ದಿನ ಭವಿಷ್ಯ | ಈ ರಾಶಿಯವರಿಗೆ ಉದ್ಯೋಗ ವಿಷಯದ ಚಿಂತೆ ದೂರಾಗುವುದು
Published 13 ಡಿಸೆಂಬರ್ 2025, 22:24 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಧನಾಗಮನದಲ್ಲಿ ವಿಳಂಬ ತೋರಿಬರಲಿದೆ. ಸಂಘ ಸಂಸ್ಥೆಗಳ ಹುದ್ದೆಯನ್ನು ಅಲಂಕರಿಸುವ ಅವಕಾಶ ಎದುರಾಗಲಿದೆ. ಸಣ್ಣ ಪ್ರಮಾಣದಲ್ಲಿ ನಿಮ್ಮ ವಾಹನಕ್ಕೆ ಅವಘಡಗಳಾಗುವ ಸಾಧ್ಯತೆ ಇದೆ.
ವೃಷಭ
ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ ಸಿಗುತ್ತದೆ. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಉಂಟಾಗುವುದು. ನಟ ನಟಿಯರಿಗೆ ವಿಪುಲ ಅವಕಾಶಗಳು ದೊರೆಯಲಿವೆ.
ಮಿಥುನ
ಸಿದ್ಧ ಉಡುಪುಗಳ ರಫ್ತು ವ್ಯಾಪಾರಗಳನ್ನು ನಡೆಸುವವರು ಲಾಭ ಹೊಂದುವಿರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿನ ಪ್ರಸಿದ್ಧಿಗಾಗಿ ಹೆಚ್ಚಿನ ತರಬೇತಿಯನ್ನು ಪಡೆಯಲು ಬೇಕಾದ ಮಾರ್ಗ ಹುಡುಕಿ, ಅಳವಡಿಸಿಕೊಳ್ಳುವುದು ಉತ್ತಮ.
ಕರ್ಕಾಟಕ
ಜಾಣ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿಯ ಲಾಭ ಪಡೆಯಬಹುದು. ಮನೆ ಜಾಗದ, ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಪರಿಸ್ಥಿತಿ ಬರುವುದು.
ಸಿಂಹ
ಕಾರಣಾಂತರದಿಂದ ಸಿಕ್ಕಂತಹ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ನಿಮ್ಮ ಜಾಣತನಕ್ಕೆ ಬಿಟ್ಟಿರುವ ವಿಚಾರ. ಅಪರಿಚಿತರ ಹತ್ತಿರ ನಿಮ್ಮ ಯಾವುದೇ ಗೌಪ್ಯತೆಯನ್ನು ಹಂಚಿಕೊಳ್ಳಬೇಡಿ.
ಕನ್ಯಾ
ಲೇವಾದೇವಿ ವ್ಯವಹಾರ ನೆಡೆಸುವವರು ವ್ಯವಹಾರದಲ್ಲಿ ಸ್ವಲ್ಪ ಪ್ರಮಾಣದ ನಷ್ಟ ಸಂಭವಿಸಿ ಹಿನ್ನಡೆಯನ್ನು ಕಾಣುವಂತಾಗಲಿದೆ. ರಾಜಕೀಯವಾಗಿ ಪ್ರಬಲಗೊಳ್ಳುವ ಅವಕಾಶಗಳು ಈ ದಿನದಂದು ಹೆಚ್ಚಲಿದೆ.
ತುಲಾ
ನಿಮ್ಮ ಏಕಾಗ್ರತೆಯ ಕೊರತೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ಉಂಟಾಗುತ್ತವೆ, ಅದರಿಂದಾಗಿ ನಷ್ಟ ಅನುಭವಿಸುವಿರಿ. ಆತ್ಮೀಯನಿಗೆ ಸಾಂತ್ವನ ಹೇಳ ಬೇಕಾಗಬಹುದು. ಉದ್ಯೋಗದ ವಿಷಯದ ಚಿಂತೆ ದೂರಾಗುವುದು.
ವೃಶ್ಚಿಕ
ಹಿರಿಯರು ನಿಮ್ಮ ಗಹನವಾದ ಸಮಸ್ಯೆಗಳಿಗೆ ತಕ್ಷಣ ಸುಲಭವಾದ ಪರಿಹಾರಗಳನ್ನು ತಿಳಿಸಿ ಕೊಡುವರು. ಸಹೋದರರಿಂದ ಬರಬೇಕಿದ್ದ ಹಣ ಹಿಂತಿರುಗಿ ಬರುವುದು. ಸೌಂದರ್ಯ ವಿನ್ಯಾಸಕರಿಗೆ ಇದು ಉತ್ತಮ ದಿನ.
ಧನು
ಕೆಲಸದ ಒತ್ತಡದಿಂದ ದೇಹಾಯಾಸ ತೋರಿಬಂದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಮ್ಮಲ್ಲಿರುವ ಅಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ಮನೆಯ ದಿನ ನಿತ್ಯದ ಖರ್ಚಿನಲ್ಲಿ ಹಿಡಿತವಿರಲಿ.
ಮಕರ
ಭೋಜನ ನಿಮಿತ್ತ ಮಾಡುವ ವೃತ್ತಿಗಿಂತ ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚಲಿದೆ ಅದರಲ್ಲಿಯೆ ನಿಮಗೆ ಹೆಚ್ಚಿನ ಲಾಭ. ಬೆಂಕಿ ಅನಾಹುತ ಸಂಭವಿಸಬಹುದು, ಜಾಗೃತರಾಗಿರಿ. ಸಾಮಾಜಿಕ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ.
ಕುಂಭ
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ನಿಮ್ಮ ಕಲ್ಪನೆಗಿಂತ ಅಧಿಕ ಕಮಿಶನ್ ದೊರೆಯಲಿದೆ. ಹೊಸ ಮನೆಯ ನಿರ್ಮಾಣ ಕಾರ್ಯಗಳು ಚುರುಕುಗತಿಯಲ್ಲಿ ಸಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧ್ಯ.
ಮೀನ
ಸಣ್ಣ ಪುಟ್ಟ ವಿಚಾರವಾಗಿ ಅತ್ತೆ ಸೊಸೆಯ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ವಾಹನ ರಿಪೇರಿಗಾಗಿ ಖರ್ಚು ಮಾಡಬೇಕಾಗುವುದು. ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭವಿದೆ.