ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಎಸ್.ವೆಂಕಟೇಶ ಮೂರ್ತಿ

ಸಂಪರ್ಕ:
ADVERTISEMENT

ಸರಿಗನ್ನಡಂ ಗೆಲ್ಗೆ | ಪರಂಪರೆ ಮೀರಿದ ರಚನಾ ಕ್ರಮ

ಒಂದು ಭಾಷೆಯ ಪದಪ್ರಯೋಗದಲ್ಲಾಗುವ ಸರಿ-ತಪ್ಪುಗಳ ವಿವೇಚನೆ, ಪದಗಳ ಹುಟ್ಟು ಬೆಳವಣಿಗೆ, ಹೊಸ ರೂಪಧಾರಣೆಗಳ ಇತಿಹಾಸ ಮತ್ತು ಶಬ್ದ ಪ್ರಯೋಗದ ಪರಿಷ್ಕೃತ ಚಿಂತನೆಯನ್ನು ಗುರಿಯಾಗಿ ಇಟ್ಟುಕೊಂಡು ರಚಿಸಲಾಗಿರುವ ಕೃತಿ ‘ಸರಿಗನ್ನಡಂ ಗೆಲ್ಗೆ’.
Last Updated 17 ಡಿಸೆಂಬರ್ 2023, 0:30 IST
ಸರಿಗನ್ನಡಂ ಗೆಲ್ಗೆ | ಪರಂಪರೆ ಮೀರಿದ ರಚನಾ ಕ್ರಮ

ಮಕ್ಕಳ ಸಾಹಿತ್ಯ | ಮಕ್ಕಳಿಗಾಗಿ ಯಾರು ಬರೆಯಬೇಕು?

ಮಕ್ಕಳಿಗಾಗಿ ಯಾರು ಬರೆಯಬೇಕು ಎನ್ನುವುದು ಚಿಂತಿಸಬೇಕಾದ ವಿಷಯ. ಮಕ್ಕಳಿಗಾಗಿ ಮಕ್ಕಳೇ ಬರೆಯಬೇಕೆಂದು ವಾದ ಮಾಡುವವರು ಇದ್ದಾರೆ. ಅದೇ ನಿಜವಾದ ಮಕ್ಕಳ ಸಾಹಿತ್ಯ, ದೊಡ್ಡವರು ಬರೆದಾಗ ಅವರು ಎಷ್ಟೇ ಪರಕಾಯಪ್ರವೇಶ ಚತುರರಾದರೂ ಮಕ್ಕಳ ಸಹಜ ಮುಗ್ಧತೆ ಅಲ್ಲಿ ಬರುವುದು ಸಾಧ್ಯವಿಲ್ಲ ಎನ್ನುವುದು ‘ಮಕ್ಕಳ ಸಾಹಿತ್ಯ ಮಕ್ಕಳಿಂದ’ ಎಂದು ವಾದಿಸುವವರ ಮುಖ್ಯ ನಿಲುವು.
Last Updated 12 ನವೆಂಬರ್ 2022, 19:30 IST
ಮಕ್ಕಳ ಸಾಹಿತ್ಯ | ಮಕ್ಕಳಿಗಾಗಿ ಯಾರು ಬರೆಯಬೇಕು?

ವಿದ್ಯಾರ್ಥಿ ಭವನ – ಮುದ ಮೂಡಿಸುವ ಪ್ರಹಸನ

ಇತ್ತೀಚೆಗೆ ವಿದ್ಯಾರ್ಥಿಭವನದ ಮಿತ್ರರಾದ ಅರುಣ ಅವರು ನನ್ನನ್ನು ಸಂಪರ್ಕಿಸಿ, ತಮ್ಮ ಹೋಟೆಲ್ ಬಗ್ಗೆಯೇ ಒಂದು ನಾಟಕ ಸಿದ್ಧವಾಗಿದೆಯೆಂದೂ, ಅದರ ಪ್ರಯೋಗ ಚೌಡಯ್ಯ ಸ್ಮಾರಕ ಭವನದಲ್ಲಿ ಇರುವುದೆಂದೂ, ಆ ಪ್ರಯೋಗಕ್ಕೆ ತಪ್ಪದೆ ಬರಬೇಕೆಂದೂ ಹಕ್ಕೊತ್ತಾಯ ಮಂಡಿಸಿದರು! ನಾನೂ ನನ್ನ ಕವಿಮಿತ್ರರಾದ ಲಕ್ಷ್ಮಣರಾಯರೂ ಹೋಟೆಲ್ ಒಂದರ ಬಗ್ಗೆ ಎಂಥ ನಾಟಕ ಮಾಡುವರು... ಕರೆದರಲ್ಲಾ ಎಂದು ಹೋಗಬೇಕಷ್ಟೆ ಎಂದು ಮಾತಾಡಿಕೊಂಡೆವು.
Last Updated 4 ಜೂನ್ 2022, 20:15 IST
ವಿದ್ಯಾರ್ಥಿ ಭವನ – ಮುದ ಮೂಡಿಸುವ ಪ್ರಹಸನ

ಕನ್ನಡವನ್ನು ನೆತ್ತಿಯ ಮೇಲಿಟ್ಟು ಮೆರೆಸಿದ ‘ಜೀವಿ’

ಜಿ.ವಿ. ಎಂಬ ಸಂಕ್ಷಿಪ್ತನಾಮದಿಂದ ಲೋಕಪ್ರಿಯರಾದ ಗಂಜಾಮ್ ವೆಂಕಟಸುಬ್ಬಯ್ಯನವರು (23.8.1913- 19.4.2021) ಈಗ ನಮ್ಮೊಂದಿಗೆ ಭೌತಿಕವಾಗಿ ಇಲ್ಲ ಎನ್ನುವುದು ನಮ್ಮಂಥ ಅವರ ಅಭಿಮಾನಿಗಳಿಗೆ ನುಂಗಲಾಗದ ತುತ್ತು. ಪಾಂಡಿತ್ಯ ಮತ್ತು ರಸಿಕತೆಯ ಸಂಗಮವಾಗಿದ್ದ ಶ್ರೀಯುತರು, ದಾರಿ ಮುಗಿಯಿತು ಎನ್ನಿಸಿದಾಗಲೆಲ್ಲ, ಕೈ ಮರದಂತೆ ನಮಗೆ ಭಾಷೆ ಮತ್ತು ಸಾಹಿತ್ಯದ ವಿಷಯದಲ್ಲಿ ದಿಕ್ಕು ತೆರೆಯುತ್ತಿದ್ದವರು. 108 ವರ್ಷಗಳ ತುಂಬು ಜೀವನ ನಡೆಸಿ ಈಗ ಇಹಲೋಕಕ್ಕೆ ವಿದಾಯ ಹೇಳಿ ಕಂಡರಿಯದ ಹೊಸ ಲೋಕದ ಅನ್ವೇಷಣೆಗೆ ಹೊರಟಿದ್ದಾರೆ.
Last Updated 19 ಏಪ್ರಿಲ್ 2021, 21:40 IST
ಕನ್ನಡವನ್ನು ನೆತ್ತಿಯ ಮೇಲಿಟ್ಟು ಮೆರೆಸಿದ ‘ಜೀವಿ’

ತಿನ್ನುಬಾಕ ಸಿಂಗಪುರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಬರಹ

ಸಿಂಗಪುರದಲ್ಲಿ ಎಲ್ಲೆಲ್ಲೂ ತಿನ್ನುವ ಮಳಿಗೆಗಳಿವೆ. ಈ ತಿನ್ನುದಾಣಗಳು ಬೆಂಗಳೂರಿನ ಬಿಡಿ ಬಿಡಿ ಹೋಟೆಲ್ಲುಗಳಂತೆ ಅಲ್ಲ. ಇಲ್ಲಿನ ಮಾಲುಗಳಂತೆ ಅಲ್ಲಿ ಬೃಹತ್- ತಿನ್ದಾಣಗಳಿವೆ. ಅಲ್ಲಿ ಥರಾವರಿ ತಿನಿಸುಗಳನ್ನು ಬಿಸಿ ಬಿಸಿಯಾಗಿ ತಯಾರಿಸಿ ಕೊಡುವ ವ್ಯವಸ್ಥೆಯೂ ಇದೆ.
Last Updated 13 ಅಕ್ಟೋಬರ್ 2019, 4:32 IST
ತಿನ್ನುಬಾಕ ಸಿಂಗಪುರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಬರಹ

ಆರಂಭ

ಸಾಕಿ ಸಲಹಿದಜ್ಜಿಯರೊಬ್ಬೊಬ್ಬರಾಗಿ ಏಕೀ ಬದುಕ ದಂದುಗ ಸಾಕಪ್ಪಾಸಾಕೆಂದು ಮುಪ್ಪಡಿಸಿ ಅಲ ಸಿಕೆ ವ್ಯಾಧಿಯಿಂದಳಿದರು.
Last Updated 22 ಜೂನ್ 2019, 19:30 IST
ಆರಂಭ

ಮರಳುಗಾಡಿನ ಹೂವು

ಸಿರಿವಂತಿಕೆಗೆ, ಅದ್ಭುತ ವಾಸ್ತುವಿನ್ಯಾಸಗಳಿಗೆ ಹೆಸರಾದ ದೇಶ ಕತಾರ್. ಸಸ್ಯಶ್ಯಾಮಲೆಯ ಇನ್ನೊಂದು ಮುಖವನ್ನು ಕಾಣಿಸುವ ಈ ಅದ್ಭುತ ದೇಶದ ಪುಟ್ಟ ಪ್ರವಾಸ ಕಥನ, ವಿದೇಶಿ ನೆಲದಲ್ಲಿನ ಕನ್ನಡ ಡಿಂಡಿಮದ ಅನುರಣನದ ಅಭಿವ್ಯಕ್ತಿಯೂ ಹೌದು. ಪ್ರವಾಸ ಪ್ರಬಂಧಗಳ ಮಾದರಿಯ ರೂಪದಲ್ಲಿ ಕಾಣಬಹುದಾದ ಈ ಬರಹ ಕತಾರ್‌ನ ವಿಶಿಷ್ಟ ಸಂಸ್ಕೃತಿಯನ್ನು ಒಂದು ಭಾವಗೀತೆಯಂತೆ ಚಿತ್ರಿಸುತ್ತದೆ.
Last Updated 19 ಡಿಸೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT