ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಂತಿ ಮಾತುಕತೆ ನಿಲ್ಲದು’

ಉಗ್ರರ ದಾಳಿಗೆ ಪ್ರಧಾನಿ ಸಿಂಗ್ ಖಂಡನೆ
Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಫ್ರಾಂಕ್‌ಫರ್ಟ್ (ಪಿಟಿಐ): ಜಮ್ಮುವಿ­ನಲ್ಲಿ ನಡೆದ ಭಯೋ­ತ್ಪಾ­­ದಕರ ದಾಳಿ­­ಯನ್ನು ಗುರುವಾರ ಇಲ್ಲಿ ಖಂಡಿಸಿರುವ ಪ್ರಧಾನಿ ಮನ­ಮೋಹನ್‌ ಸಿಂಗ್‌, ‘ಶಾಂತಿ ಪ್ರಕ್ರಿಯೆ­ಯನ್ನು ವಿರೋಧಿಸುವ ಶಕ್ತಿಗಳ ಕುಮ್ಮ­ಕ್ಕಿ­ನಿಂದ ಈ ದಾಳಿ ನಡೆದಿದೆ’ ಎಂದು  ಟೀಕಿಸಿದ್ದಾರೆ.

ಭಯೋತ್ಪಾದಕರ ದಾಳಿಗೆ ಬಲಿ­ಯಾದ ಸೇನಾ ಅಧಿಕಾರಿ, ಪೊಲೀಸ್‌ ಸಿಬ್ಬಂದಿ ಮತ್ತು ನಾಗರಿಕರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿರುವ ಅವರು, ಇಂತಹ ಹೇಯ ಕೃತ್ಯವನು್ನ ಖಂಡಿಸಲು ಯಾವ ಶಬ್ದಗಳೂ ಸಾಲದು ಎಂದಿದ್ದಾರೆ.

ಶಾಂತಿ ಮಾತುಕತೆಗೆ ಅಡ್ಡಿಪಡಿಸು­ವುದೇ ಈ ದಾಳಿಯ ಉದ್ದೇಶವಾಗಿದೆ. ಆದರೆ ತಾವು ಈಗಾಗಲೇ ನಿಗದಿಯಾಗಿ­ರುವಂತೆ ಭಾನುವಾರ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರ ಜತೆ ನ್ಯೂಯಾರ್ಕ್‌ನಲಿ್ಲ ಮಾತುಕತೆ ನಡೆಸು­ವು­ದಾಗಿ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

‘ಗಡಿಯಾಚಿಗಿನ ರಾಷ್ಟ್ರದ ಕುಮ್ಮಕ್ಕಿ­ನಿಂದ ನಡೆಯುತ್ತಿರುವ ಭಯೋತ್ಪಾದಕ ಹಾವಳಿಯನ್ನು ತಡೆಯಲು ಶತಸಿದ್ಧ’ ಎಂದಿರುವ ಅವರು, ಪಾಕ್‌ ಹೆಸರನ್ನು ಪ್ರಸ್ತಾಪಿಸದೆ ಭಯೋತ್ಪಾದಕ ಚಟುವಟಿ­ಕೆ­ಗಳಿಗೆ ಆ ದೇಶವೇ ಕುಮ್ಮಕ್ಕು ನೀಡುತ್ತಿದೆ ಎಂಬುದನು್ನ ಸೂಚ್ಯವಾಗಿ ಹೇಳಿದ್ದಾರೆ.

‘ಗಡಿಭಾಗದಲ್ಲಿ ಪದೆಪದೇ ಪ್ರಚೋ­ದ­ನಾ­ಕಾರಿ ದಾಳಿ ನಡೆಯುತ್ತಿದ್ದು, ಈಗ ಮತ್ತೊಮ್ಮೆ ಭಯೋತ್ಪಾದಕರು ಹೇಯ ಕೃತ್ಯ ಎಸಗಿದ್ದಾರೆ’ ಎಂದು ಅಮೆರಿಕಕ್ಕೆ ತೆರ­ಳುತ್ತಿದ್ದ ಮಾರ್ಗಮಧ್ಯೆ ಅವರು  ತಿಳಿಸಿದ್ದಾರೆ.

‘ಗಡಿ ಭಾಗದ ಸಮಸ್ಯೆಗಳಿಗೆ ಪರಿ­ಹಾರ ಕಂಡುಕೊಳ್ಳಲು ನಾವು ನಡೆಸುವ ಮಾತು­ಕತೆಯ ಪ್ರಯತ್ನಕ್ಕೆ ಇಂತಹ ದಾಳಿಯಿಂದ ತಡೆ ಒಡ್ಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪಾಲ್ಗೊ­ಳ್ಳಲು ನ್ಯೂಯಾರ್ಕ್‌ಗೆ ಫ್ರಾಂಕ್‌­ಫರ್ಟ್ ಮೂಲಕ ಪ್ರಯಾಣಿ ಸುವ ವೇಳೆ ಬುಧವಾರ ರಾತ್ರಿ ಇಲ್ಲಿ ಉಳಿದುಕೊಂಡ ಪ್ರಧಾನಿ, ಗುರುವಾರ ಪ್ರಯಾಣವನ್ನು ಮುಂದುವರಿಸಿದರು.


ಹುಟ್ಟುಹಬ್ಬಕ್ಕೆ ಕರಿಮೋಡ
ಏರ್‌ ಇಂಡಿಯಾ ವಿಶೇಷ ವಿಮಾನ (ಪಿಟಿಐ): ಜಮ್ಮುವಿನಲ್ಲಿ ಉಗ್ರರ ದಾಳಿ ನಡೆದ ಕಾರಣ ಪ್ರಧಾನಿ ಮನಮೋಹನ್ ಸಿಂಗ್  ಅವರು ತಮ್ಮ 81ನೇ  ಹುಟ್ಟು ಹಬ್ಬವನ್ನು ಆಚರಿಸಿಕೊಂಡಿಲ್ಲ.

ಅವರು ಒಬಾಮಾ ಜತೆ ಮಾತುಕತೆ ನಡೆಸಲು ಅಮೆರಿಕಕ್ಕೆ ತೆರಳುವ ಮಾರ್ಗ­ಮಧೆ್ಯ ಏರ್ ಇಂಡಿಯಾ ವಿಮಾನದಲ್ಲಿ ಕೇಕ್ ಕತ್ತರಿಸ­ಲಿಲ್ಲ. ಉಗ್ರರ ದಾಳಿ­ಯಿಂದ 12 ಜನ ಸಾವನ್ನಪ್ಪಿರುವುದ­ರಿಂದ ಪ್ರಧಾನಿ, ವಿಮಾನದಲ್ಲಿ ಬೇಸರ­ದಲ್ಲಿ­ದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT