ಗುರುವಾರ , ನವೆಂಬರ್ 21, 2019
23 °C

ಮಾರುತಿ ಬಲೆನೊ ಆರ್‌ಎಸ್‌ ಬೆಲೆ ₹ 1 ಲಕ್ಷ ಇಳಿಕೆ

Published:
Updated:

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಕ್ಯಾಂಪ‍್ಯಾಕ್ಟ್‌ ಕಾರ್‌ ಬಲೆನೊ ಆರ್‌ಎಸ್‌ ಬೆಲೆಯಲ್ಲಿ ₹1 ಲಕ್ಷ ಇಳಿಕೆ ಮಾಡಿದೆ. ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆ ₹ 7.88 ಲಕ್ಷದಿಂದ ಆರಂಭವಾಗಲಿದೆ. 

ಕೆಲವು ಮಾದರಿಗಳ ಎಕ್ಸ್‌ ಷೋರೂಂ ಬೆಲೆಯಲ್ಲಿ ₹ 5 ಸಾವಿರದವರೆಗೂ ಇಳಿಕೆ ಮಾಡಿದ ಎರಡು ದಿನಗಳ ಬಳಿಕ ಈ ಘೋಷಣೆ ಮಾಡಿದೆ.

ಆಲ್ಟೊ 800, ಆಲ್ಟೊ ಕೆ10, ವಿತಾರಾ ಬ್ರೇಜಾ, ಎಸ್‌ ಕ್ರಾಸ್‌, ಇಗ್ನಿಸ್‌,  ಡೀಸೆಲ್‌ ಎಂಜಿನ್‌ನ ಸ್ವಿಫ್ಟ್‌, ಬಲೆನೊ, ಡಿಸೈರ್‌, ಟೂರ್‌ ಎಸ್‌ ಕಾರುಗಳ ಬೆಲೆಯಲ್ಲಿ ಇಳಿಕೆ ಆಗಿದೆ. ಈ ಮಾದರಿಗಳ ಬೆಲೆ ₹ 2.93 ಲಕ್ಷದಿಂದ ₹ 11.49 ಲಕ್ಷದವರೆಗಿದೆ.

ಪ್ರತಿಕ್ರಿಯಿಸಿ (+)