ಹೈದರಾಬಾದ್: ‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೇ ಸಾಂಗವಾಗಿ ನೆರವೇರಿತು.
.Messi In India| ಹೈದರಾಬಾದ್ಗೆ ಆಗಮಿಸಿದ ಮೆಸ್ಸಿ: ಸ್ವಾಗತಿಸಿದ ಮುಖ್ಯಮಂತ್ರಿ.
ಕೋಲ್ಕತ್ತದ ಭೇಟಿಯ ನಂತರ ಅವರು ಶನಿವಾರ ಸಂಜೆ ಹೈದರಾಬಾದ್ಗೆ ಬಂದಿಳಿದರು. ಕೋಲ್ಕತ್ತದ ಸಾಲ್ಟ್ ಲೇಕ್ನಲ್ಲಿ ಅಭಿಮಾನಿಗಳ ಗದ್ದಲದ ಸುದ್ದಿಯಿಂದ ಹೈದರಾಬಾದಿನಲ್ಲಿ ತುಸು ಆತಂಕದ ವಾತಾವರಣ ಇತ್ತು. ಅಂತಹ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.
.ಮೆಸ್ಸಿ ಸುತ್ತಲೂ ರಾಜಕಾರಣಿಗಳ ದಂಡು: ಮೈದಾನಕ್ಕೆ ಬಾಟಲಿ,ಕುರ್ಚಿ ಎಸೆದ ಅಭಿಮಾನಿಗಳು.ಕೋಲ್ಕತ್ತ | ಮೆಸ್ಸಿ ಕಾರ್ಯಕ್ರಮದಲ್ಲಿ ಗದ್ದಲ: ಕ್ಷಮೆ ಕೋರಿದ ಮಮತಾ; ತನಿಖೆಗೆ ಆದೇಶ.
ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮ ತಮ್ಮ ನೆಚ್ಚಿನ ತಾರೆಯನ್ನು ಕಣ್ತುಂಬಿಕೊಂಡರು. ಸಂಜೆ 5.40ಕ್ಕೆ ನಗರಕ್ಕೆ ಬಂದರು. ತಾಜ್ ಫಲಕನುಮಾ ಪ್ಯಾಲೆಸ್ನಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮೆಸ್ಸಿ ಮತ್ತು ಸಂಗಡಿಗರನ್ನು ಸ್ವಾಗತಿಸಿದರು. ಹಸಿರುಬಣ್ಣದ ಅರ್ಧತೋಳಿನ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್, ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದ ಮೆಸ್ಸಿ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತು. ಸುಮಾರು ಒಂದು ಗಂಟೆ ಮೆಸ್ಸಿ ಅವರು ಕ್ರೀಡಾಂಗಣದಲ್ಲಿದ್ದರು.
.ಗದ್ದಲದ ನಡುವೆಯೂ ಇಬ್ಬರು ಅದೃಷ್ಟವಂತರ ಜೆರ್ಸಿಗೆ ಹಸ್ತಾಕ್ಷರ ಹಾಕಿದ ಮೆಸ್ಸಿ.GOAT: ಫುಟ್ಬಾಲ್ ತಾರೆ ಮೆಸ್ಸಿ ಮುಂಬೈ ಕಾರ್ಯಕ್ರಮಕ್ಕೆ ಭಾರಿ ಬಿಗಿ ಭದ್ರತೆ.
‘ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿರುವೆ. ನನಗೆ ಬಹಳ ಸಂತಸವಾಗಿದೆ’ ಎಂದು ಮೆಸ್ಸಿ ಹೇಳಿದರು.

ಈ ಸಂದರ್ಭದಲ್ಲಿ ಗೋಟ್ ಕಪ್ ಪೆನಾಲ್ಟಿ ಶೂಟೌಟ್ ನಲ್ಲಿ ಮೆಸ್ಸಿ ಅವರು ಮುಖ್ಯ ಮಂತ್ರಿ ರೆಡ್ಡಿಯೊಂದಿಗೆ ಆಡಿದರು. ಮಕ್ಕಳಿಗೆ ಫುಟ್ಬಾಲ್ ಕ್ಲಿನಿಕ್ ಕೂಡ ನಡೆಸಿಕೊಟ್ಟರು.

ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಮತ್ತು ರೆಡ್ಡಿ ಅವರು ಮೆಸ್ಸಿಯ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾದರು.
.ಕೋಲ್ಕತ್ತದಲ್ಲಿ ಮೆಸ್ಸಿ ಮೇನಿಯಾ: ನೆಚ್ಚಿನ ತಾರೆ ನೋಡಲು ಜನರ ನೂಕುನುಗ್ಗಲು.ಮೆಸ್ಸಿ ಕಾರ್ಯಕ್ರಮದ ವೇಳೆ ಅವ್ಯವಸ್ಥೆ: ಸಂಘಟನೆಯ ರೂವಾರಿ ಬಂಧನ.ಫುಟ್ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರನ್ನು ಭೇಟಿ ಮಾಡಿದ ನಟ ಶಾರುಖ್ ಖಾನ್.ಮೆಸ್ಸಿ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಿ: ಸರ್ಕಾರಕ್ಕೆ ರಾಜ್ಯಪಾಲರ ತಾಕೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.