ಬುಧವಾರ, ಜೂನ್ 16, 2021
28 °C

ಚಿಕ್ಕ, ಚೊಕ್ಕ ಅಡುಗೆ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸ್ಥಳಾವಕಾಶ ಕಡಿಮೆ ಇದ್ದ ಮಾತ್ರಕ್ಕೆ ನೀವು ನಿಮ್ಮ ಕನಸಿನ ಅಡುಗೆಮನೆಯ್ನು ಹೊಂದುವುದು ಅಸಾಧ್ಯ ಎಂದಲ್ಲ.  ಕೊಠಡಿಯ ಸಹಜವಾದ ಪ್ರದೇಶವನ್ನು ಬಳಸಿಕೊಂಡು ಗೊಂದಲರಹಿತ, ವಿಶಾಲವಾಗಿ ಕಾಣಿಸುವ ಕೊಠಡಿಯನ್ನು ಸೃಷ್ಟಿಸುವದು ಪ್ರಮುಖವಾಗುತ್ತದೆ. ಅದಕ್ಕಾಗಿ ಅನಗತ್ಯವಾದ ಕೆಲ ವಸ್ತುಗಳನ್ನು ನಿರ್ದಯವಾಗಿ ತಿರಸ್ಕರಿಸಬೇಕಾದ ಸಂದರ್ಭವೂ ಒದಗಿಬರಬಹುದು.

ಸಣ್ಣ ಅಡುಗೆಮನೆಗಳಿಗೆ ಅತ್ಯವಶ್ಯಕ ಇದರಿಂದಾಗಿ ನೀವು ಹೆಚ್ಚಿನ ಸಾಧನಗಳನ್ನು ಖರೀದಿಸುವುದು ತಪ್ಪಿ ಶೇಖರಣಾ ಸ್ಥಳದ ಕಡಿಮೆ ಅಗತ್ಯದಿಂದಾಗಿ ನಿಮ್ಮ ಅಡುಗೆಮನೆ ಚೊಕ್ಕವಾಗಿ ಕಾಣುವಂತೆ ಮಾಡಬಹುದು. ಇಂತಹ ಸಾಧನಗಳ ಪೈಕಿ ಜ್ಯೂಸರ್ ಮಿಕ್ಸರ್ ಗ್ರೈಂಡರ್ ಒಂದಾಗಿದ್ದು ಅಡುಗೆಮನೆಗೆ ಅತ್ಯವಶ್ಯಕವಾದ ವಸ್ತುವಾಗಿದೆ. ಮಿಕ್ಸರ್ ಗ್ರೈಂಡರ್, ಜ್ಯೂಸರ್‌ನ ಕೆಲಸವನ್ನೂ ಸುಲಭವಾಗಿ ಮಾಡುವಾಗ ಪ್ರತ್ಯೇಕ ಜ್ಯೂಸರ್ ಖರೀದಿಸಿ, ಅಡುಗೆಮನೆಯ ಶೇಖರಣಾ ಸ್ಥಳ ಹಾಗೂ ಹಣ ಎರಡನ್ನೂ ವ್ಯರ್ಥ ಮಾಡುವುದೇಕೆ? ಎಂಬುದು ಪ್ರಶ್ನೆ.

 ನಮ್ಮ ಕಪಾಟಿನಲ್ಲಿ ಶೇಖರಣಾ ಸ್ಥಳ ಕಡಿಮೆ ಇದ್ದಲ್ಲಿ ಅಥವಾ ನಿಮಗೆ ಅನೇಕ ಉಪಯೋಗಗಳನ್ನು ಹೊಂದಿರುವ ಉಪಯುಕ್ತ ಅಡುಗೆ ಸಾಧನದ ಅಗತ್ಯವಿದ್ದಲ್ಲಿ, ಬಹುಪಯೋಗಿ ಕುಕ್ಕರ್ ಒಂದು ಉತ್ತಮ ಹೂಡಿಕೆ. ಅನೇಕ ಬ್ರಾಂಡ್‌ಗಳು, ಅನ್ನ ಮಾಡುವ, ಸ್ವಲ್ಪ ಎಣ್ಣೆ ಹಾಕಿ ಹುರಿಯುವ, ಹಬೆಯಲ್ಲಿ ಬೇಯಿಸುವ ಜೊತೆಗೆ ಯೋಗರ್ಟ್ ತಯಾರಿಸುವ ಮತ್ತು ಓಟ್‌ಮೀಲ್ ಮಾಡುವಂತಹ ವಿವಿಧ ವೈಶಿಷ್ಟ್ಯಗಳನ್ನು ಒದಗಿಸುತ್ತವೆ. ಕೆಲ ಬಹುಪಯೋಗಿ ಕುಕ್ಕರ್‌ಗಳು ದೊಡ್ಡದಾಗಿದ್ದರೆ, ಇನ್ನೂ ಕೆಲವು ಚಿಕ್ಕದಾಗಿದ್ದು ಒಬ್ಬರು ಅಥವಾ ಇಬ್ಬರಿಗೆ ಅಡುಗೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಆರೋಗ್ಯಕರ ಆಹಾರ ತಯಾರಿಸಲು ನೀವು ನಿರ್ಧರಿಸಿದರೆ, ತರಕಾರಿಗಳನ್ನು ಕತ್ತರಿಸಲು ಬಹಳ ಸಮಯ ಕಳೆಯುತ್ತೀರಿ ಎಂದೇ ಅರ್ಥ. ವಿವಿಧ ಬಗೆಯ ಚಾಕು ಅಥವಾ ಕತ್ತಿಗಳನ್ನು ಇಟ್ಟುಕೊಳ್ಳುವ ಬದಲು ಕಡಿಮೆ ಜಾಗದಲ್ಲಿ ಇಡಬಹುದಾದಂತಹ, ಮೊಣಚಾದ ಬ್ಲೇಡ್‌ಗಳನ್ನು ಹೊಂದಿರುವ ವೆಜಿಟೆಬಲ್ ಕಟರ್ ಅಂಡ್ ಡೈಸರ್ ಹೊಂದುವುದು ಸೂಕ್ತ. 

ಮೈಕ್ರೋವೇವ್ ಪ್ರೆಷರ್ ಕುಕ್ಕರ್. ಭಾರತದಲ್ಲಿ ಮೈಕ್ರೋವೇವ್‌ಗಳನ್ನು ಅದರ ದಕ್ಷತೆಗೆ ತಕ್ಕುನಾಗಿ ಬಳಸಲಾಗುತ್ತಿಲ್ಲ.  ಮೈಕ್ರೋವೇವ್‌ನಲ್ಲಿ ಅಡುಗೆ ಮಾಡುವ ಪರಿಕಲ್ಪನೆ ಇನ್ನೂ ಜನಜನಿತವಾಗಿಲ್ಲ. ಗ್ಯಾಸ್ ಒಲೆಯ ಅಗತ್ಯವೂ ಇಲ್ಲದಂತಹ ಆರೋಗ್ಯಕರ ಅಡುಗೆಯ ವಿಧಾನ ವಾದ ಮೈಕ್ರೋವೇವ್ ಚಿಕ್ಕದಾದ ಅಡುಗೆಮನೆಗೆ ಸರಿಯಾದ ಮದ್ದು. ಮೈಕ್ರೋವೇವ್ ಪ್ರೆಷರ್ ಕುಕ್ಕರ್ ಸಾಮಾನ್ಯ ಕುಕ್ಕರ್‌ಗಿಂತ ಚಿಕ್ಕದಾಗಿದ್ದು, ಶೇಖರಣೆ ಹಾಗೂ ಸ್ವಚ್ಛಗೊಳಸಲು ಸುಲಭವಾಗಿದೆ. 

ವಿನ್ಯಾಸ ಹಾಗೂ ಸಾಧನಗಳ ಶೇಖರಣೆಯ ವಿಚಾರಕ್ಕೆ ಬಂದಾಗ ಚಾಣಾಕ್ಷ ಯೋಜನೆ ಜೊತೆಗೆ ಕೊಂಚ ಜಾಣ್ಮೆಯ ಅಗತ್ಯವಿರುತ್ತದೆ. ಸ್ಥಳಾವಕಾಶ ಕಡಿಮೆ ಇದ್ದಾಗ ವಿನ್ಯಾಸಕಾರರೂ ಕಪಾಟನ್ನು ಗೋಡೆಗೆ ಜೋಡಿಸುವ ಪರಿಕಲ್ಪನೆಯನ್ನು ಕೈಬಿಡುತ್ತಾರೆ. ಬದಲಾಗಿ ಕ್ಲೀನ್ ಲೈನ್ಸ್ ಅಥವಾ ಆಂಗ್ಯುಲಾರ್ ಶೆಲ್ಫಗಳ ಆಯ್ಕೆ ಮಾಡಿಕೊಳ್ಳುತ್ತಾರೆ ಇದು ಕಡಿಮೆ ಜಾಗವನ್ನು ಆಕ್ರಮಿಸುತ್ತದೆ. ವಿನ್ಯಾಸಕಾರರು ಕಿಟಕಿಗೆ ಸಮರ್ಪಕವಾದ ಸ್ಥಳವಿನಿಯೋಜನೆಯ ಸಲಹೆಯನ್ನೂ ನೀಡುತ್ತಾರೆ.

ಇದು ಅಡುಗೆಮನೆಗೆ ಹೆಚ್ಚು ಬೆಳಕು ಮತ್ತು ಗಾಳಿಯನ್ನು ಒದಗಿಸುತ್ತದೆ. ಸ್ವಲ್ಪ ಜಾಗರೂಕತೆ ತೋರಿದರೆ, ಅಡುಗೆಮನೆಯನ್ನು ದೊಡ್ಡ ಕಿಟಕಿಗಳನ್ನು ಅಳವಡಿಸಲು ಅನುವಾಗುವಂತೆ ಸಂರಚಿಸಬಹುದು ಇದರಿಂದಾಗಿ ಸೂರ್ಯನ ಬೆಳಕು ಕೊಠಡಿಯಳಗೆ ನುಸುಳುವುದರಿಂದ ಕೊಠಡಿಯ ವಿಸ್ತಾರ ಹೆಚ್ಚಾದಂತೆ ಭಾಸವಾಗುತ್ತದೆ. ತಿಳಿ ಬಣ್ಣದ ಕಪಾಟು ಹಾಗೂ ಕಟ್ಟೆಯನ್ನು ಬಳಸಿ ಮತ್ತು ಗೊಂದಲಮಯವಾಗಿ ಹಾಗೂ ಕೊಳಕಾಗಿ ಕಾಣುವುದನ್ನು ಕಡಿಮೆ ಮಾಡುವ ವಿವಿಧ ಬಹುಪಯೋಗಿ ಅಡುಗೆ ಸಾಧನಗಳನ್ನು ಬಳಸಿ.

ದಿನೇಶ್ ಗರ್ಗ್, ಲೇಖಕರು: ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.