ಬೆಂಗಳೂರು: ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿಸ್ಮೈಲ್) ವತಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರ ಮೆಟ್ರೊ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯನ್ನು ಜಾಗತಿಕ ರೂಪದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ₹307 ಕೋಟಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
.Video: ಬೆಂಗಳೂರು ಟ್ರಾಫಿಕ್ಗೆ ಮುಕ್ತಿ ಕಾಣಿಸುತ್ತಾ ಒಆರ್ಆರ್?.
ಗುಣಮಟ್ಟದ ಪ್ರಯಾಣಕ್ಕೆ ಹಾಗೂ ದಟ್ಟಣೆ ನಿಯಂತ್ರಣಕ್ಕೆ 17.01 ಕಿ.ಮೀ ಉದ್ದದ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ.

10 ಪಥದ ರಸ್ತೆ ಇದಾಗಿರಲಿದ್ದು, ಮೂರು ಪಥದ ಪ್ರಮಖ ರಸ್ತೆ ಹಾಗೂ ಎರಡೂ ಬದಿಗಳಲ್ಲಿ ತಲಾ ಎರಡು ಪಥದ ಸರ್ವಿಸ್ ರಸ್ತೆಗಳು ಇರಲಿವೆ. ‘ಬಸ್ ಆದ್ಯತಾ ಪಥವನ್ನು ಪುನರ್ಸ್ಥಾಪಿಸುವ ಯೋಜನೆಯೂ ಇದ್ದು ಸಂಚಾರ ದಟ್ಟಣೆ ಕಡಿಮೆಯಾಗಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಕಾಡುಬೀಸನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಎಂಬೆಸಿಯಿಂದ ₹ 100 ಕೋಟಿ: ಒಪ್ಪಂದ.
ಉಭಯ ಕಡೆಗಳಲ್ಲೂ ಪಾದಾಚಾರಿ ಹಾಗೂ ಸೈಕಲ್ ಫಥ ಇರಲಿದೆ. ರಸ್ತೆಯ ಕೆಲವೊಂದು ಭಾಗಗಳನ್ನು ಮರುನಿರ್ಮಾಣ ಮಾಡಲಾಗುತ್ತದೆ. ಆಧುನಿಕ ಬಸ್ ತಂಗುದಾಣ ಅದರಲ್ಲಿ ಮಾಹಿತಿ ಬೋರ್ಡ್ಗಳು ಇರಲಿವೆ. ‘ಇಬ್ಬಲೂರಿನಿಂದ ಕೆ.ಆರ್ ಪುರದವರೆಗೆ ಮೆಟ್ರೊ ಎತ್ತರಿಸಿದ ಮಾರ್ಗದ ಅಡಿಯಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲಾಗುವುದು, ಇದು ಸರ್ಕಾರ–ಖಾಸಗಿ ಪಾಲುದಾರಿಕೆಯಲ್ಲಿ ನಿರ್ಮಾಣ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಈ ಯೋಜನೆಯ ಖರ್ಚು ₹ 400 ಎಂದು ಅಂದಾಜಿಸಲಾಗಿದ್ದರೂ, ಸಂಪುಟ ₹ 307 ಕೋಟಿಗೆ ಮಾತ್ರ ಅನುಮೋದನೆ ನೀಡಿದೆ.
.ಒಆರ್ಆರ್ ಮೆಟ್ರೊ ಮಾರ್ಗ ಭೂಸ್ವಾಧೀನದ್ದೇ ಸಮಸ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.