ಬಂದ್‌ ಪ್ರಶ್ನಿಸಿ ಪಿಐಎಲ್‌: ವಿಚಾರಣೆಗೆ ನಿರಾಕರಣೆ

7

ಬಂದ್‌ ಪ್ರಶ್ನಿಸಿ ಪಿಐಎಲ್‌: ವಿಚಾರಣೆಗೆ ನಿರಾಕರಣೆ

Published:
Updated:

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಂದ್ ಆಚರಿಸುವುದನ್ನು ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ಸೋಮವಾರ ನಿರಾಕರಿಸಿತು.

ಈ ಹಿಂದೆ ರಾಜ್ಯದಲ್ಲಿ ನಡೆದ ವಿವಿಧ ಬಂದ್‌ಗಳನ್ನು ವಿರೋಧಿಸಿ ಪಿಐಎಲ್‌ ಸಲ್ಲಿಸಿದ್ದ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘವು ಸೋಮವಾರ ಈ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಶ್ರದ್ಧಾ ಸಂಘದ ಪರ ವಕೀಲರು ಮೊಮೊ ಸಲ್ಲಿಸಿದರು.

ಆದರೆ, ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಪೀಠ, ‘ಈಗಾಗಲೇ ಬಂದ್ ವಿಚಾರವಾಗಿ ಹೈಕೋರ್ಟ್‌ನ ಮಧ್ಯಂತರ ಆದೇಶವಿದೆ. ಮತ್ತೆ ಅದೇ ವಿಚಾರವಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದು ತಿಳಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !