ಮಂಗಳವಾರ, ಸೆಪ್ಟೆಂಬರ್ 17, 2019
25 °C

ಬಿದಿರು ಕಲಾಕೃತಿಗಳ ಪ್ರದರ್ಶನ

Published:
Updated:
Prajavani

ಮೇ 2ರಿಂದ ಚಿತ್ರಕಲಾ ಪರಿಷತ್ತಿನಲ್ಲಿ ಸಿ.ಪಿ.ಲೆನಿನ್‌ ಅವರು ವಿನ್ಯಾಸಗೊಳಿಸಿರುವ ಬಿದಿರು ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಮೇ 7ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನ ನಡೆಯಲಿದೆ. ಉರವು ಇಂಡಿಜೆನಸ್‌ ಸೈನ್ಸ್‌ ಆ್ಯಂಡ್ ಟೆಕ್ನಾಲಜಿ ಸ್ಟಡೀಸ್ ಸೆಂಟರ್‌ ಈ ಪ್ರದರ್ಶನ ಆಯೋಜಿಸಿದೆ. 

ಬಿದಿರಿನಲ್ಲೂ ವಿಭಿನ್ನವಾದ, ಕ್ರಿಯಾಶೀಲ ಕಲಾಕೃತಿಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಮೊದಲ ಬಾರಿಗೆ ಅವರು ತೋರಿಸಿಕೊಟ್ಟಿದ್ದಾರೆ. ಕೇರಳದ ವಯನಾಡಿನ ಸಂಸ್ಥೆ ಅಲ್ಲಿಯ ಆದಿವಾಸಿಗಳಿಗೆ ನೆರವು ನೀಡುವ ಉದ್ದೇಶದಿಂದ ಬಿದಿರಿನ ಕಲಾಕೃತಿಗಳನ್ನು ರಚಿಸಿತು. ಪೆನ್‌ ಸ್ಟ್ಯಾಂಡ್‌ನಿಂದ ಹಿಡಿದು ಮೊಬೈಲ್‌ ಹೋಲ್ಡರ್‌ಗಳನ್ನೂ ತಯಾರಿಸಿ ಲಾಭ ಪಡೆದುಕೊಂಡಿತು. ಈ ಹಣ ಆದಿವಾಸಿಗಳ ಜೀವನಕ್ಕೆ ಸಹಾಯವಾಯಿತು. 

ಆದರೆ ಕಲಾಕೃತಿಗಳನ್ನು ಯಾವುದೇ ಲಾಭದ ಉದ್ದೇಶ ಇಲ್ಲದೇ ತಯಾರಿಸಲಾಗುತ್ತಿದೆ. ಪೇಂಟಿಂಗ್‌ಗಳನ್ನು ಮಾತ್ರ ಕಲಾಕೃತಿಗಳಾಗಿ ನೋಡುವ ಬದಲು ಬಿದಿರಿನಿಂದಲೂ ಗೋಡೆಗೆ ಹಾಕುವಂತಹ ಕಲಾಕೃತಿಗಳು ಹಾಗೂ ಮನೆಯ ಕೋಣೆಗಳನ್ನು ಅಲಂಕರಿಸುವ ವಸ್ತುಗಳನ್ನು ತಯಾರಿಸಬಹುದು ಎಂದು ಲೆನಿನ್‌ ಅವರು ಹೇಳುತ್ತಾರೆ.

ಸ್ಥಳ: ದೇವರಾಜ್‌ ಅರಸ್‌ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಉದ್ಘಾಟನೆ–ಮೇ 2ರಂದು ಸಂಜೆ 4ಕ್ಕೆ, ಅತಿಥಿ–ಬೋಸ್‌ ಕೃಷ್ಣಮಾಚಾರಿ.

Post Comments (+)