ಬಸವಣ್ಣ ಭಾವಚಿತ್ರ ಅಳವಡಿಕೆಗೆ ಬಸವ ಸೇನೆ ಆಗ್ರಹ

ಮಂಗಳವಾರ, ಮೇ 21, 2019
24 °C
ರಾಷ್ಟ್ರೀಯ ಬಸವ ಸೇನೆ ವತಿಯಿಂದ ಜಿಲ್ಲಾಧಿಕಾರಿ ಎಂ.ಕನಗವಲ್ಲಿಗೆ ಮನವಿ

ಬಸವಣ್ಣ ಭಾವಚಿತ್ರ ಅಳವಡಿಕೆಗೆ ಬಸವ ಸೇನೆ ಆಗ್ರಹ

Published:
Updated:
Prajavani

ವಿಜಯಪುರ: ಸರ್ಕಾರದ ಅಧಿಕೃತ ಆದೇಶವಿದ್ದರೂ, ಕೆಲ ಸರ್ಕಾರಿ ಕಚೇರಿಗಳು ಹಾಗೂ ಶಾಲಾ–ಕಾಲೇಜುಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸದಿರುವುದನ್ನು ಖಂಡಿಸಿ ರಾಷ್ಟ್ರೀಯ ಬಸವ ಸೇನೆ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಎಂ.ಕನಗವಲ್ಲಿಗೆ ಮನವಿ ಸಲ್ಲಿಸಲಾಯಿತು.

ಸೇನೆಯ ಸ್ವಪ್ನಾ ಕಣಮುಚನಾಳ ಮಾತನಾಡಿ, ‘ವಿಶ್ವಗುರು ಬಸವಣ್ಣ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದರು. ಮೊಟ್ಟ ಮೊದಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಲು ಕಲ್ಯಾಣ ರಾಜ್ಯ ಕಟ್ಟಿ ವಿಶ್ವ ಶಾಂತಿಗಾಗಿ ಶ್ರಮಿಸಿದರು. ಅಂತಹ ಮಹಾನ್‌ ಚೇತನ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ.

ಆದರೆ, ಕೆಲವು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಅವರ ಭಾವಚಿತ್ರವನ್ನು ಅಳವಡಿಸದಿರುವುದು ಖೇದಕರ ಸಂಗತಿ. ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿ, ರಜೆಯ ಮೋಜು ಮಸ್ತಿಯಲ್ಲಿ ಕಾಲ ಕಳೆಯದೆ ಎಲ್ಲರೂ ಸಡಗರ ಸಂಭ್ರಮದಿಂದ ಬಸವ ಜಯಂತಿ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸೋಮನಗೌಡ ಕಲ್ಲೂರ ಮಾತನಾಡಿ, ‘ಬಸವ ಜಯಂತಿ ಒಳಗಾಗಿ ಪ್ರತಿಯೊಂದು ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು. ಸರ್ಕಾರದ ಆದೇಶ ಗಾಳಿಗೆ ತೂರಿ ಬಸವಾದಿ ಶರಣರಿಗೆ ಅಪಮಾನ ಎಸಗಿದರೆ ಸಹಿಸುವುದಿಲ್ಲ. ಅಂತಹ ಕೃತ್ಯ ಕಂಡು ಬಂದರೆ, ಆ ಕಚೇರಿಗಳಿಗೆ ಸೇನೆಯ ಕಾರ್ಯಕರ್ತರು ಬೀಗ ಹಾಕಿ ಉಗ್ರವಾದ ಹೋರಾಟ ನಡೆಸುತ್ತಾರೆ’ ಎಂದು ಎಚ್ಚರಿಸಿದರು.

ಸೇನೆಯ ದಾನೇಶ ಅವಟಿ, ಆನಂದ ಜಂಬಗಿ, ಬಸವರಾಜ ಅವಜಿ, ಭೀಮಾಶಂಕರ ಪತ್ತಾರ ಮಾತನಾಡಿದರು.

ಶಿವು ಮಿಂಚಿನಾಳ, ಸಂತೋಷ ಪಾಟೀಲ, ತಾಹೀರ್‌ ಹುಸೇನ್‌, ಶಿವಾನಂದ ವಿಭೂತಿ, ರಾಮಣ್ಣ ವಜ್ರಮಟ್ಟಿ, ಶಿವು ಭೂತನಾಳ, ಅಮಿತ ತಂಗಾ, ಪಿಂಟು ಪಾಟೀಲ, ರಮೇಶ ಶಿರೂರ, ಪರಶುರಾಮ ಕೊಂಚಿಕೊರವರ, ಶ್ರೀಕಾಂತ ಬಿರಾದಾರ, ರವಿ ಹೂಗಾರ, ದುರಗೇಶ ಜುಮನಾಳ, ವಿಶಾಲ ಗೌಳಿ, ಶಿವು ಮನಗೂಳಿ, ಸಂತೋಷ ಕೊಂಚಿಕೊರವರ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !