ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ಅಧರಕ್ಕೆ...

ಅಂದದ ಮಾತು
Last Updated 29 ಜೂನ್ 2018, 10:33 IST
ಅಕ್ಷರ ಗಾತ್ರ

ಮುಖದ ಅಲಂಕಾರದಲ್ಲಿ ತುಟಿಗಳ ಪಾತ್ರ ಮಹತ್ವದ್ದು. ತುಟಿಗಳ ಅಲಂಕಾರವಾಗದೇ ಮೇಕಪ್ ಅಪೂರ್ಣ. ಪರಿಪೂರ್ಣವಾದ ಮೇಕಪ್‌ನಲ್ಲಿ ತುಟಿಗಳ ರಂಗಿನದ್ದು ವಿಶೇಷ ಸ್ಥಾನ. ನಿಮ್ಮ ಕೆನ್ನೆ, ಕಣ್ಣುಗಳ ಅಲಂಕಾರದ ಜತೆಗೆ ತುಟಿಗೆ ಹಚ್ಚುವ ಲಿಪ್‌ಸ್ಟಿಕ್ ಕೂಡಾ ಸೂಕ್ತವಾಗಿ ಹೊಂದುವಂತಿರಬೇಕು.

ಒಬ್ಬೊಬ್ಬರ ತುಟಿಗಳು ಒಂದೊಂದು ರೀತಿಯಲ್ಲಿರುತ್ತವೆ. ಕೆಲವರಿಗೆ ತೆಳು ತುಟಿಗಳಿದ್ದರೆ ಮತ್ತೆ ಕೆಲವರ ತುಟಿಗಳು ದಪ್ಪಗಿರಬಹುದು. ಬಾಯಿ ಆಕಾರದಲ್ಲಿ ಮೇಲ್ತುಟಿ ದಪ್ಪ ಇಲ್ಲವೇ ಕೆಳತುಟಿ ದಪ್ಪವೂ ಇರಬಹುದು. ಅಂಥ ಸಂದರ್ಭದಲ್ಲಿ ತುಸು ಮುತುವರ್ಜಿ ವಹಿಸಿ ತುಟಿಗಳ ಆಕಾರಕ್ಕೆ ತಕ್ಕಂತೆ ಮೇಕಪ್ ಮಾಡಿಕೊಂಡಲ್ಲಿ ನಿಮ್ಮ ಮೇಕಪ್ ಪರಿಪೂರ್ಣ ಎನಿಸುತ್ತದೆ.

ತುಟಿಗಳ ಆಕಾರಕ್ಕೆ ತಕ್ಕಂತೆ ಅಲಂಕಾರ ಮಾಡಿಕೊಳ್ಳುವ ಕುರಿತು ಇಲ್ಲಿವೆ ಕೆಲ ಟಿಪ್ಸ್.

* ದಪ್ಪನೆಯ ಮೇಲ್ತುಟಿ: ಮೇಲ್ತುಟಿ ದಪ್ಪವಾಗಿದ್ದು, ಕೆಳತುಟಿ ತೆಳುವಾಗಿದ್ದಾಗ ಎರಡರ ನಡುವೆ ಬ್ಯಾಲೆನ್ಸ್ ಆಗಿ ಮೇಕಪ್ ಮಾಡಬೇಕು. ಆಗ ಕೆಳತುಟಿಯ ಅಂಚಿನ ಹೊರಗಿನಿಂದ ಲಿಪ್ ಲೈನರ್ ಬಳಸಿ. ‌ಎರಡೂ ತುಟಿಗಳು ಒಂದೇ ಆಕಾರದಲ್ಲಿವೆ ಅನ್ನುವಂತೆ ಕಾಣಲು ಗ್ಲಾಸಿ ಮತ್ತು ತೆಳುಬಣ್ಣದ ಲಿಪ್‌ಸ್ಟಿಕ್ ಹಚ್ಚಿ.

* ಮೇಲ್ತುಟಿಯ ಅಂಚಿನ ಒಳಗಿನಿಂದ ಲಿಪ್‌ಲೈನರ್ ಬಳಸಿ. ನಂತರ ಆ ಗೆರೆಯೊಳಗೆ ಲಿಪ್‌ಸ್ಟಿಕ್ ಹಚ್ಚಿ.


* ದಪ್ಪನೆಯ ಕೆಳತುಟಿ: ಮೇಲ್ತುಟಿಯ ಅಂಚಿನ ಹೊರಗೆ ಲಿಪ್‌ಲೈನರ್ ಹಚ್ಚಿ. ತಿಳಿ ಮತ್ತು ಗ್ಲಾಸಿ ಲಿಪ್‌ಸ್ಟಿಕ್ ಹಚ್ಚಿ ಇದರಿಂದ ಎರಡು ತುಟಿಗಳೂ ಒಂದೇ ಆಕಾರದಲ್ಲಿರುವಂತೆ ಗೋಚರಿಸುತ್ತದೆ. ಕೆಳತುಟಿಯ ಅಂಚಿನ ಒಳಗಿನಿಂದ ಲಿಪ್‌ ಲೈನರ್‌ ಎಳೆದುಕೊಳ್ಳಿ. ಕೆಳತುಟಿಗೆ ಲಿಪ್‌ಗ್ಲಾಸ್ ಹಚ್ಚಬೇಡಿ.

* ತೆಳುತುಟಿಗಳು: ತೆಳ್ಳಗಿರುವ ತುಟಿಗಳು ದಪ್ಪವಾಗಿ ಗೋಚರಿಸಲು ಎರಡೂ ತುಟಿಗಳ ಅಂಚಿನ ಹೊರಗೆ ಲಿಪ್‌ಲೈನರ್ ಎಳೆಯಿರಿ. ಗ್ಲಾಸಿ ಲಿಪ್‌ಸ್ಟಿಕ್ ಬಳಸಿ. ಗಾಢವರ್ಣದ ಲಿಪ್‌ಸ್ಟಿಕ್ ಬಳಕೆ ಬೇಡ.

* ದಪ್ಪನೆಯ ತುಟಿ: ತುಟಿಗಳ ಅಂಚಿನ ಒಳಗೇ ಲಿಪ್‌ಲೈನರ್ ಹಚ್ಚಿ. ದಪ್ಪನೆಯ ತುಟಿಗಳಿಗೆ ಗಾಢವರ್ಣದ ಲಿಪ್‌ಸ್ಟಿಕ್ ಚೆನ್ನಾಗಿ ಕಾಣುತ್ತದೆ. ಮ್ಯಾಟ್ ಲಿಪ್‌ಸ್ಟಿಕ್ ಕೂಡಾ ಆಕರ್ಷಕವಾಗಿ ಕಾಣುತ್ತದೆ.

ಲಿಪ್‌ಸ್ಟಿಕ್‌ನಲ್ಲಿ ಮ್ಯಾಟ್, ಗ್ಲಾಸಿ, ಸ್ಯಾಟಿನ್, ಫ್ರಾಸ್ಟಿ ಹೀಗೆ ಹಲವು ವಿಧಗಳಿವೆ. ನಿಮ್ಮ ತುಟಿಗಳ ಆಕಾರ ಮತ್ತು ನಿಮ್ಮ ಮೈಬಣ್ಣಕ್ಕೆ ಸೂಕ್ತವಾಗಿ ಹೊಂದುವಂಥ ಲಿಪ್‌ಸ್ಟಿಕ್ ಅನ್ನೇ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT