ಭಾನುವಾರ, 14 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
07/12/2025 - 13/12/2025
ವಾರ ಭವಿಷ್ಯ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರವಾಗಿರಿ
Published 13 ಡಿಸೆಂಬರ್ 2025, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವಾರದ ಆರಂಭದಲ್ಲಿ ಹಲವಾರು ಯೋಜನೆಗಳು ನಿಮ್ಮ ತಲೆಯಲ್ಲಿರುತ್ತವೆ, ಸರಿಯಾಗಿ ಆಯ್ಕೆ ಮಾಡಿ ಮುಂದುವರಿಸಿ. ಆದಾಯವು ಕಡಿಮೆ ಇದ್ದರೂ, ಖರ್ಚಿಗೆ ತಕ್ಕಷ್ಟು ಬರುತ್ತದೆ. ಗುರು ಹಿರಿಯರ ವಿಶ್ವಾಸ ಸಂಪಾದಿಸಲು ಯತ್ನ ಮಾಡುವಿರಿ. ವ್ಯವಹಾರಗಳಲ್ಲಿ ನಷ್ಟವಾಗುವ ಸಂಭವವಿದೆ ಎಚ್ಚರ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ.
ವೃಷಭ
ಮನಸ್ಸಿನಲ್ಲಿ ಅನಿಶ್ಚಿತತೆ ಇರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಂತೆ ಇರುತ್ತದೆ. ಕೃಷಿಭೂಮಿ ವ್ಯವಹಾರದಲ್ಲಿ ಸ್ವಲ್ಪ ಆದಾಯವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುತ್ತದೆ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಹಣ್ಣು ತರಕಾರಿ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ವೃದ್ಧಿ ಇರುತ್ತದೆ. ಕೃಷಿಯುತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರಕುತ್ತದೆ.
ಮಿಥುನ
ಸಮಾಜದಿಂದ ಗೌರವ ಸಿಗುವ ಸಾಧ್ಯತೆಗಳಿವೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಕೆಲಸಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ಭೂಮಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಮಾಣದ ಫಲಿತಾಂಶವಿರುವುದಿಲ್ಲ. ಕೆಲವರಿಗೆ ತಲೆನೋವು ಅಥವಾ ಕಣ್ಣಿನ ತೊಂದರೆ ಕಾಣಿಸಿಕೊಳ್ಳಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರವಾಗಿರಿ.
ಕರ್ಕಾಟಕ
ಬಹಳ ಶಾಂತ ಮನಸ್ಥಿತಿ ನಿಮ್ಮಲ್ಲಿ ಇರುತ್ತದೆ. ಧಾರ್ಮಿಕ ಉಪನ್ಯಾಸ ನೀಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಹಾಗೂ ನೀರಿನ ವ್ಯವಹಾರಗಳಲ್ಲಿ ಹೆಚ್ಚು ಆದಾಯವಿರುತ್ತದೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡುವಿರಿ. ಕಾನೂನಾತ್ಮಕ ವ್ಯವಹಾರಗಳಲ್ಲಿ ಸೂಕ್ತ ಮಾರ್ಗದರ್ಶನ ಪಡೆದು ವ್ಯವಹರಿಸಿ.
ಸಿಂಹ
ವಾರದ ಆರಂಭದಲ್ಲಿ ಕೆಲಸ ಮಾಡುವ ಮನಸ್ಸು ಇರುವುದಿಲ್ಲ. ಆದಾಯವು ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಬಂಧುಗಳೊಡನೆ ವಿಶ್ವಾಸ ವೃದ್ಧಿ ಮಾಡಿಕೊಳ್ಳುವುದು ಉತ್ತಮ. ಆಸ್ತಿ ಸಂಬಂಧಿತ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚುಹಣ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ.
ಕನ್ಯಾ
ಆದಾಯವು ಕಡಿಮೆ ಇದ್ದರೂ ನಿಮ್ಮ ಶ್ರಮದಿಂದ ಹೆಚ್ಚು ಮಾಡಿಕೊಳ್ಳಬಹುದು. ಮನೆ ಬದಲಾವಣೆ ವಿಚಾರ ಮುನ್ನೆಲೆಗೆ ಬರುತ್ತದೆ. ಕ್ರೀಡಾಪಟುಗಳಿಗೆ ಉತ್ತೇಜನ ದೊರೆತು ಸಾಧನೆ ಮಾಡುವ ಸಂದರ್ಭವಿದೆ. ನಿಮ್ಮ ಅನುಕೂಲಕ್ಕಾಗಿ ಎಲ್ಲರನ್ನೂ ಓಲೈಸುವಿರಿ. ವಾಹನ ಮಾರಾಟಗಾರರಿಗೆ ವ್ಯಾಪಾರ ಈಗ ವೃದ್ಧಿಸುತ್ತದೆ.
ತುಲಾ
ದೃಢ ನಿರ್ಧಾರಗಳು ನಿಮ್ಮಲ್ಲಿರಲಿ. ಆದಾಯವು ಸ್ವಲ್ಪ ಉತ್ತಮಗೊಳ್ಳುತ್ತದೆ. ಒರಟು ಮಾತಿನಿಂದ ನಿಮಗೆ ಅನಾನುಕೂಲ. ನಿಮ್ಮ ಉನ್ನತ ಶಿಕ್ಷಣ ಅಥವಾ ಉನ್ನತ ಅಧ್ಯಯನಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು. ಕೈಸಾಲಗಳನ್ನು ತೀರಿಸಿ ನಿರಾಳರಾಗುವಿರಿ. ವಿದೇಶದಿಂದ ಮಕ್ಕಳ ಆಗಮನವನ್ನು ನಿರೀಕ್ಷಿಸುತ್ತಿರುವಿರಿ. ಮನೆಯ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಸಂಗಾತಿಗೆ ಸಹಾಯ ಮಾಡುವಿರಿ.
ವೃಶ್ಚಿಕ
ನಿಮ್ಮ ಬುದ್ಧಿವಂತಿಕೆ ಮತ್ತು ವಿವೇಚನೆಯನ್ನು ಬಳಸಿ ಕೆಲಸ ಮಾಡುವಿರಿ. ಅನಿರೀಕ್ಷಿತ ಮೂಲದಿಂದ ಹಣ ದೊರೆತು ಸಂತಸವಾಗುವುದು. ಕೃಷಿಯಿಂದ ಹೆಚ್ಚು ಆದಾಯ ಬರುತ್ತದೆ. ಶತ್ರುಗಳನ್ನು ಸಾಕಷ್ಟು ಕಾಡುವಿರಿ. ಕೆಲವು ಹಂಗಾಮಿ ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಖಾಯಂ ಆಗಬಹುದು. ಗೃಹಾಲಂಕಾರ ವಸ್ತುಗಳನ್ನು ಕೊಳ್ಳುವ ಯೋಗವಿದೆ. ಕೃಷಿವಿಷಯದಲ್ಲಿ ನೂತನ ವಿಧಾನಗಳನ್ನು ಅಳವಡಿಸಿಕೊಂಡು ಪ್ರಯೋಗಶೀಲರಾಗುವಿರಿ.
ಧನು
ಮುನ್ನುಗ್ಗುವ ಉತ್ಸಾಹ ಬಹಳ ಹೆಚ್ಚಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಬಂಧುಗಳ ಸಹಕಾರ ಸಿಗುವುದು ಕಡಿಮೆ. ಸಂಸಾರದಲ್ಲಿನ ಸಂಕಷ್ಟಗಳು ಪರಿಹಾರಗೊಂಡು ಹೊಸಬೆಳಕು ಮೂಡುತ್ತದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕೆನ್ನುವವರಿಗೆ ಸೂಕ್ತ ಅವಕಾಶಗಳು ಇರುತ್ತವೆ. ಆರೋಗ್ಯದ ಬಗ್ಗೆ ನಿಗಾವಹಿಸಿರಿ. ಕೈಕೆಳಗಿನ ಕೆಲಸಗಾರರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳು ಆಗುತ್ತವೆ.
ಮಕರ
ವೃತ್ತಿ ಶ್ರದ್ಧೆಯಿಂದ ಎಲ್ಲರ ಗಮನ ಸೆಳೆಯುವಿರಿ. ವ್ಯವಹಾರಗಳಲ್ಲಿ ಸ್ವಲ್ಪ ಮುನ್ನಡೆ ಇರುತ್ತದೆ. ಸಂಗ್ರಹಿಸಿಟ್ಟ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭ ಇರುತ್ತದೆ. ವಿದೇಶಿ ವ್ಯವಹಾರಗಳಿಂದ ಆದಾಯಬರುತ್ತದೆ. ಮಕ್ಕಳಿಗಾಗಿ ವಸ್ತುಗಳನ್ನು ಖರೀದಿಮಾಡುವಿರಿ. ವ್ಯಾಪಾರದಲ್ಲಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ. ಸಹೋದ್ಯೋಗಿಗಳ ಸಹಕಾರದಿಂದ ವೃತ್ತಿಯಲ್ಲಿ ಏಳಿಗೆ ಇರುತ್ತದೆ.
ಕುಂಭ
ಆದಾಯವು ಕಡಿಮೆ ಇರುತ್ತದೆ. ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆಯಿಂದ ಹೆಚ್ಚು ಹಣಗಳಿಸುವ ಯೋಗವಿದೆ. ತಂದೆ, ತಾಯಿ ಮಕ್ಕಳಿಗಾಗಿ ವಿದೇಶಕ್ಕೆ ಅಥವಾ ದೂರದೂರಿಗೆ ಪ್ರಯಾಣ ಬೆಳೆಸಬೇಕಾಗಬಹುದು. ಅಧ್ಯಯನದಲ್ಲಿನ ಆಸಕ್ತಿಯಿಂದ ಉತ್ತಮ ಭವಿಷ್ಯ ನಿರ್ಮಾಣವಾಗುವುದು. ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಯಲ್ಲಿರುವ ಹಿರಿಯ ಅಧಿಕಾರಿಗಳು ಎಚ್ಚರವಾಗಿರಿ.
ಮೀನ
ಆದಾಯದಲ್ಲಿ ಸ್ವಲ್ಪ ಕಡಿಮೆಯಾಗಿ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಹೊಸ ಆದಾಯದ ಮೂಲಗಳತ್ತ ಗಮನ ಹರಿಸುವಿರಿ. ನೀರಾವರಿ ಭೂಮಿಯನ್ನು ಹೊಂದುವ ಯೋಗವಿದೆ. ಲೆಕ್ಕಪತ್ರ ಪರೀಕ್ಷಕರಿಗೆ ಉತ್ತಮ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಲಾಭವನ್ನು ಕಾಣಬಹುದು.
ADVERTISEMENT
ADVERTISEMENT