ಮಂಗಳವಾರ, ಮಾರ್ಚ್ 21, 2023
23 °C

ಮಾರುಕಟ್ಟೆಗೆ ಬರಲಿದೆ ಕೈನೆಟಿಕ್‌ ಇ–ಲೂನಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೈನೆಟಿಕ್‌ ಸಮೂಹವು ಹಿಂದೆ ಜನಪ್ರಿಯವಾಗಿದ್ದ ಲೂನಾ ಮೊಪೆಡ್‌ನ ಇ.ವಿ. ಅವತರಣಿಕೆಯನ್ನು ಮಾರುಕಟ್ಟೆಗೆ ತರಲಿದೆ.

ಕೈನೆಟಿಕ್‌ ಗ್ರೀನ್‌ ಎನರ್ಜಿ ಆ್ಯಂಡ್‌ ಪವರ್ ಸಲ್ಯೂಷನ್ಸ್‌ ಕಂಪನಿಯು ಇ–ಲೂನಾ ಮಾದರಿಯನ್ನು ಮಾರುಕಟ್ಟೆಗೆ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ.

ಈ ಮಾದರಿಯ ಚಾಸಿ ಹಾಗೂ ಇತರ ಕೆಲವು ಬಿಡಿಭಾಗಗಳ ಉತ್ಪಾದನೆಯು ಆರಂಭವಾಗಿದೆ. ಆರಂಭಿಕವಾಗಿ ತಿಂಗಳಿಗೆ ಐದು ಸಾವಿರ ಇ–ಲೂನಾ ತಯಾರಾಗಲಿದೆ.

ಲೂನಾ ಮೊಪೆಡ್‌ ಜನಪ್ರಿಯವಾಗಿದ್ದ ಕಾಲದಲ್ಲಿ ದಿನಕ್ಕೆ ಎರಡು ಸಾವಿರ ವಾಹನಗಳು ಮಾರಾಟವಾಗುತ್ತಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು