ಅಹಮದಾಬಾದ್: ಟೀಂ ಇಂಡಿಯಾ ಆಟಗಾರರು ಅಹಂಕಾರ ಬಿಟ್ಟು, ಪಿಚ್ಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಟಿ–20 ವಿಶ್ವಕಪ್ನ ಸೂಪರ್–8 ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳ ಹೀನಾಯ ಸೋಲನುಭವಿಸಿತ್ತು. ಅದರ ನಂತರ, ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ಭಾರತದ ಬ್ಯಾಟರ್ಗಳು ದಕ್ಷಿಣ ಆಫ್ರಿಕಾದ ಇನಿಂಗ್ಸ್ ಅನ್ನು ಗಮನಿಸಬೇಕು. ಆರಂಭಿಕ ವಿಕೆಟ್ ಬಿದ್ದರೂ ಕೂಡ ಮಿಲ್ಲರ್ ಹಾಗೂ ಬ್ರೇವಿಸ್ 97 ರನ್ಗಳ ಜೊತೆಯಾಟವಾಡಿದರು. ಆ ಶೈಲಿಯ ಆಟವನ್ನು ಟೀಂ ಇಂಡಿಯಾದ ಬ್ಯಾಟರ್ಗಳು ಆಡಬೇಕಿದೆ ಎಂದು ಹೇಳಿದ್ದಾರೆ.

ಆದರೆ, ಭಾರತದ ಬ್ಯಾಟರ್ಗಳು ಪಿಚ್ಗೆ ಅನುಗುಣವಾಗಿ ಆಡಲಿಲ್ಲ. ಪ್ರತಿಯೊಂದು ಎಸೆತವನ್ನು ಬೌಂಡರಿ ಗೆರೆ ದಾಟಿಸಲು ಪ್ರಯತ್ನಿಸುವ ಮೂಲಕ ವಿಕೆಟ್ ಒಪ್ಪಿಸಿದರು. ಬ್ಯಾಟರ್ಗಳ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಪ್ರತಿಬಾರಿಯೂ ಪವರ್ ಪ್ಲೇನಲ್ಲಿ 70 ರನ್ ಗಳಿಸುವ ಅವಶ್ಯಕತೆಯಿಲ್ಲ. ಅಹಮದಾಬಾದ್ನಂತಹ ಪಿಚ್ನಲ್ಲಿ 55 ರಿಂದ 60 ರನ್ ಕೂಡ ಉತ್ತಮ ಮೊತ್ತ. ಜಿಂಬಾಬ್ವೆ ತಂಡದಲ್ಲಿ ಹೆಚ್ಚಿನ ಎಡಗೈ ಬ್ಯಾಟರ್ಗಳಿರುವ ಕಾರಣ ಮುಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.