ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜಿನ ಸವಾರಿಗೆ ಸೂಪರ್‌ ಬೈಕ್: ಮಾರುಕಟ್ಟೆಯಲ್ಲೀಗ ಸ್ಪೋರ್ಟ್ಸ್ ಬೈಕ್‌ಗಳ ಹವಾ

Last Updated 19 ಸೆಪ್ಟೆಂಬರ್ 2019, 7:22 IST
ಅಕ್ಷರ ಗಾತ್ರ

ಸ್ಪೋರ್ಟ್ಸ್ ಬೈಕ್‌ಗಳನ್ನು ಚಲಾಯಿಸುವುದೆಂದರೆ ಹಲವರಿಗೆ ಇಷ್ಟ. ಅದರಲ್ಲೂ ಯುವಕರಿಗೆ ಎಲ್ಲಿಲ್ಲದ ಮೋಜು. ಗಾಲಿಗಳು ರಸ್ತೆಯ ಮೇಲೆ ಇದ್ದರೂ ಗಾಳಿಯಲ್ಲಿ ತೇಲುತ್ತಿರುವಂತಹ ಅನುಭವವನ್ನು ಚಾಲಕನಿಗೆ ಈ ಬೈಕ್‌ಗಳು ನೀಡುವುದರಿಂದ ಇವುಗಳ ಮೇಲೆ ಮಮತೆ ಹೆಚ್ಚು.ವೇಗಕ್ಕೆ ಅನ್ವರ್ಥವೆಂಬಂತೆ ಕಾರ್ಯನಿರ್ವಹಿಸುವ ಈ ಬೈಕ್‌ಗಳು ದುಬಾರಿ ಕೂಡ. ಈ ಸೂಪರ್‌ ಬೈಕ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸುಜುಕಿ ಹಯಾಬುಸಾ
ವಿದ್ಯುನ್ಮಾನ ಉಪಕರಣಗಳು, ನಿಯಂತ್ರಣಕ್ಕೆ ವಿಶೇಷ ಸೌಲಭ್ಯಗಳನ್ನು ಒಳಗೊಂಡಿರುವ ಸುಜುಕಿ ಸಂಸ್ಥೆಯ ಹಯಾಬುಸಾ ಬೈಕ್, ಭಾರತದ ಹಲವು ಯುವಕರ ಅಚ್ಚುಮೆಚ್ಚಿನ ಬೈಕ್. ಜಪಾನ್‌ನ ಈ ಬೈಕ್‌ನಲ್ಲಿ ಸುರಕ್ಷಿತ ಚಾಲನೆಗಾಗಿ ವಿವಿಧ ರೈಡಿಂಗ್ ಮೋಡ್‌ಗಳು ಹೊಂದಿದೆ. ಇದು 266 ಕೆ.ಜಿ. ತೂಕವಿದ್ದು, 6 ಸ್ಪೀಡ್ ಗೇರ್‌ಗಳನ್ನು ಹೊಂದಿದೆ.

ವೇಗ: ಗಂಟೆಗೆ 312 ಕಿ.ಮೀ
ಎಂಜಿನ್: 1340 ಸಿಸಿ
ಬೆಲೆ: ₹13,80,466 (ಎಕ್ಸ್‌ ಷೋರೂಂ)

**

ಕವಾಸಾಕಿ ನಿಂಜಾ ಎಚ್‌2 ಕಾರ್ಬನ್‌
ಜಪಾನ್‌ನ ಪ್ರಮುಖ ವಾಹನ ತಯಾರಿಕಾ ಕಂಪನಿ ಕವಾಸಾಕಿ ನಿಂಜಾ, ಸ್ಪೋರ್ಟ್ಸ್‌ ಬೈಕ್‌ಗಳ ಸರಣಿಯಲ್ಲಿ ಬಿಡುಗಡೆ ಮಾಡಿರುವ ಬೈಕ್ ಇದು. ಲಿಕ್ವಿಡ್ ಕೂಲ್ಡ್ ಇನ್ ಲೈನ್ ಸೂಪರ್‌ಚಾರ್ಜಡ್‌ ನಾಲ್ಕು ಸಿಲಿಂಡರ್ ಇರುವ ಎಂಜಿನ್ ಹೊಂದಿದೆ. ಪೆಟ್ರೋಲ್ ಚಾಲಿತ ಈ ಬೈಕ್ 6 ಗೇರ್‌ಗಳನ್ನು ಹೊಂದಿದೆ. ಎರಡೂ ಚಕ್ರಗಳಲ್ಲಿ ಡಿಸ್ಕ್‌ ಬ್ರೇಕ್‌ಗಳಿವೆ.

ವೇಗ: ಗಂಟೆಗೆ 300 ಕಿ.ಮೀ
ಎಂಜಿನ್‌: 998 ಸಿಸಿ
ಬೆಲೆ: ₹41,79,000 (ಎಕ್ಸ್‌ ಷೋರೂಂ)

**

ಬಿಎಂಡಬ್ಲ್ಯು ಎಸ್‌ 1000 ಆರ್‌ಆರ್‌
ಜರ್ಮನಿಯ ಪ್ರಮುಖ ವಾಹನ ತಯಾರಿಕಾ ಕಂಪನಿ ಬಿಎಂಡಬ್ಲ್ಯು ತಯಾರಿಸಿದ ಈ ಬೈಕ್ ಹಲವರ ಕನಸಿನ ಬೈಕ್ ಕೂಡ. ಎಲ್ಲ ರೀತಿಯಲ್ಲೂ ಗುಣಮಟ್ಟದ ಬೈಕ್ ಇದಾಗಿದೆ. ನಿಂಜಾ ಬೈಕ್‌ಗಳಿಗಿಂತ ಭಿನ್ನವಾದ ಸೂಪರ್‌ ಬೈಕ್. ಲಿಕ್ವಿಡ್ ಕೂಲ್ಡ್ ಇನ್ ಲೈನ್ ಸೂಪರ್‌ಚಾರ್ಜಡ್‌ ನಾಲ್ಕು ಸಿಲಿಂಡರ್‌ನ ಎಂಜಿನ್ ಹೊಂದಿದೆ. 17.5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಎರಡೂ ಚಕ್ರಗಳಲ್ಲಿ ಡಿಸ್ಕ್‌ ಬ್ರೇಕ್‌ಗಳಿವೆ.

ವೇಗ:ಗಂಟೆಗೆ 300 ಕಿ.ಮೀ
ಎಂಜಿನ್: 999 ಸಿಸಿ
ಬೆಲೆ: ₹18,50,000 (ಎಕ್ಸ್ ಷೋರೂಂ)

**

ಡುಕಾಟಿ ಪ್ಯಾನಿಗೇಲ್ ವಿ4
ಇಟಲಿಯ ಪ್ರಮುಖ ವಾಹನ ತಯಾರಿಕಾ ಕಂಪನಿ ಡುಕಾಟಿ, ಮಾರುಕಟ್ಟೆಗೆ ತಂದಿರುವ ಬೈಕ್‌ಗಳ ಪೈಕಿ ಇದು ಅತಿ ವೇಗದ ಬೈಕ್‌.ಸುರಕ್ಷಿತ ಚಾಲನೆಗಾಗಿ ವಿವಿಧ ರೈಡಿಂಗ್ ಮೋಡ್‌ಗಳನ್ನು ಅಳವಡಿಸಲಾಗಿದೆ. ವೇಗಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವಂತಹ ಸಸ್ಪೆನ್ಷನ್‌ಗಳನ್ನು ಅಳವಡಿಸಲಾಗಿದೆ. ಇದು 6 ಸ್ಪೀಡ್ ಗಿಯರ್‌ಗಳನ್ನು ಹಾಗೂ 16 ಲೀಟರ್ ಸಾಮರ್ಥ್ಯದ ಇಂಧನ್ ಟ್ಯಾಂಕ್ ಹೊಂದಿದೆ.

ವೇಗ: ಗಂಟೆಗೆ 300+ ಕಿ.ಮೀ
ಎಂಜಿನ್‌: 1,103 ಸಿಸಿ
ಬೆಲೆ: ₹20,53,000 (ಎಕ್ಸ್‌ ಷೋರೂಂ)

**

ಅಪ್ರಿಲಾ ಆರ್‌ಎಸ್‌ವಿ4
2018ರಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಈ ಬೈಕ್ ಅನ್ನು ಬಿಡುಗಡೆ ಮಾಡಿದಾಗ ಬೈಕ್‌ ಪ್ರಿಯರ ಗಮನ ಸೆಳೆದಿತ್ತು. ಇಟಲಿಯ ಅಪ್ರಿಲಾ ಕಂಪನಿಯ ಈ ಬೈಕ್ ಓಹ್ಲಿನ್ ಫೊರ್ಕ್, ಆಪ್ರಿಲಾ ರೈಡ್ ಕಂಟ್ರೋಲ್‌, ಎಲೆಕ್ಟ್ರಾನಿಕ್ ಎಂಜಿನ್ ನಿರ್ವಹಣಾ ವ್ಯವಸ್ಥೆ, ಅಪ್ರಿಲಾ ವೀಲ್ ಕಂಟ್ರೋಲ್, ಅಪ್ರಿಲಾ ಲಾಂಚ್ ಕಂಟ್ರೋಲ್, ಅಪ್ರಿಲ್ ಕ್ವಿಕ್ ಶಿಫ್ಟ್ ಇನ್ನೂ ಹಲವು ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6 ಸ್ಪೀಡ್ ಗಿಯರ್‌ ಬಾಕ್ಸ್‌ಗಳನ್ನು ಒಳಗೊಂಡಿದೆ.

ವೇಗ: ಗಂಟೆಗೆ 300 ಕಿ.ಮೀ
ಎಂಜಿನ್‌: 999 ಸಿಸಿ
ಬೆಲೆ: ₹ 22,80,861 (ಎಕ್ಸ್ ಷೋ ರೂಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT