ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ಗೆ ರಸ್ತೆಗಿಳಿಯಲಿದೆ ಎಂಜಿ ಮೋಟರ್ಸ್ ‘ಹೆಕ್ಟರ್’

Last Updated 9 ಜನವರಿ 2019, 11:08 IST
ಅಕ್ಷರ ಗಾತ್ರ

ಭಾರತಕ್ಕೆ ಕಾಲಿಡುತ್ತಿರುವ ಬ್ರಿಟನ್ನಿನ ಮೋರಿಸ್ ಗ್ಯಾರೇಜಸ್‌ (ಎಂಜಿ) ಕಾರು ತಯಾರಿಕಾ ಕಂಪೆನಿ ತನ್ನ ಮೊದಲ ಎಸ್‌ಯುವಿ ಹೆಕ್ಟರ್‌ ಅನ್ನು ಪರಿಚಯಿಸುತ್ತಿದೆ.

ಚೀನಾದ ಎಸ್‌ಎಐಸಿ ಕಂಪೆನಿ ಮಾಲೀಕತ್ವದಲ್ಲಿರುವ ಎಂಜಿ ಮೋಟಾರ್ಸ್‌, ಭಾರತದಲ್ಲಿ ಎಸ್‌ಯುವಿ ಕಾರನ್ನೇ ಪರಿಚಯಿಸುತ್ತಿದೆ. ಈ ಕಾರು ಈ ವರ್ಷದ ಜೂನ್ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಭಾರತೀಯರ ಅಪೇಕ್ಷೆಗೆ ತಕ್ಕಂತೆ ಕಾರು ವಿನ್ಯಾಸಗೊಳಿಸುವುದಾಗಿ ಹೇಳಿದ್ದ ಕಂಪೆನಿ, ಅದರ ಪೂರ್ಣ ಚಿತ್ರಣವನ್ನು ಈವರೆಗೂ ನೀಡಿಲ್ಲ. ಆದರೆ ಕಾರಿನ ಹೊರಗಿನ ಅಂದವನ್ನು ತಿಳಿಸುವ ಕಿರುಚಿತ್ರವನ್ನು ಸಿದ್ಧಪಡಿಸಿದೆ. ಜತೆಗೆ ಎಂಜಿ ಬ್ರಾಂಡ್‌ ಎಂಥದ್ದು ಎಂಬುದನ್ನು ಜನರಿಗೆ ಪರಿಚಯಿಸುವ ಪ್ರಯತ್ನವನ್ನೂ ಮಾಡಿದೆ.

ಹೆಕ್ಟರ್‌ ಎಂಬ ಹೆಸರಿಡಲೂ ಅದು ಕಾರಣ ಹುಡುಕಿದೆ. ಇತಿಹಾಸದಲ್ಲಿದ್ದ ಟ್ರಾಜನ್‌ ಯೋಧ ವೀರ ರಾಜಕುಮಾರ ಟ್ರಾಯ್‌ನ ಹೆಕ್ಟರ್‌ನ ಹೆಸರನ್ನು ಈ ಕಾರಿಗೆ ಕಂಪೆನಿ ನಾಮಕರಣ ಮಾಡಿದೆ. ಆ ವೀರನ ಗುಣಲಕ್ಷಣಗಳನ್ನು ಕಾರಿನ ವಿನ್ಯಾಸದಲ್ಲಿ ಬಳಸಲಾಗಿದೆ. ಜತೆಗೆ
ರಾಜವಂಶಸ್ತ ಹೆಕ್ಟರ್‌ನ ನೆನಪಿಸಿಕೊಳ್ಳುತ್ತಲೇ ಬ್ರಿಟಿಷ್ ಎಂಜಿನಿಯರಿಂಗ್‌ನಲ್ಲಿ ಈ ಕಾರು ಸಿದ್ಧಗೊಂಡಿದೆ. ಇದೇ ಮಾದರಿಯಲ್ಲಿ ರಾಯಲ್ ಹೆಕ್ಟರ್‌ ಎಂಬ ಯುದ್ಧವಿಮಾನವನ್ನು 1930ರಲ್ಲಿ ರಾಯಲ್ ಏರ್‌ ಫೊರ್ಸ್‌ ಬಳಕೆ ಮಾಡಿತ್ತು. ಆ ನೆನಪಿನಲ್ಲೂ ಕಾರಿಗೆ ಹೆಕ್ಟರ್‌ ಹೆಸರಿಡಲಾಗಿದೆ ಎಂದು ಎಂಜಿ ಮೋಟಾರ್ಸ್‌ ತಿಳಿಸಿದೆ.

ಗುಜರಾತ್‌ನಲ್ಲಿ ಈ ಮೊದಲು ಇದ್ದ ಜನರಲ್ ಮೋಟಾರ್ಸ್ ಕಂಪೆನಿಯ ತಯಾರಿಕಾ ಘಟಕವನ್ನು ಖರೀದಿಸಿದ ಎಂಜಿ ಮೋಟಾರ್ಸ್‌, ಅಲ್ಲೇ ಹೆಕ್ಟರ್ ತಯಾರಿಕೆ ನಡೆಸಿದೆ. ಶೇ 75ರಷ್ಟು ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೀವ ಚಾಬಾ ತಿಳಿಸಿದ್ದಾರೆ.

2019ರ ಮೇ ಒಳಗಾಗಿ ದೇಶದಲ್ಲಿ 100 ಮಾರಾಟ ಮಳಿಗೆ ಮತ್ತು ಸೇವಾ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಿದೆ ಎಂದಿರುವ ಅವರು ಈ ವಿಭಾಗಗಳಲ್ಲಿರುವ ಜೀಪ್‌ ಹಾಗೂ ಇನ್ನಿತರ ಬ್ರಾಂಡ್‌ನೊಂದಿಗೆ ಪೈಪೋಟಿ ನಡೆಸಬೇಕಿದೆ.

ಈಗಾಗಲೇ ಕಾರುಗಳ ಪ್ರದರ್ಶನವನ್ನು ದೇಶದ 10 ನಗರಗಳಲ್ಲಿ ಆರಂಭಿಸಿದೆ. 2020ರ ಹೊತ್ತಿಗೆ ಬ್ಯಾಟರಿ ಚಾಲಿಕ ಕಾರು ಪರಿಚಯಿಸುವ ವಾಗ್ದಾನವನ್ನು ಈ ಹಿಂದೆ ಕಂಪೆನಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT