ನವದೆಹಲಿ: ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಇಂದಿನಿಂದ (ಶನಿವಾರ) ಆರಂಭವಾಗಿದೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ಮೆಸ್ಸಿ ಅವರನ್ನು ಕೋಲ್ಕತ್ತದಲ್ಲಿ ಭೇಟಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
.ಮೆಸ್ಸಿ ಸುತ್ತಲೂ ರಾಜಕಾರಣಿಗಳ ದಂಡು: ಮೈದಾನಕ್ಕೆ ಬಾಟಲಿ,ಕುರ್ಚಿ ಎಸೆದ ಅಭಿಮಾನಿಗಳು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ನಟ ಶಾರುಖ್ ಅವರು ಲಯೊನೆಲ್ ಅವರನ್ನು ಸ್ವಾಗತಿಸಿ, ಅವರೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಆ ವೇಳೆ ಶಾರುಖ್ ಖಾನ್ ಅವರ ಕಿರಿಯ ಪುತ್ರ ಅಬ್ರಾಮ್ ಖಾನ್ ಕೂಡ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.

ಲಯೊನೆಲ್ ಅವರ ಪ್ರವಾಸದ ವೇಳೆ ಡಿಸೆಂಬರ್ 15ರಂದು ಮುಖ್ಯಮಂತ್ರಿಗಳನ್ನು, ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.
.ಮೈದುಂಬಿ ಹರಿಯುತ್ತಿರುವ ಗಗನ ಚುಕ್ಕಿ ಜಲಪಾತದ ಎದುರು ಗಾನಚುಕ್ಕಿಗಳ ಹಾಡು.
ಲಯೊನೆಲ್ ಅವರು ಭಾರತ ಪ್ರವಾಸಕ್ಕೆ ಸ್ಟ್ರೈಕ್ ಪಾಲುದಾರ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಆಗಮಿಸಿದ್ದಾರೆ. ಮೆಸ್ಸಿ ಅವರು ಮೂರು ದಿನ ಭಾರತ ಪ್ರವಾಸದಲ್ಲಿ ಕೋಲ್ಕತ್ತ, ಹೈದರಾಬಾದ್, ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ.

ಮೆಸ್ಸಿ ಅವರು ಈ ಹಿಂದೆ 2011ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆನೆಜುವೆಲಾ ವಿರುದ್ಧ ಆಡಿ ಅರ್ಜೆಂಟೀನಾ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.