ನವದೆಹಲಿ: ಒಲಿಂಪಿಯನ್ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಮುಂದಿನ ವರ್ಷ ನಡೆಯಲಿರುವ ಏಷ್ಯನ್ ತಂಡ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಚೀನಾದ ಕಿಂಗ್ದಾವೊನಲ್ಲಿ ಫೆಬ್ರುವರಿ 3 ರಿಂದ 8ರವರೆಗೆ ಟೂರ್ನಿ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ತಂಡವು ಈ ಬಾರಿಯೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಈ ತಂಡದಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಆಡಲಿದ್ದಾರೆ.

ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ,ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್, ಎಚ್.ಎಸ್. ಪ್ರಣಯ್ ಇದ್ದಾರೆ. ಕರ್ನಾಟಕದ ಆಯುಷ್ ಶೆಟ್ಟಿ ಕೂಡ ತಂಡದಲ್ಲಿದ್ದಾರೆ. ಲಕ್ಷ್ಯ ಸೇನ್ ಅವರು 13ನೇ ರ್ಯಾಂಕ್ ನಲ್ಲಿದ್ದಾರೆ. ಅವರೊಂದಿಗೆ ಯುವ ಆಟಗಾರರೂ ಸ್ಥಾನ ಗಿಟ್ಟಿಸಿದ್ದಾರೆ. ಮಹಿಳೆಯರ ಲ್ಲಿ ಸಿಂಧು ಅವರೊಂದಿಗೆ ಬಹುತೇಕ ಉದಯೋನ್ಮುಖ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

‘ರ್ಯಾಂಕಿಂಗ್, ಅನುಬವ ಮತ್ತು ಸಾಧನೆಗಳನ್ನು ಪರಾಮರ್ಶಿಸಿದ ನಂತರ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮಾಜಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಯನ್ ಸಿಂಧು ಅವರು ಮಹಿಳಾ ತಂಡವನ್ನು ಮುನ್ನಡೆಸುವರು’ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ)
ಪ್ರಕಟಣೆಯಲ್ಲಿ ತಿಳಿಸಿದೆ.

ತಂಡಗಳು: ಪುರುಷರು: ಲಕ್ಷ್ಯ ಸೇನ್, ಆಯುಷ್ ಶೆಟ್ಟಿ, ಕಿದಂಬಿ ಶ್ರೀಕಾಂತ್, ಎಚ್.ಎಸ್. ಪ್ರಣಯ್, ತರುಣ್ ಮನ್ನೆ ಪಳ್ಳಿ, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಪೃಥ್ವಿ ಕೃಷ್ಣಮೂರ್ತಿ ರಾಯ್, ಸಾಯಿ ಪ್ರತೀಕ್ ಕೆ. ಹರಿಹರನ್ ಅಮೃತ ಕರುಣನ್.

ಮಹಿಳೆಯರು: ಪಿ.ವಿ. ಸಿಂಧು, ಉನ್ನತಿ ಹೂಡಾ, ತನ್ವಿ ಶರ್ಮಾ, ರಕ್ಷಿತಾಶ್ರೀ ಸಂತೋಷ್ ರಾಮರಾಜ್, ಮಾಳವಿಕಾ ಬನ್ಸೋಡ್, ತ್ರಿಷಾ ಜೊಳಿ, ಗಾಯತ್ರಿ ಗೋಪಿಚಂದ್, ಪ್ರಿಯಾ ಕಾಂಜೆಂಗ್ಬಾಮ್ ಶ್ರುತಿ ಮಿಶ್ರಾ, ತನಿಷಾ ಕ್ರಾಸ್ಟೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.