ಹೈದರಾಬಾದ್: 'ಮುತ್ತಿನ ನಗರಿ' ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಆರಂಭಿಸಿರುವ 'GOAT Tour of India' ಪ್ರವಾಸದ ಮೊದಲ ದಿನ (ಶನಿವಾರ, ಡಿ.13) ಬೆಳಿಗ್ಗೆ ಕೋಲ್ಕತ್ತದಲ್ಲಿ ಗದ್ದಲವಾದರೂ, ಸಂಜೆ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು.

ಹೈದರಾಬಾದ್ಗೆ ಬಂದ ಮೆಸ್ಸಿ ಅವರನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಆದರದಿಂದ ಸ್ವಾಗತಿಸಿದರು. ನಂತರ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಫುಟ್ಬಾಲ್ ಆಟಗಾರನಂತೆ ಪೋಷಾಕು ಧರಿಸಿ ಗಮನ ಸೆಳೆದರು. ಅವರಿಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಥ್ ನೀಡಿದರು.

ಮೆಸ್ಸಿ, ರೊಡ್ರಿಗೊ ಡಿ ಪೌಲ್, ಲೂಯಿಸ್ ಸೂರೆಜ್ ಅವರು ಕೆಲಹೊತ್ತು ಫುಟ್ಬಾಲ್ ಆಡುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.
.ಮೆಸ್ಸಿ ಭೇಟಿ ನಿರಾಕರಿಸಿದ ಭಾರತದ ಫುಟ್ಬಾಲ್ ಸ್ಟಾರ್ ಸುನಿಲ್ ಚೆಟ್ರಿ: ಕಾರಣವೇನು?.GOAT Tour: ಇಂದು ಮುಂಬೈ, ನಾಳೆ ದೆಹಲಿಗೆ ಮೆಸ್ಸಿ; ಕಾರ್ಯಕ್ರಮಗಳ ಪಟ್ಟಿ ಹೀಗಿದೆ.ಕೋಲ್ಕತ್ತ | ಮೆಸ್ಸಿ ನೋಡಲು ಸಿಗದ ಅವಕಾಶ; ಅಭಿಮಾನ ಆಕ್ರೋಶಕ್ಕೆ ತಿರುಗಿದ್ದು ಹೇಗೆ?.ದಿಗ್ಗಜರ ಸಮಾಗಮ: ಮೆಸ್ಸಿಯನ್ನು ಭೇಟಿಯಾಗಲಿದ್ದಾರೆ ಸಚಿನ್, ಕೊಹ್ಲಿ, ರೋಹಿತ್!.
ನೆಟ್ಟಿಗರ ಮನಗೆದ್ದ ರಾಹುಲ್
ಕಾರ್ಯಕ್ರಮದ ಕೊನೆಯಲ್ಲಿ ಫುಟ್ಬಾಲ್ ತಂಡಕ್ಕೆ ಮೆಸ್ಸಿ ಟ್ರೋಫಿ ನೀಡಿದರು. ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು, ಯುವ ಆಟಗಾರರು ಬಂದರು. ಈ ವೇಳೆ, ಮೆಸ್ಸಿ ಅವರೊಂದಿಗೆ ನಿಂತಿದ್ದ ರಾಹುಲ್ ಗಾಂಧಿ, ಹಿಂದೆ ಸರಿದು ಆಟಗಾರರಿಗೆ ಜಾಗ ಮಾಡಿಕೊಟ್ಟರು.

ಈ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ರಾಹುಲ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಹುಲ್, ರೆಡ್ಡಿಗೆ ಜೆರ್ಸಿ

ಕಾರ್ಯಕ್ರಮದ ವೇಳೆ ಮೆಸ್ಸಿ ಅವರು ತಮ್ಮ ಹಸ್ತಾಕ್ಷರ ಇರುವ ಅರ್ಜೆಂಟೀನಾ ತಂಡದ ಫುಟ್ಬಾಲ್ ಜೆರ್ಸಿಯನ್ನು ರಾಹುಲ್ ಗಾಂಧಿ ಹಾಗೂ ರೇವಂತ ರೆಡ್ಡಿ ಅವರಿಗೆ ಉಡುಗೊರೆಯಾಗಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.