ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಎಡಿ’ ಹೆಚ್ಚಳ ರಾಜನ್‌ ಕಳವಳ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಎರಡಂಕಿ ತಲುಪಿ­ರುವ ಹಣದುಬ್ಬರ ದರ ಮತ್ತು ಗರಿಷ್ಠ ಮಟ್ಟದಲ್ಲಿರುವ ಚಾಲ್ತಿ ಖಾತೆ ಕೊರ­ತೆಯೇ(ಸಿಎಡಿ) ದೇಶದ ಹಣಕಾಸು ಮಾರು­­ಕಟ್ಟೆ­ಯಲ್ಲಿನ ಇತ್ತೀಚಿನ ಅಸ್ಥಿರ ತೆಗೆ ಪ್ರಮುಖ ಕಾರಣ ಎಂದು ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌ ಅಭಿಪ್ರಾಯ­ಪಟ್ಟಿದ್ದಾರೆ.

‘2002ರಲ್ಲಿ ಶೇ 8ರಷ್ಟಿದ್ದ ‘ಜಿಡಿಪಿ’ 2012ರಲ್ಲಿ  ಶೇ 5ಕ್ಕೆ ಕುಸಿದಿದೆ. ಇದಕ್ಕೆ ದೇಶೀಯ ಸಂಗತಿಗಳು ಮತ್ತು ಸಾಂಸ್ಥಿಕ ಹಣಕಾಸು ಸಂಸ್ಥೆಗಳ ವೈಫಲ್ಯ ಪ್ರಮುಖ ಕಾರಣ. 2008ರ ಜಾಗತಿಕ ಆರ್ಥಿಕ ಹಿಂಜರಿ­ತದಿಂದ ಹೊರಬರಲು ಸರ್ಕಾರ ಒಂದರ ಬೆನ್ನಿಗೊಂದರಂತೆ ಉತ್ತೇಜನ ಕೊಡುಗೆ­ಗಳನ್ನು ಪ್ರಕ­ಟಿಸಿತು. ಇದರ ಪರಿ ಣಾಮ­ವಾಗಿ ‘ಸಿಎಡಿ’ ಮತ್ತು ಹಣದು ಬ್ಬರ ಹೆಚ್ಚಿತು. ದೇಶದ ಆರ್ಥಿಕ ಆರೋ ಗ್ಯದ ದೃಷ್ಟಿ­ಯಿಂದ ಇವೆರಡನ್ನು ನಿಯಂತ್ರಿ ಸುವುದು ಸದ್ಯದ ಅಗತ್ಯ ಎಂದು ಅವರು ಇಲ್ಲಿ ಸಿಟಿ ಬ್ಯಾಂಕ್‌ ಆಯೋ­ಜಿಸಿದ್ದ ಹೂಡಿಕೆ­ದಾರರ ಸಭೆಯಲ್ಲಿ ಹೇಳಿದರು.

2008ರ ಜಾಗತಿಕ ಆರ್ಥಿಕ ಹಿಂಜರಿ­ತದಿಂದ ಉದ್ಯಮ ವಲಯ ಚೇತರಿಸಿಕೊ­ಳ್ಳಲು ಆಗ ಹಣಕಾಸು ಸಚಿವರಾಗಿದ್ದ ಪ್ರಣವ್‌ ಮುಖರ್ಜಿ ಮೂರು ಉತ್ತೇ­ಜನ ಕೊಡುಗೆಗಳನ್ನು ಪ್ರಕಟಿಸಿದ್ದರು. ಇವೆಲ್ಲದರ ಪರಿಣಾಮ­ವಾಗಿ 2010 ರಲ್ಲಿ ‘ಜಿಡಿಪಿ’ಯ ಶೇ 2.8ರಷ್ಟಿದ್ದ ‘ಸಿಎಡಿ’ 2013ರ ವೇಳೆಗೆ ಶೇ 4.8ಕ್ಕೆ ಏರಿಕೆ ಕಂಡಿತು. ಆದರೆ, ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಚಿನ್ನದ ಆಮದು ನಿಯಂತ್ರಿಸಲು ತೆಗೆದು­ಕೊಂಡ ಕ್ರಮಗ ಳಿಂದ ಪ್ರಸಕ್ತ ಹಣಕಾಸು ವರ್ಷದ ಎರ ಡನೇ ತ್ರೈಮಾಸಿ­ಕದಲ್ಲಿ ಇದು ಶೇ 3.1ಕ್ಕೆ ತಗ್ಗಿದೆ. ಹಣದುಬ್ಬರ ಸೂಚ್ಯಂಕ ಆಧರಿ ಸಿದ ಬಾಂಡ್‌ಗಳು ಚಿನ್ನದ ಬೇಡಿ­ಕೆಯನ್ನು ಇನ್ನಷ್ಟು ತಗ್ಗಿಸಲಿವೆ ಎಂದರು.

ಹೆಚ್ಚುವರಿ ಬಂಡವಾಳ
ಮುಂಬೈ (ಪಿಟಿಐ):
ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣದುಬ್ಬರ ನಿಯಂ­ತ್ರಿ­ಸಲು ಅನುಸರಿಸಿ­ಕೊಂಡು ಬರುತ್ತಿರುವ ಬಿಗಿ ಹಣಕಾಸು ನೀತಿಯಲ್ಲಿ ಮತ್ತೆ ತುಸು ಸಡಿಲಿಕೆ ತೋರಿದೆ. ಡಿ. 13ರಂದು ಮಾರುಕಟ್ಟೆಗೆ ಹೆಚ್ಚುವರಿಯಾಗಿ ರೂ10 ಸಾವಿರ ಕೋಟಿ ಬಂಡವಾಳ ಬಿಡುಗಡೆ ಮಾಡುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT