ಎಲ್ಲ ಗಂಡಸರಂತಾಗಿಬಿಟ್ಟನಲ್ಲ...
ಏಕೆ ಸಹಿಸಿದೆ ಸೀತೆ...?
ಬಿರುನುಡಿಯ ಅಪವಾದಕೆ
ಮರು ನುಡಿಯದೆ...
ಹೊನ್ನ ಸುಪ್ಪತ್ತಿಗೆಯ ಸರಿಸಿ
ಕಾನನದಿ ಕಲ್ಲ ಹಾದಿಯ
ಸವೆಸಿ ಬಳಲಿ ಬಸವಳಿಯಲಿಲ್ಲವೇ
ಕೇವಲ ಪತಿಯ ಪ್ರೇಮಕೆ...
ನಿನ್ನ ತ್ಯಾಗ ಪ್ರೇಮಕೆ ಯಃಕಶ್ಚಿತ
ಗೌರವ ನಿರೀಕ್ಷಣೆಯಿಲ್ಲವೇ?...
ನೀ ಎಂದೂ ತಪ್ಪಿಲ್ಲ...
ಕಾಯ ವಾಚಾ ಮನಸಾ
ಗರ್ಭ ಧರೆಯ ಮೊಳಕೆಯ...
ಸಮಯಕ್ಕೂ ನೆನಪಿಸಬಾರದೆ...?
ಧರ್ಮೇಚ ಅರ್ಥೇಚ ಕಾಮೇಚ...
ಅವನೇ ಕೊಟ್ಟ ಮಾತು.
ಯಾಕೆ ಧಿಕ್ಕರಿಸಲಿಲ್ಲ ಸೀತೆ...
ಪ್ರಜಾಪತಿಯೊಂದೆ...Last Updated 22 ಡಿಸೆಂಬರ್ 2012, 19:59 IST