ಧರ್ಮಶಾಲಾ: ಭಾರತ ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ನಾನು ಬ್ಯಾಟಿಂಗ್ಗೆ ಬರಲು ಸಿದ್ದನಿದ್ದೇನೆ ಎಂದು ಬ್ಯಾಟರ್ ತಿಲಕ್ ವರ್ಮಾ ಹೇಳಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯು 1–1ರಲ್ಲಿ ಸಮಬಲವಾಗಿದ್ದು, ಮೂರನೇ ಪಂದ್ಯವು ಡಿ.14ರಂದು ಧರ್ಮಶಾಲಾದಲ್ಲಿ ನಡೆಯಲಿದೆ.

ತಂಡದ ಅಗತ್ಯಕ್ಕೆ ತಕ್ಕಂತೆ ನಾನು 3, 4, 5 ಅಥವಾ 6ನೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ. ಇದು ನನ್ನ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
.ಐಸಿಸಿ ಟಿ20 ರ್ಯಾಂಕಿಂಗ್: ಮೂರನೇ ಸ್ಥಾನಕ್ಕೇರಿದ ತಿಲಕ್ ವರ್ಮಾ.
‘ನಮ್ಮ ತಂಡದಲ್ಲಿರುವ ಬಹುತೇಕ ಆಟಗಾರರು ಪಂದ್ಯದ ಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಅವರು ಆಡಬಲ್ಲರು’ ಎಂದು ಹೇಳಿದ್ದಾರೆ.

ಟೀಂ ಇಂಡಿಯಾವು ಪಂದ್ಯದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುತ್ತಿದೆ. ಧರ್ಮಶಾಲಾ ಮೈದಾನವು ಬ್ಯಾಟರ್ಗಳಿಗೆ ನೆರವು ನೀಡಲಿದ್ದು, ಉತ್ತಮ ರನ್ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಭಾರತದಲ್ಲಿ ಮುಂದಿನ ವರ್ಷ ಟಿ–20 ವಿಶ್ವಕಪ್ ಜರುಗಲಿದ್ದು, ತಂಡದ ಮ್ಯಾನೇಜ್ಮೆಂಟ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ.
.ಹಳೆಯ ಘಟನೆಗಳ ನೆನಪಿಸಿದ ಸಾಲ್ಟ್ ಲೇಕ್ ಗಲಾಟೆ: ವಿಶ್ವಕಪ್ ವೇಳೆಯೂ ಆಗಿತ್ತು ಗಲಭೆ...IND vs SA: ನಾಯಕ ಸೂರ್ಯಕುಮಾರ್ ಯಾದವ್ ದಾಖಲೆ ಮುರಿದ ತಿಲಕ್ ವರ್ಮಾ.IPL 2026 Auction:ಹರಾಜಿನಲ್ಲಿ ಕೋಟಿ ಗಿಟ್ಟಿಸಿಕೊಳ್ಳಬಹುದಾದ ಪ್ರಮುಖ ಆಟಗಾರರಿವರು.ವಿರಾಟ್, ರೋಹಿತ್ ಸೇರಿದಂತೆ 2025ರಲ್ಲಿ ನಿವೃತ್ತರಾದ ಪ್ರಮುಖ ಕ್ರಿಕೆಟಿಗರು ಇವರು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.