ಸೋಮವಾರ, ಆಗಸ್ಟ್ 15, 2022
25 °C

ಹುಂಡೈ ಟಕ್ಸನ್‌ ಹೊಸ ಆವೃತ್ತಿ ಅನಾವರಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ಟಕ್ಸನ್‌ ಎಸ್‌ಯುವಿಯ ಹೊಸ ಆವೃತ್ತಿಯನ್ನು ಬುಧವಾರ ಅನಾವರಣಗೊಳಿಸಿದೆ. ಮುಂದಿನ ತಿಂಗಳು ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆಯನ್ನು ಕಂಪನಿ ಹೊಂದಿದೆ.

ನಾಲ್ಕನೇ ಪೀಳಿಗೆಯ ಈ ಆವೃತ್ತಿಯು ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ಗಳಲ್ಲಿ ಕ್ರಮವಾಗಿ 6 ಮತ್ತು 8 ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿದೆ.

ಎರಡನೇ ಹಂತದ ಸುಧಾರಿತ ಚಾಲನಾ ಸಹಾಯ ವ್ಯವಸ್ಥೆಯನ್ನು (ಎಡಿಎಎಸ್‌) ಇದು ಹೊಂದಿದೆ. ಕ್ಯಾಮೆರಾ ಮತ್ತು ರೇಡಾರ್‌ ಸೆನ್ಸರ್‌ ಮೂಲಕ ರಸ್ತೆಯಲ್ಲಿ ಕಾರು, ಪಾದಚಾರಿ ಅಥವಾ ಸೈಕಲ್‌ ಸವಾರರನ್ನು ಇದು ಗುರುತಿಸಬಲ್ಲದು ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು