ಬಾಯ್ತೆರೆದಿರುವ ಮ್ಯಾನ್ಹೋಲ್
ಬೆಂಗಳೂರು ನಗರದ ಕೇಂದ್ರ ಎಂದೇ ಬಿಂಬಿತವಾಗಿರುವ ಎಂ.ಜಿ ರಸ್ತೆಯ ಹಿಂಭಾಗವಿರುವ ಚರ್ಚ್ ಸ್ಟ್ರೀಟ್ನಲ್ಲಿ ಕಳೆದ ಒಂದು ತಿಂಗಳಿನಿಂದ ಮ್ಯಾನ್ಹೋಲ್ ಬಾಯಿ ತೆರೆದುಕೊಂಡಿದೆ. ರಸ್ತೆ ಹಾಗೂ ಪಾದಚಾರಿ ಮಾರ್ಗ ಎರಡಕ್ಕೂ ಹೊಂದಿಕೊಂಡಿರುವಂತೆ ಇರುವ ಈ ಮ್ಯಾನ್ಹೋಲ್ ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ರಾತ್ರಿವೇಳೆ ಸಂಚರಿಸುವವರಿಗೆ ತುಂಬಾ ಕಷ್ಟವಾಗುತ್ತಿದೆ.Last Updated 13 ಏಪ್ರಿಲ್ 2015, 19:30 IST