ತೆರಿಗೆ ವಸೂಲಿ: ‘ತಮಟೆ’ ಮೊರೆ ಹೋಗಲಿದೆ ಪಾಲಿಕೆ

7

ತೆರಿಗೆ ವಸೂಲಿ: ‘ತಮಟೆ’ ಮೊರೆ ಹೋಗಲಿದೆ ಪಾಲಿಕೆ

Published:
Updated:

ಬೆಂಗಳೂರು: ವಾಣಿಜ್ಯ ಕಟ್ಟಡಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ರೂಪಾಯಿ ಆಸ್ತಿ ತೆರಿಗೆ ವಸೂಲಿಗಾಗಿ ಮತ್ತೆ ‘ತಮಟೆ’ ಮೋರೆ ಹೋಗಲು ನೂತನ ಮೇಯರ್‌ ಗಂಗಾಂಬಿಕೆ ಚಿಂತನೆ ನಡೆಸಿದ್ದಾರೆ.

ಈ ಹಿಂದೆ ಸಿದ್ದಯ್ಯ ಅವರು ಪಾಲಿಕೆ ಆಯುಕ್ತರಾಗಿದ್ದಾಗ ಬಾಕಿ ತೆರಿಗೆ ವಸೂಲಿಗೆ ಪಾಲಿಕೆ ಈ ತಂತ್ರವನ್ನು ಅನುಸರಿಸಿತ್ತು. ತೆರಿಗೆ ಬಾಕಿ ಉಳಿಸಿಕೊಂಡವರ ಕಟ್ಟಡಗಳ ಮುಂದೆ ತಮಟೆ ಬಡಿಯುವ ಹಾಗೂ ಬಾಕಿ ಉಳಿಸಿಕೊಂಡಿರುವ ಮೊತ್ತವೆಷ್ಟು ಎಂಬುದನ್ನು ಸಾರಿ ಹೇಳುವ ಈ ತಂತ್ರ ಅನೇಕರಿಗೆ ಮುಜುಗರ ಉಂಟು ಮಾಡಿತ್ತು. ಸಾರ್ವಜನಿಕವಾಗಿ ಅವಮರ್ಯಾದೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಅನೇಕರು ಸ್ವತಃ ಮುಂದೆ ಬಂದು ಬಾಕಿಯನ್ನು ಚುಕ್ತಾ ಮಾಡಿದ್ದರು.

‘ಆಸ್ತಿ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ಹಿಂದುಳಿದಿದೆ. ದೊಡ್ಡ ಸಂಸ್ಥೆಗಳೇ ತೆರಿಗೆಯನ್ನು ಸರಿಯಾಗಿ ಕಟ್ಟುತ್ತಿಲ್ಲ.  ತಮಟೆ ಬಾರಿಸುವ ತಂತ್ರದ ಮೊರೆ ಹೋದರೆ, ಒಂದಷ್ಟು ಬಾಕಿ ವಸೂಲಾಗಬಹುದು ಎಂಬ ಚಿಂತನೆ ನನ್ನದು’ ಎಂದು ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !