ಚೆನ್ನೈ: ಭಾರತೀಯ ರೇಸಿಂಗ್ ಫೆಸ್ಟಿವಲ್ನ ಭಾಗವಾಗಿರುವ FIA ಪ್ರಮಾಣಿತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ಷಿಪ್ನ ಮೂರನೇ ಸೀಸನ್ ಡಿಸೆಂಬರ್ 14ರಂದು ಚೆನ್ನೈನ ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ರೋಚಕ ಅಂತ್ಯ ಕಂಡಿತು. 15 ವರ್ಷದ ಕೆನ್ಯಾದ ಶೇನ್ ಚಂದಾರಿಯಾ ಚಾಂಪಿಯನ್ ಆಗಿ ಹೊರಹೊಮ್ಮಿ, ಟೂರ್ನಮೆಂಟ್ನ ಅತೀ ಕಿರಿಯ ಚಾಂಪಿಯನ್ ಎಂಬ ಗೌರವಕ್ಕೂ ಪಾತ್ರರಾದರು.

2025ರ ಸೀಸನ್ಗೆ ರೂಕಿಯಾಗಿ ಪ್ರವೇಶಿಸಿದ ಚಂದಾರಿಯಾ ಈ ಚಾಂಪಿಯನ್ಷಿಪ್ ಗೆದ್ದಿದ್ದು, ಇದು ಅವರ ಯುವ ವೃತ್ತಿಜೀವನದ ಮೊದಲ ಪ್ರಮುಖ ಕಿರೀಟವಾಗಿದೆ. ಅಂತಿಮ ಐದನೇ ಸುತ್ತಿಗೆ ಮುನ್ನ ಚಂದಾರಿಯಾ ಪ್ರತಿನಿಧಿಸಿದ ಚೆನ್ನೈ ಟರ್ಬೊ ರೈಡರ್ಸ್ ತಂಡ 24 ಅಂಕಗಳ ಮುನ್ನಡೆ ಹೊಂದಿತ್ತು. ಅಂತಿಮ ಸುತ್ತಿನ ಮೊದಲ ರೇಸ್ನಲ್ಲಿ ಪೋಲ್ ಸ್ಥಾನದಿಂದ ಆರಂಭಿಸಿದ ಚಂದಾರಿಯಾ, 23 ಲ್ಯಾಪ್ಗಳನ್ನು 26 ನಿಮಿಷ 23.059 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಗೆಲುವು ಸಾಧಿಸಿದರು.

ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು ತಂಡದ ಸಚೆಲ್ ರೋಟ್ಜೆ (26:22.674) ರೇಸ್ನಲ್ಲಿ ಎರಡನೇ ಸ್ಥಾನ ಪಡೆದು, ಟಾಪ್-2 ಫಿನಿಶರ್ ಆಗಿ ಚಾಂಪಿಯನ್ಷಿಪ್ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ರೇಸ್ 2ರಲ್ಲಿ ಈ ಸೀಸನ್ನಲ್ಲೇ ಕಂಡ ಅತ್ಯಂತ ತೀವ್ರ ಪೈಪೋಟಿ ಫ್ರೆಂಚ್ ಚಾಲಕ ಸಚೆಲ್ ರೋಟ್ಜೆ ಮತ್ತು ಚಂದಾರಿಯಾ ನಡುವೆ ನಡೆಯಿತು. ಗೋವಾ ಏಸಸ್ ಜೆಎ ರೇಸಿಂಗ್ನ 16 ವರ್ಷದ ಲುವಿವೆ ಸಂಬುಡ್ಲಾ ರೇಸ್ ಗೆದ್ದರೆ, ಕೊನೆಯ ಲ್ಯಾಪ್ನಲ್ಲಿ ಡಬಲ್ ಓವರ್ಟೇಕ್ ಮಾಡಿದ ರೋಟ್ಜೆ ಎರಡನೇ ಸ್ಥಾನ ಪಡೆದರು.

2025ರ ಇಂಡಿಯನ್ ಫಾರ್ಮುಲಾ 4 ಚಾಂಪಿಯನ್ಷಿಪ್ನಲ್ಲಿ ಶೇನ್ ಚಂದಾರಿಯಾ ಮತ್ತು ಸಚೆಲ್ ರೋಟ್ಜೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದರು. ಏಳು ಬಾರಿ ಇಂಡಿಯನ್ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್ ಆಗಿರುವ ಇಶಾನ್ ಮಾದೇಶ್ ಮೂರನೇ ಸ್ಥಾನ ಪಡೆದರು. ತಂಡಗಳ ವಿಭಾಗದಲ್ಲಿ ಚೆನ್ನೈ ಟರ್ಬೊ ರೈಡರ್ಸ್ ಚಾಂಪಿಯನ್ಷಿಪ್ ಕಿರೀಟಕ್ಕೆ ಪಾತ್ರವಾಯಿತು.

F4 ಕಿರೀಟ ವಿಜೇತ ಚಂದಾರಿಯಾ ಐದು ವರ್ಷದ ವಯಸ್ಸಿನಲ್ಲಿ ಮೋಟಾರ್ಸ್ಪೋರ್ಟ್ಸ್ಗೆ ಪ್ರವೇಶಿಸಿದರು. 2021ರಲ್ಲಿ ಕೆನ್ಯಾ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ‘ರೂಕಿ ಆಫ್ ದಿ ಇಯರ್’ ಗೌರವ ಪಡೆದ ಅವರು, 2022ರಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ ಕಿರೀಟವನ್ನು ಜಯಿಸಿದರು. 2024ರಲ್ಲಿ ಯುಕೆಗೆ ತೆರಳಿ ಬ್ರಿಟಿಷ್ ಕಾರ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸಿದ ಅವರು, ಫಾರ್ಮುಲಾ ಗ್ಲೋಬಲ್ ಶೂಟೌಟ್ ಪ್ರೋಗ್ರಾಂ (FGSP) ಮೂಲಕ ಸಿಂಗಲ್-ಸೀಟರ್ ರೇಸಿಂಗ್ಗೆ ಪದಾರ್ಪಣೆ ಮಾಡಿದರು. ಚೆನ್ನೈನಲ್ಲಿ ನಡೆದ ಎರಡನೇ ಸುತ್ತಿನಲ್ಲಿ FIA ಫಾರ್ಮುಲಾ 4 ರೇಸ್ ಗೆದ್ದ ಮೊದಲ ಕೆನ್ಯನ್ ಚಾಲಕ ಎಂಬ ಇತಿಹಾಸವನ್ನೂ ಚಂದಾರಿಯಾ ನಿರ್ಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.