ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೆಜ್ಡಿ’ಯ ಮೂರು ಹೊಸ ಬೈಕ್ ಬಿಡುಗಡೆ

Last Updated 13 ಜನವರಿ 2022, 10:42 IST
ಅಕ್ಷರ ಗಾತ್ರ

ಮುಂಬೈ: ಕ್ಲಾಸಿಕ್‌ ಲೆಜೆಂಡ್ಸ್‌ ಕಂಪನಿಯು, ಭಾರತದ ಐಕಾನಿಕ್ ದ್ವಿಚಕ್ರ ವಾಹನಗಳ ಪೈಕಿ ಒಂದಾಗಿರುವ ‘ಯೆಜ್ಡಿ’ಯನ್ನು ಮಾರುಕಟ್ಟೆಗೆ ಮತ್ತೆ ಬಿಡುಗಡೆ ಮಾಡಿದೆ. ಕಂಪನಿಯು ಮೂರು ಹೊಸ ಮಾದರಿಗಳನ್ನು ಗುರುವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆಯು ₹ 1.98 ಲಕ್ಷದಿಂದ ₹ 2.09 ಲಕ್ಷದವರೆಗೆ ಇದೆ.

ಯೆಜ್ಡಿ ರೋಡ್‌ಸ್ಟರ್‌ ಬೆಲೆ ₹ 1.98 ಲಕ್ಷದಿಂದ, ಸ್ಕ್ರ್ಯಾಂಬ್ಲರ್‌ ಬೆಲೆ ₹ 2.04 ಲಕ್ಷದಿಂದ ಹಾಗೂ ಅಡ್ವೆಂಚರ್‌ ಬೆಲೆ ₹ 2.09 ಲಕ್ಷದಿಂದ ಆರಂಭ ಆಗುತ್ತದೆ. ಈ ಬೈಕ್‌ಗಳಿಗೆ ₹ 5 ಸಾವಿರ ಕೊಟ್ಟು ಬುಕಿಂಗ್‌ ಮಾಡಬಹುದು ಎಂದು ಕಂಪನಿಯು ತಿಳಿಸಿದೆ.

ಈ ಮೂರು ಬೈಕ್‌ಗಳು ಲಿಕ್ವಿಡ್‌ ಕೂಲ್ಡ್‌, ಫ್ಯೂಯೆಲ್‌ ಇಂಜೆಕ್ಟೆಡ್‌ 334 ಸಿಸಿ ಎಂಜಿನ್‌ ಹೊಂದಿವೆ. ಕ್ಲಾಸಿಕ್‌ ಲೆಜೆಂಡ್ಸ್‌ನ ಎಲ್ಲಾ ವಿತರಣಾ ಜಾಲಗಳಲ್ಲಿ ಹೊಸ ಮಾದರಿಗಳು ಖರೀದಿಗೆ ಲಭ್ಯ ಇರಲಿವೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT