ಬುಧವಾರ, ಸೆಪ್ಟೆಂಬರ್ 18, 2019
25 °C

ಕಾರುಗಳ ಖರೀದಿ: ರಿಯಾಯಿತಿ, ಉಚಿತ ಸವಲತ್ತುಗಳ ಲಾಭ

Published:
Updated:
Prajavani

ಗ್ರಾಹಕರಲ್ಲಿ ವಾಹನ ಖರೀದಿಯ ಆಸಕ್ತಿ ದಿನೇದಿನೇ ಕಡಿಮೆಯಾಗುತ್ತಲೇ ಇದೆ. ವಾಹನ ಮಾರಾಟವು ಸತತ ನಾಲ್ಕನೇ ತಿಂಗಳೂ ಭಾರಿ ಕುಸಿತ ಕಂಡಿದೆ. ವಾಹನ ತಯಾರಿಕಾ ಕಂಪನಿಗಳು ತಮ್ಮಲ್ಲಿ ಮಾರಾಟವಾಗದೇ ಉಳಿದಿರುವ ವಾಹನಗಳನ್ನು ಮಾರಾಟ ಮಾಡಲು ಹರಸಾಹಸ ಪಡುತ್ತಿವೆ. ಇದರಲ್ಲಿ ರಿಯಾಯಿತಿ ಮತ್ತು ಇತರ ಉಚಿತ ಹೆಚ್ಚುವರಿ ಸವಲತ್ತೂಗಳೂ ಸೇರಿವೆ. ಈಗ ದೇಶದಲ್ಲಿ ಹಬ್ಬದ ಋತು ಸಹ ಆರಂಭವಾಗಿದೆ. ರಿಯಾಯಿತಿಯಾದರೂ ಗ್ರಾಹಕರನ್ನು ಷೋರೂಂಗಳತ್ತ ಗ್ರಾಹಕರನ್ನು ಸೆಳೆಯಬಹುದು ಎಂಬುದು ಕಂಪನಿಗಳ ನಿರೀಕ್ಷೆ.

* ಎಲ್ಲಾ ಕಾರು ತಯಾರಿಕಾ ಕಂಪನಿಗಳೂ ತಮ್ಮ ಎಲ್ಲಾ ಕಾರುಗಳ ಎಕ್ಸ್‌ಷೋರೂಂ ಬೆಲೆಯ ಮೇಲೆ ನಿಗದಿತ ಮೊತ್ತದ ರಿಯಾಯಿತಿ ಘೋಷಿಸಿವೆ

* ಇದರ ಜತೆಯಲ್ಲೇ ವಿನಿಮಯ ಬೋನಸ್‌, ಉಚಿತ ಆಕ್ಸೆಸರಿಗಳು, ಉಚಿತ ವಿಸ್ತೃತ ವಾರಂಟಿಗಳನ್ನು ಕಂಪನಿ ಘೋಷಿಸಿವೆ

* ಈ ಎಲ್ಲವುಗಳನ್ನೂ ಸೇರಿಸಿದಾಗ ಗ್ರಾಹಕರಿಗೆ ದೊರೆಯುವ ಲಾಭವನ್ನು ಕಂಪನಿಗಳು ಬಹಿರಂಗಪಡಿಸಿವೆ

* ಇಲ್ಲಿ ತೋರಿಸಲಾಗಿರುವ ಮೊತ್ತವು ಆಯಾ ವಾಹನದ ಖರೀದಿಯ ಮೇಲೆ ದೊರೆಯಬಹುದಾದ ಲಾಭದ ಗರಿಷ್ಠ ಮೊತ್ತವಾಗಿದೆ. ಇದು ಅವತರಣಿಕೆಯಿಂದ ಅವತರಣಿಕೆಗೆ ವ್ಯತ್ಯಾಸವಾಗುತ್ತದೆ

* ಖರೀದಿ ಮೇಲಿನ ಲಾಭದ ಗರಿಷ್ಠ ಮೊತ್ತ ನಗರದಿಂದ ನಗರಕ್ಕೆ ವ್ಯತ್ಯಾಸವಾಗುತ್ತದೆ

ಮಾರುತಿ ಸುಜುಕಿ

₹ 1.05 ಲಕ್ಷ - ವಿಟಾರಾ ಬ್ರೆಜಾ ಸಿಎಸ್‌ಯುವಿ ಖರೀದಿಯ ಮೇಲಿನ ಲಾಭದ ಗರಿಷ್ಠ ಮೊತ್ತ

₹ 90,000 - ಡಿಸೈರ್‌ ಸಿಸೆಡಾನ್‌ ಖರೀದಿಯ ಮೇಲಿನ ಲಾಭದ ಗರಿಷ್ಠ ಮೊತ್ತ

₹ 80,000 - ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ಖರೀದಿಯ ಮೇಲಿನ ಲಾಭದ ಗರಿಷ್ಠ ಮೊತ್ತ

₹ 70,000 - ಆಲ್ಟೊ ಮತ್ತು ಆಲ್ಟೊ ಕೆ10 ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 70,000 - ಸೆಲಾರಿಯೊ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 55,000 - ಎಕೊ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 35,000 - ಆಮ್ನಿ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 25,000 - ವ್ಯಾಗನ್ ಆರ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 85,000 - ಬಲೆನೊ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 1.3 ಲಕ್ಷ - ಎಸ್‌–ಕ್ರಾಸ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 95,000 - ಸಿಯಾಜ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 75,000 - ಇಗ್ನಿಸ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

ಟಾಟಾ ಮೋಟರ್ಸ್‌

₹ 90,000 - ಹೆಕ್ಸಾ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 70,000 - ಸಫಾರಿ ಸ್ಟಾರ್ಮ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 40,000 - ಹ್ಯಾರಿಯರ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 55,000 - ನೆಕ್ಸಾನ್‌ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 45,000 - ಟಿಯಾಗೊ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 60,000 - ಟಿಗಾರ್‌ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

ಮಹೀಂದ್ರಾ ಆ್ಯಂಡ್ ಮಹೀಂದ್ರಾ

₹ 40,000 - ಎಕ್ಸ್‌ಯುವಿ 5ಒಒ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 83,000 - ಟಿಯುವಿ 3ಒಒ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 77,000 - ಕೆಯುವಿ 1ಒಒ ಎನ್‌ಎಕ್ಸ್‌ಟಿ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 75,000 - ಸ್ಕಾರ್ಪಿಯೊ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 30,000 - ಬೊಲೆರೊ ಪವರ್ ಪ್ಲಸ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 19,000 - ಥಾರ್ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

₹ 45,000 - ಮರ್ರಾಸ್ಸೊ ಖರೀದಿಯ ಮೇಲೆ ದೊರೆಯುವ ಲಾಭದ ಗರಿಷ್ಠ ಮೊತ್ತ

Post Comments (+)