ಕೋಲ್ಕತ್ತ: ಡಿಸೆಂಬರ್ ಚಳಿಯನ್ನೂ ಲೆಕ್ಕಿಸದೆ ಮಧ್ಯರಾತ್ರಿ ಕಳೆದರೂ ಸುಮಾರು ಹೊತ್ತು ಕಾದು ತಮ್ಮ ನೆಚ್ಚಿನ ಫುಟ್ಬಾಲ್ ತಾರೆ ಲಯೊನೆಲ್ ಮೆಸ್ಸಿಗೆ ಕೋಲ್ಕತ್ತದ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು. ಮೂರು ದಿನಗಳ ಭಾರತ ಭೇಟಿಗೆ ಮೆಸ್ಸಿ ಮಧ್ಯರಾತ್ರಿ 2.26ಕ್ಕೆ ಕೋಲ್ಕತ್ತಗೆ ಬಂದಿಳಿದರು.
.ಲಯೊನೆಲ್ ಮೆಸ್ಸಿ ಭಾರತ ಪ್ರವಾಸ ಶುರು: ಈ ನಾಲ್ಕು ನಗರಗಳಿಗೆ ಭೇಟಿ.
ಅವರಿದ್ದ ವಿಮಾನ ನೇತಾಜಿ ಸುಭಾಷಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ ಅಭಿಮಾನಿಗಳ ಹರ್ಷೋದ್ಗಾರ ಮೊಳಗಿತು. ಅಂತರರಾಷ್ಟ್ರೀಯ ವಿಮಾನಗಳು ಆಗಮಿಸಿರುವ ಗೇಟ್ ನಾಲ್ಕರ ಸಮೀಪ ಅಭಿಮಾನಿಗಳ ದಂಡೇ ನೆರೆದಿತ್ತು.

ಕೈಯಲ್ಲಿ ಬಾವುಟ ಹಿಡಿದಿದ್ದ ಅಭಿಮಾನಿಗಳ ಘೋಷಣೆಗಳು ಸಮುದ್ರದ ಅಲೆಯನ್ನೂ ಮೀರಿಸುವಂತಿತ್ತು, ಮೊಬೈಲ್ ಫ್ಲ್ಯಾಶ್ಲೈಟ್ ಬೆಳಗಿಸಿ ನೆಚ್ಚಿನ ತಾರೆಯನ್ನು ಅಭಿಮಾನಿಗಳು ಸ್ವಾಗತಿಸಿದರು. ಒಂದು ಕ್ಷಣವಾದರೂ ಮೆಸ್ಸಿಯನ್ನು ನೋಡಬೇಕು ಎಂದು ನೂಕುನುಗ್ಗಲು ಮಾಡುವ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿತ್ತು. ಮಕ್ಕಳನ್ನು ಭುಜದ ಮೇಲೆ ಹೊತ್ತುಕೊಂಡು ಬಂದವರೂ ಇದ್ದರು. ಫಲಕಗಳನ್ನು ಹಿಡಿದುಕೊಂಡು ಸ್ವಾಗತಕೋರಿ ಅಭಿಮಾನ ಮೆರೆದರು. ಅರ್ಜೆಂಟಿನಾ ಜೆರ್ಸಿ ಧರಿಸಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಡೋಲು–ವಾದ್ಯಗಳ ಸಂಗೀತ ರಂಗು ಪಡೆದಿತ್ತು. ಇಡೀ ಏರ್ಪೋರ್ಟ್ನಲ್ಲಿ ಹಬ್ಬದ ವಾತಾವರಣ ಇತ್ತು.ಮೆಸ್ಸಿ ಮೆಸ್ಸಿ ಎನ್ನುವ ಕೂಗು ಇಡೀ ನಗರವನ್ನು ಆವರಿಸಿದಂತಿತ್ತು.
.ಭಾರತ ಪ್ರವಾಸ: ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿರುವ ಲಯೊನೆಲ್ ಮೆಸ್ಸಿ, ಸೊರೇಝ್.
ಭಾರಿ ಭದ್ರತೆ ಇದ್ದ ವಿಐಪಿ ಗೇಟ್ನಿಂದ ಮೆಸ್ಸಿ ನಿರ್ಗಮಿಸಿದರು. ಹೋಟೆಲ್ವರೆಗೆ ಭಾರಿ ದೊಡ್ಡ ಬೆಂಗಾವಲು ಪಡೆಯೇ ಇತ್ತು. ಹೋಟೆಲ್ ಬಳಿಯೂ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ಭಾರಿ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಎಲ್ಲೆಡೆ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಇಡೀ ನಗರವೇ ‘ಮೆಸ್ಸಿ ಮೇನಿಯಾ’ದಲ್ಲಿ ಮುಳುಗಿತ್ತು.
.ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ .
ಮೆಸ್ಸಿ ಜೊತೆ ಉರುಗ್ವೆ ಫುಟ್ಬಾಲ್ ಆಟಗಾರ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಆಗಮಿಸಿದರು. ಮುಂದಿನ 72 ಗಂಟೆಗಳಲ್ಲಿ ಕೋಲ್ಕತ್ತ, ಹೈದರಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸಲಿದ್ದಾರೆ. ಸೋಮವಾರ ಮುಖ್ಯಮಂತ್ರಿಗಳು, ಕಾರ್ಪೊರೇಟ್ ನಾಯಕರು, ಬಾಲಿವುಡ್ ಸೆಲೆಬ್ರೆಟಿಗಳು ಹಾಗೂ ಕೊನೆಯದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಭಾರತ ಪ್ರವಾಸವನ್ನು ಕೊನೆಗೊಳಿಸಲಿದ್ದಾರೆ.
.ದೇಶದ 4 ನಗರಗಳಿಗೆ ಫುಟ್ಬಾಲ್ ದಿಗ್ಗಜ ಮೆಸ್ಸಿ ಭೇಟಿ ಖಚಿತ: ಮೋದಿ ಜೊತೆ ಮಾತುಕತೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.