ ಶೇಖರ್‌, ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಬೆಂಗಳೂರಿನ ಹೂ್ಯಮನ್ ನೆಟ್‌ವರ್ಕಿಂಗ್‌ ಅಕಾಡೆ ಮಿಯ ನಿರ್ದೇಶಕ ಪ್ರೊ.ಕೆ. ರಘೋ ತ್ತಮ್‌ ರಾವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT