ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೂರನೇ ಪಂದ್ಯವು ಭಾನುವಾರ (ಡಿ.14) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, 3ನೇ ಟಿ–20 ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯಿದೆ. ಹಿಬ್ಬನಿಯ ಕಾರಣ, ಪಂದ್ಯದಲ್ಲಿ ಟಾಸ್ ಮಹತ್ತರ ಪಾತ್ರವಹಿಸಲಿದೆ.

ಇದುವರೆಗೂ ಧರ್ಮಶಾಲಾ ಮೈದಾನದಲ್ಲಿ ಟೀಂ ಇಂಡಿಯಾಗೆ ಮಿಶ್ರಫಲ ದೊರಕಿದೆ. ಈ ಮೈದಾನದಲ್ಲಿ ಒಟ್ಟು 2 ಟೆಸ್ಟ್ ಪಂದ್ಯಗಳು ಜರುಗಿದ್ದು, 2ರಲ್ಲೂ ಭಾರತ ಗೆಲುವು ಕಂಡಿದೆ. 5 ಏಕದಿನ ಪಂದ್ಯಗಳನ್ನು ಆಡಿದ್ದು 3ರಲ್ಲಿ ಗೆಲವು ಸಾಧಿಸಿದೆ.
.IPL 2026 Auction:ಹರಾಜಿನಲ್ಲಿ ಕೋಟಿ ಗಿಟ್ಟಿಸಿಕೊಳ್ಳಬಹುದಾದ ಪ್ರಮುಖ ಆಟಗಾರರಿವರು.
ಧರ್ಮಶಾಲಾ ಮತ್ತು ಚುಟುಕು ಕ್ರಿಕೆಟ್

ಧರ್ಮಶಾಲಾ ಮೈದಾನವು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ದೇಶಿ ಟೂರ್ನಿಯಲ್ಲಿ ಹಿಮಾಚಲ ಪ್ರದೇಶದ ತವರು ಮೈದಾನವಾಗಿದೆ.

ಇದುವರೆಗೂ ಈ ಮೈದಾನದಲ್ಲಿ 11 ಅಂತರರಾಷ್ಟ್ರೀಯ ಟಿ–20 ಪಂದ್ಯಗಳು ಜರುಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡ 4 ಬಾರಿ ಹಾಗೂ ಗುರಿ ಬೆನ್ನತ್ತಿದ ತಂಡವು 6 ಬಾರಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ತಂಡದ ಸರಾಸರಿ 137 ರನ್ ಇದ್ದರೆ, ಚೇಸಿಂಗ್ ವೇಳೆ 128 ರನ್ ಸರಾಸರಿ ಇದೆ.

ಭಾರತ ತಂಡವು ಈ ಮೈದಾನದಲ್ಲಿ 3 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆಲುವು ಸಾಧಿಸಿದ್ದರೆ, 1 ಪಂದ್ಯದಲ್ಲಿ ಸೋತಿದೆ. 2022ರಲ್ಲಿ ಈ ಕ್ರೀಡಾಂಗಣದಲ್ಲಿ ಭಾರತ ತಂಡವು ಕೊನೆಯ ಅಂತರರಾಷ್ಟ್ರೀಯ ಟಿ–20 ಪಂದ್ಯವನ್ನು ಆಡಿದ್ದು, ಶ್ರೀಲಂಕಾ ವಿರುದ್ಧ ಜಯ ಗಳಿಸಿತ್ತು.

ಧರ್ಮಶಾಲಾ ಮೈದಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾವು 200 ರನ್ ಗಳಿಸಿರುವುದು ಅತಿದೊಡ್ಡ ಮೊತ್ತವಾಗಿದೆ.

2015ರಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು ರೋಹಿತ್ ಶರ್ಮ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾವು 7 ವಿಕೆಟ್ಗಳ ಜಯ ಗಳಿಸಿತ್ತು.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯು 1–1ರಲ್ಲಿ ಸಮಬಲವಾಗಿದ್ದು, ಭಾರತವು ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ.
.IPL Auction|ಮ್ಯಾನೇಜರ್ ತಪ್ಪಿನಿಂದಾಗಿ ಬ್ಯಾಟರ್ ಆಗಿದ್ದೇನೆ: ಕ್ಯಾಮರೂನ್ ಗ್ರೀನ್.IPL Auction 2026: ಅನುಮಾನಾಸ್ಪದ ಬೌಲಿಂಗ್; ಸಂಕಷ್ಟದಲ್ಲಿ ಭಾರತೀಯ ಆಲ್ರೌಂಡರ್.ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರಲು ಸಿದ್ಧ: ತಿಲಕ್ ವರ್ಮಾ .ಹಳೆಯ ಘಟನೆಗಳ ನೆನಪಿಸಿದ ಸಾಲ್ಟ್ ಲೇಕ್ ಗಲಾಟೆ: ವಿಶ್ವಕಪ್ ವೇಳೆಯೂ ಆಗಿತ್ತು ಗಲಭೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.