ಕೋಲ್ಕತ್ತ: ಫುಟ್ಬಾಲ್ ಲೋಕದ ಮಿನುಗುತಾರೆ ಲಿಯೋನೆಲ್ ಮೆಸ್ಸಿ ಆರಂಭಿಸಿರುವ 'GOAT Tour of India' ಪ್ರವಾಸ, ಇಂದಿನಿಂದ (ಶನಿವಾರ) ಆರಂಭವಾಗಿದೆ. ಅರ್ಜೆಂಟೀನಾದವರೇ ಆದ ರೊಡ್ರಿಗೊ ಡಿ ಪೌಲ್ ಹಾಗೂ ಉರುಗ್ವೆಯ ಸೂಪರ್ಸ್ಟಾರ್ ಲೂಯಿಸ್ ಸೂರೆಜ್ ಅವರೂ ಭಾರತಕ್ಕೆ ಬಂದಿದ್ದಾರೆ.

ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾವಹಿಸಿದ್ದ ಅವರು, ಗದ್ದಲ, ಅವ್ಯವಸ್ಥೆಯ ಕಾರಣದಿಂದ ನಿಗದಿಗಿಂತ ಸಾಕಷ್ಟು ಮುಂಚಿತವಾಗಿಯೇ ಹೊರಡಬೇಕಾಯಿತು. ಆದರೂ, ಅಷ್ಟು ಗಡಿಬಿಡಿಯಲ್ಲೂ ಅವರು ಇಬ್ಬರು ಅದೃಷ್ಟವಂತರ ಜೆರ್ಸಿಗಳಿಗೆ ಹಸ್ತಾಕ್ಷರ ಹಾಕಿದ್ದಾರೆ.

ಗದ್ದಲದ ಸನ್ನಿವೇಶವನ್ನೂ ಜೀವನದ ಸ್ಮರಣೀಯ ಕ್ಷಣವನ್ನಾಗಿಸಿಕೊಂಡ ಆ ಅದೃಷ್ಟವಂತರು ಬೇರಾರೂ ಅಲ್ಲ; ಟೀಂ ಇಂಡಿಯಾದ ಮಾಜಿ ಆಟಗಾರರಾದ ದೀಪೇಂದು ಬಿಸ್ವಾಸ್ ಮತ್ತು ಸೈಯದ್ ರಹೀಂ ನಬಿ. ಇವರಿಬ್ಬರೂ, ಇಂದು ನಿಗದಿಯಾಗಿದ್ದ ಸೌಹಾರ್ದ ಪಂದ್ಯದಲ್ಲಿ ಡೈಮಂಡ್ ಹಾರ್ಬರ್ ಮೆಸ್ಸಿ XI ವಿರುದ್ಧ ಮೋಹನ್ ಬಾಗನ್ XI ಪರ ಆಡಲು ಸಜ್ಜಾಗಿದ್ದರು.

ಮೆಸ್ಸಿ ಹಸ್ತಾಕ್ಷರದ ಕುರಿತು ಮಾತನಾಡಿರುವ ಬಿಸ್ವಾಸ್, 'ಮೆಸ್ಸಿ ಅವರು ನನ್ನ ಜೆರ್ಸಿಯ ಎಡ ಭಾಗಕ್ಕೆ, ಸೂರೆಜ್ ಅವರು ಬಲ ಭಾಗಕ್ಕೆ ಹಾಗೂ ಪೌಲ್ ಮಧ್ಯದಲ್ಲಿ ಸಹಿ ಮಾಡಿದ್ದಾರೆ. ಸಹಿ ಮಾಡುವಾಗ ಮೆಸ್ಸಿ ಅವರ ಮುಖದ ಮೇಲೆ ನಗುವಿತ್ತು. ಅವರ ಮಾಂತ್ರಿಕ ಎಡಗಾಲನ್ನು ಮುಟ್ಟಿ ಧನ್ಯನಾದೆ' ಎಂದು ತಿಳಿಸಿದ್ದಾರೆ.

ವಿಶೇಷವೆಂದರೆ, ಬಿಸ್ವಾಸ್ ಅವರು ವಯಸ್ಸಿನಲ್ಲಿ ಮೆಸ್ಸಿಗಿಂತ ದೊಡ್ಡವರು.

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಾದ ಡಿಯಾಗೊ ಮರಡೋನಾ ಮತ್ತು ಪೆಲೆ ಅವರಿಂದಲೂ ಜರ್ಸಿಗೆ ಹಸ್ತಾಕ್ಷರ ಹಾಕಿಸಿಕೊಂಡಿರುವ ಬಿಸ್ವಾಸ್, ಆ ಅನುಭವವೇ ವಿಶಿಷ್ಠ ಎಂದು ಬಣ್ಣಿಸಿದ್ದಾರೆ.

'ವಿಶ್ವ ಚಾಂಪಿಯನ್ ತಂಡದ ನಾಯಕ, ಎಂತಹ ನಿಲುವಿನ ಆಟಗಾರ; ಇದು ಜೀವಮಾನದಲ್ಲಿ ಒಮ್ಮೆಯಷ್ಟೇ ಸಿಗುವ ಅವಕಾಶ. ಅವರು ಕ್ರೀಡಾಂಗಣದಲ್ಲಿ ಇದಷ್ಟು ಹೊತ್ತೂ ಹಸನ್ಮುಖಿಯಾಗಿದ್ದರು' ಎಂದು ವಿವರಿಸಿದ್ದಾರೆ.
.ಮೆಸ್ಸಿ ಕಾರ್ಯಕ್ರಮದ ವೇಳೆ ಅವ್ಯವಸ್ಥೆ: ಸಂಘಟನೆಯ ರೂವಾರಿ ಬಂಧನ.ಕೋಲ್ಕತ್ತದಲ್ಲಿ ನಿರ್ಮಿಸಿರುವ ಮೆಸ್ಸಿಯ 70 ಅಡಿ ಪ್ರತಿಮೆ ಪಾಕ್ ಕ್ರಿಕೆಟಿಗನಂತಿದೆ!.
'ಈ ರೀತಿ ಆಗಿರಲಿಲ್ಲ'
ಕ್ರೀಡಾಂಗಣದಲ್ಲಿ ನಡೆದ ಗದ್ದಲದ ಕುರಿತು, 'ನಾನು ಸಾಕಷ್ಟು ವರ್ಷಗಳಿಂದ ಫುಟ್ಬಾಲ್ ಆಡುತ್ತಿದ್ದೇನೆ. ಈ ಹಿಂದೆ ಮರಡೋನಾ, ಪೆಲೆ, ವಲ್ಡೆರ್ರಮಾ ಅವರು ಇಲ್ಲಿಗೆ ಬಂದಿದ್ದರು. ಆದರೆ, ಪ್ರೇಕ್ಷಕರು ಈ ರೀತಿ ಎಂದೂ ನಡೆದುಕೊಂಡಿರಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ, 'ಈ ಹಿಂದೆ ಮರಡೋನಾ ಅವರನ್ನು ಬೀಳ್ಕೊಟ್ಟ ಹಾಗೆ, ಮೆಸ್ಸಿ ಅವರನ್ನೂ ತೆರೆದ ಜೀಪಿನಲ್ಲಿ ಕ್ರೀಡಾಂಗಣದಿಂದ ಕರೆದುಕೊಂಡು ಹೋಗಬೇಕಿತ್ತು' ಎಂದು ಹೇಳಿದ್ದಾರೆ.

'ಬದುಕಿನ ಶ್ರೇಷ್ಠ ಕ್ಷಣ'
'ಇದು ನನ್ನ ಬದುಕಿನ ಅತ್ಯಂತ ಶ್ರೇಷ್ಠ ಕ್ಷಣ ಎಂಬುದರಲ್ಲಿ ಅನುಮಾನವೇ ಇಲ್ಲ. ಮೆಸ್ಸಿ ಅವರು ಹಲವು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಇದು ನನಗೆ ದೊರೆತ ಉಡುಗೊರೆ' ಎಂದು ನಬಿ ಹೇಳಿದ್ದಾರೆ.

ಮೆಸ್ಸಿ ಅವರನ್ನು ಫುಟ್ಬಾಲ್ ಲೋಕದ 'ದಿವ್ಯ ಪುರುಷ' ಎಂದಿರುವ ಅವರು, 'ಮೆಸ್ಸಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರು ದೇವರಿದ್ದಂತೆ' ಎಂದು ಬಣ್ಣಿಸಿದ್ದಾರೆ.

ಕಾರ್ಯಕ್ರಮದ ವೇಳೆ ಉಂಟಾದ ಗದ್ದಲ ನೋವು ತಂದಿದೆ ಎಂದೂ ಹೇಳಿದ್ದಾರೆ.
.ಮೆಸ್ಸಿ ಸುತ್ತಲೂ ರಾಜಕಾರಣಿಗಳ ದಂಡು: ಮೈದಾನಕ್ಕೆ ಬಾಟಲಿ,ಕುರ್ಚಿ ಎಸೆದ ಅಭಿಮಾನಿಗಳು.ಕೋಲ್ಕತ್ತ | ಮೆಸ್ಸಿ ಕಾರ್ಯಕ್ರಮದಲ್ಲಿ ಗದ್ದಲ: ಕ್ಷಮೆ ಕೋರಿದ ಮಮತಾ; ತನಿಖೆಗೆ ಆದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.