2025 ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷದಲ್ಲಿ ಕನ್ನಡ ಕಿರುತೆಯಲ್ಲಿ ಸಾಕಷ್ಟು ಬೆಳವಣಿಗಳು ನಡೆದಿವೆ. ಅದರಲ್ಲೂ 2025ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆ ನಟ-ನಟಿಯರ ಪಟ್ಟಿ ನೀಡಲಾಗಿದೆ.

2025ರಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈಷ್ಣವಿ ಗೌಡ, ದೀಪ್ತಿ ಮಾನೆ, ರಜನಿ, ಮೇಘಾ ಶೆಣೈ, ಅರುಣ್ ಅಗಸ್ತ್ಯ, ಯದುಶ್ರೇಷ್ಠ, ಶಮಂತ್ ಗೌಡ, ಶ್ರೀರಾಮ್, ಗಜೇಂದ್ರ ಮರಸಣಿಗೆ, ಮೇಘಶ್ರೀ ಗೌಡ, ಮೇಘನಾ ಶಂಕರಪ್ಪ ವಿವಾಹವಾಗಿದ್ದಾರೆ.
.PHOTOS | ಶ್ವೇತ ವರ್ಣದ ಉಡುಗೆಯಲ್ಲಿ ಕಣ್ಮನ ಸೆಳೆದ ನಟಿ ವೈಷ್ಣವಿ ಗೌಡ.ಸರ್ವಧರ್ಮ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಡಲಿರುವ 75 ಜೋಡಿ.
ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡರು. ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕನ್ನಡ ಕಿರುತೆರೆಯಲ್ಲಿ ತುಳಸಿ ಎಂದೇ ಖ್ಯಾತಿ ಪಡೆದುಕೊಂಡಿರುವ ನಟಿ ದೀಪ್ತಿ ಮಾನೆ ಅವರು ನವೆಂಬರ್ 7ರಂದು ರೋಹನ್ ಎಂಬುವವರ ಜೊತೆಗೆ ವಿವಾಹವಾಗಿದ್ದರು. ನಟಿ ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.

ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ರಜಿನಿ ಅವರು ಅರುಣ್ ವೆಂಕಟೇಶ್ ಎಂಬುವವರ ಜೊತೆಗೆ ನವೆಂಬರ್ 10ರಂದು ಮದುವೆಯಾದರು. ನಟಿ ರಜಿನಿ ‘ಅಮೃತವರ್ಷಿಣಿ’, ‘ಹಿಟ್ಲರ್ ಕಲ್ಯಾಣ’, ‘ನೀ ಇರಲು ಜೊತೆಯಲಿ’ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೇ ಡ್ಯಾನ್ಸ್ ರಿಯಾಲಿಟಿ ಶೋ, ‘ಮಜಾ ಟಾಕೀಸ್’ ಕಾಮಿಡಿ ಶೋನಲ್ಲಿಯೂ ರಜಿನಿ ಭಾಗವಹಿಸಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಮೇಘಾ ಶೆಣೈ ನವೆಂಬರ್ 12ರಂದು ಭರತ್ ಸಿಂಗ್ ಜೊತೆಗೆ ಮದುವೆಯಾದರು. ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತಂಗಿ ಸುಧಾ ಪಾತ್ರದಲ್ಲಿ ನಟಿ ಮೇಘಾ ಶೆಣೈ ಅಭಿನಯಿಸುತ್ತಿದ್ದಾರೆ.

ಕನ್ನಡ ಕಿರುತೆರೆ ನಟ ಅರುಣ್ ಕುಮಾರ್ ಅವರು ರೀತಿಕಾ ಅಶೋಕ್ ಜೊತೆಗೆ ನವೆಂಬರ್ 30ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟ ಅರುಣ್ ಕುಮಾರ್ ‘ನಾಗಿಣಿ’, ‘ನನ್ನರಸಿ ರಾಧೆ’, ‘ನೀನಾದೇನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಯದುಶ್ರೇಷ್ಟ ಅವರು ಭರತನಾಟ್ಯ ಕಲಾವಿದೆ ವಿಶಾಖ ಹೇಮಂತ್ ಜೊತೆಗೆ ಜುಲೈ 14ರಂದು ಸಪ್ತಪದಿ ತುಳಿದಿದ್ದರು. ನಟ ಯದುಶ್ರೇಷ್ಟ ರಂಗಭೂಮಿ ಕಲಾವಿದ ಆಗಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟ ಶಮಂತ್ ಗೌಡ ಮೇಘನಾ ಜೊತೆಗೆ ಮೇ 17ರಂದು ಮದುವೆಯಾಗಿದ್ದರು. ಶಮಂತ್ ಬ್ರೋ ಗೌಡ ಅವರು ಕನ್ನಡ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಕನ್ನಡ ಕಿರುತೆರೆ ಲೋಕದಲ್ಲೇ ವಿಲನ್ ಪಾತ್ರದ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಮೇಘಶ್ರೀ ಗೌಡ ಅವರು ಪುರಂದರ ಎಂಬುವವರ ಜೊತೆಗೆ ಫೆ.23ರಂದು ಮದುವ ಆಗಿದ್ದರು. ಇವರು ಸತ್ಯ, ಮೈನಾ, ನಿನ್ನ ಜೊತೆ ನನ್ನ ಕಥೆ, ಪುಣ್ಯವತಿ ಸೇರಿದಂತೆ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಮೇಘನಾ ಶಂಕರಪ್ಪ ಅವರು ಫೆ.9ರಂದು ಜಯಂತ್ ಜೊತೆಗೆ ಅದ್ಧೂರಿಯಾಗಿ ಮದುವೆ ಆಗಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾವಾಗುತ್ತಿರುವ ಯಜಮಾನ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ಗಜೇಂದ್ರ ಮರಸಣಿಗೆ ಅವರು ಶ್ವೇತಾ ಜೊತೆ ಮೇ.16ರಂದು ಮದುವೆ ಆದರು. ಕಾಮಿಡಿ ಕಿಲಾಡಿಗಳು ಶೋ, ಪುಟ್ಟಕ್ಕನ ಮಕ್ಕಳು, ಅಣ್ಣ ತಂಗಿ, ಪಾರ್ವತಿ ಪರಮೇಶ್ವರ, ಪರಿಣಿತ, ಅನುಬಂಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ನಟ ಶ್ರೀರಾಮ್ ಅವರು ಡಿ.1ರಂದು ಸ್ಪೂರ್ತಿ ಜತೆ ಎಂಬುವವರ ಜೊತೆಗೆ ಮದುವೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.