ಪುಣೆ: ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯಲು ಯಶಸ್ವಿ ಜೈಸ್ವಾಲ್ ಅವರು ತಮಗೆ ಸಿಕ್ಕ ಅವಕಾಶಗಳನ್ನು ಅಮೋಘವಾಗಿ ಬಳಸಿಕೊಳ್ಳುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಬಿ ಗುಂಪಿನ ಪಂದ್ಯದಲ್ಲಿ ಅವರು 48 ಎಸೆತಗಳಲ್ಲಿ ಶತಕ ಹೊಡೆದು ತಮ್ಮ ಸಾಮರ್ಥ್ಯವನ್ನು ಮೆರೆದರು.

ಯಶಸ್ವಿ (101; 50ಎಸೆತ, 4X16, 6X1) ಆಟದ ಬಲದಿಂದ ಮುಂಬೈ ತಂಡವು 4 ವಿಕೆಟ್ಗಳಿಂದ ಹರಿಯಾಣವನ್ನು ಸೋಲಿಸಿತು.

ಟಾಸ್ ಗೆದ್ದ ಹರಿಯಾಣ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂಕಿತ್ ಕುಮಾರ್ (89; 42ಎ, 4X10, 6X6) ಮತ್ತು ನಿಶಾಂತ್ ಸಿಂಧು (ಔಟಾಗದೇ 63, 38ಎ, 4X4, 6X3) ಅವರ ಅರ್ಧಶತಕಗಳ ಬಲದಿಂದ ಹರಿಯಾಣ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 234 ರನ್ ಗಳಿಸಿತು.

ಅದಕ್ಕುತ್ತರವಾಗಿ ಮುಂಬೈ ತಂಡವು 17.3 ಓವರ್ಗಳಲ್ಲಿ 6 ವಿಕೆಟ್ಗಳಿಗೆ 238 ರನ್ ಗಳಿಸಿ ಜಯಿಸಿತು. ಅದಕ್ಕೆ ಕಾರಣವಾಗಿದ್ದು ಯಶಸ್ವಿ ಶತಕ. ಅವರೊಂದಿಗೆ ಸರ್ಫರಾಜ್ ಖಾನ್ (64; 25ಎ, 4X9, 6X3) ಅವರು ಕೂಡ 256ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಯಶಸ್ವಿ ಅವರನ್ನು ತಂಡದಲ್ಲಿ ಸೇರ್ಪಡೆ ಮಾಡದಿರುವುದರ ಕುರಿತು ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿದೆ.

ಸಂಕ್ಷಿಪ್ತ ಸ್ಕೋರು:

ಹರಿಯಾಣ: 20 ಓವರ್ಗಳಲ್ಲಿ 3ಕ್ಕೆ234 (ಅರ್ಷ ರಂಗಾ 26, ಅಂಕಿತ್ ಕುಮಾರ್ 89, ನಿಶಾಂತ್ ಸಿಂಧು ಔಟಾಗದೇ 63, ಸಮಂತ್ ಜಾಖಡ್ 31, ಸುಮಿತ್ ಕುಮಾರ್ ಔಟಾಗದೇ 16,ಸಾಯಿರಾಜ್ ಪಾಟೀಲ 44ಕ್ಕೆ2)

ಮುಂಬೈ: 17.3 ಓವರ್ಗಳಲ್ಲಿ 6ಕ್ಕೆ238 (ಯಶಸ್ವಿ ಜೈಸ್ವಾಲ್ 101, ಅಜಿಂಕ್ಯ ರಹಾನೆ 21, ಸರ್ಫರಾಜ್ ಖಾನ್ 64, ಸಮಂತ್ ಜಾಖಡ್ 42ಕ್ಕೆ2) ಫಲಿತಾಂಶ:ಮುಂಬೈ ತಂಡಕ್ಕೆ 4 ವಿಕೆಟ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.