ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್ ಇಂಡೀಸ್‌ನ ಡೆವೊನ್ ಥಾಮಸ್‌ಗೆ 5 ವರ್ಷ ನಿಷೇಧ

Published 2 ಮೇ 2024, 19:03 IST
Last Updated 2 ಮೇ 2024, 19:03 IST
ಅಕ್ಷರ ಗಾತ್ರ

ಲಂಡನ್: ಭ್ರಷ್ಟಾಚಾರ ವಿರೋಧಿ ನಿಯಮಗಳ ಏಳು ಉಲ್ಲಂಘನೆಗಳನ್ನು ಒಪ್ಪಿಕೊಂಡ ಬಳಿಕ ವೆಸ್ಟ್ ಇಂಡೀಸ್ ಬ್ಯಾಟರ್‌ ಡೆವೊನ್ ಥಾಮಸ್ ಅವರನ್ನು ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗುರುವಾರ ಪ್ರಕಟಿಸಿದೆ.

ನಿಷೇಧದ ಕೊನೆಯ 18 ತಿಂಗಳುಗಳನ್ನು ಅಮಾನತುಗೊಳಿಸಲಾಗಿದ್ದು, ಶಿಕ್ಷೆಯು ಒಂದು ವರ್ಷ ಪೂರ್ವಾನ್ವಯವಾಗಿದೆ ಎಂದು ಪರಿಗಣಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. 

2009 ರಿಂದ 2022 ರವರೆಗೆ ಎಲ್ಲಾ ಮೂರು ಅಂತರರಾಷ್ಟ್ರೀಯ ಮಾದರಿಗಳಲ್ಲಿ 34 ಬಾರಿ ಆಡಿರುವ ಥಾಮಸ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್ ಮತ್ತು ಅಬುಧಾಬಿ ಟಿ10 ಎಂಬ ಮೂರು ಪ್ರತ್ಯೇಕ ಪಂದ್ಯಾವಳಿಗಳಲ್ಲಿ ಅಪರಾಧಗಳನ್ನು ಮಾಡಿದ್ದಾರೆ.

34 ವರ್ಷದ ಥಾಮಸ್ ಅವರು ಶ್ರೀಲಂಕಾ ಮೂಲದ ಪಂದ್ಯಾವಳಿಯಲ್ಲಿ ಮ್ಯಾಚ್-ಫಿಕ್ಸಿಂಗ್ ಯತ್ನಗಳಲ್ಲಿ ಭಾಗಿಯಾಗಲು ಸಂಚು ರೂಪಿಸಿದ್ದಕ್ಕಾಗಿ ತಾನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವುದು  ಆರೋಪಗಳಲ್ಲಿ ಅತ್ಯಂತ ಗಂಭೀರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT