ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದುವರೆಗೂ ನಡೆದಿರುವ ಮಿನಿ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿಗಳು ವಿದೇಶಿ ವೇಗಿಗಳಿಗೆ ಮತ್ತು ಆಲ್ರೌಂಡರ್ಗಳಿಗೆ ಕೋಟಿ ಕೋಟಿ ಹಣ ಸುರಿದಿದ್ದಾರೆ.

ಕಳೆದ ವರ್ಷದ ಐಪಿಎಲ್ ಮೆಗಾ ಹರಾಜಿನಲ್ಲಿ ₹27 ಕೋಟಿಗೆ ಹರಾಜಾಗುವ ಮೂಲಕ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ರಿಷಬ್ ಪಂತ್ ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಹಣ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಿದ್ದರೆ, ಯಾವೆಲ್ಲಾ ವಿದೇಶಿ ಆಟಗಾರರು ಅತ್ಯಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ ಎಂಬುದನ್ನು ನೋಡೋಣ.
.ಐಪಿಎಲ್ ಬ್ರ್ಯಾಂಡ್ ಮೌಲ್ಯದಲ್ಲಿ CSK ಹಿಂದಿಕ್ಕಿದ RCB: ಯಾವ ತಂಡಕ್ಕೆ ಅಗ್ರಸ್ಥಾನ?.ಇಳಕಲ್| ಐಪಿಎಲ್ ಟ್ರೋಫಿಯ ಅದ್ದೂರಿ ಮೆರವಣಿಗೆ: ನಟ, ನಟಿಯರು ಭಾಗಿ.
ಮಿಚೆಲ್ ಸ್ಟಾರ್ಕ್ : 2024ರ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರಿಗೆ ಕೊಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ ₹24.75 ಕೋಟಿ ನೀಡಿತ್ತು. ಇದು ವಿದೇಶಿ ಆಟಗಾರನೊಬ್ಬ ಐಪಿಎಲ್ನಲ್ಲಿ ಪಡೆದ ಅತ್ಯಧಿಕ ಮೊತ್ತವಾಗಿದೆ.

ಪ್ಯಾಟ್ ಕಮ್ಮಿನ್ಸ್: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಗೆ 2024ರ ಐಪಿಎಲ್ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ₹20.50 ಕೋಟಿ ನೀಡಿ ಖರೀದಿಸಿತ್ತು. ಮಾತ್ರವಲ್ಲ, ಅವರಿಗೆ ನಾಯಕತ್ವದ ಜವಾಬ್ದಾರಿ ಕೂಡ ನೀಡಿದೆ.

ಸ್ಯಾಮ್ ಕರನ್: 2023 ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಇಂಗ್ಲೀಷ್ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಬರೋಬ್ಬರಿ ₹18.50 ಕೋಟಿ ಕೊಟ್ಟು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.

ಕ್ಯಾಮೆರೂನ್ ಗ್ರೀನ್: 2023ರಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ₹17.50 ಕೋಟಿ ನೀಡಿ ಖರೀದಿಸಿತ್ತು. ಅವರು ಆ ವರ್ಷ ಆಡಿದ 16 ಪಂದ್ಯಗಳಿಂದ 160ರ ಉತ್ತಮ ಸ್ಟ್ರೈಕ್ ರೇಟ್ನಲ್ಲಿ 450ಕ್ಕೂ ಅಧಿಕ ರನ್ ಕಲೆಹಾಕಿದ್ದರು.

ಬೆನ್ ಸ್ಟೋಕ್ಸ್: 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರಿಗೆ ₹16.25 ಕೋಟಿ ನೀಡಿ ಖರೀದಿಸಿತ್ತು.

ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಕೂಡ ತಾರಾ ಆಟಗಾರರಿದ್ದು, ಡಿಸೆಂಬರ್ 16 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಯಾವ ವಿದೇಶಿ ಆಟಗಾರ ಅತೀ ಹೆಚ್ಚು ಮೊತ್ತ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.