ಬುಧವಾರ, 28 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಶತ್ರು ಬಾಧೆ ನಿವಾರಣೆ ಆಗಲಿದೆ
Published 27 ಜನವರಿ 2026, 23:55 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಿದ್ಯಾಭ್ಯಾಸವನ್ನು ಮುಂದುವರಿಸುವ ಪ್ರಯತ್ನ ಮಾಡಿದಲ್ಲಿ ಸಫಲವಾಗುವುದು. ಹತ್ತಾರು ಜನರಿಗೆ ಮಾರ್ಗದರ್ಶಕರಾಗಿ ನೇಮಕಗೊಳ್ಳುವ ಯೋಗವಿದೆ. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳಿ.
ವೃಷಭ
ಸಿವಿಲ್ ಎಂಜಿನಿಯರುಗಳಿಗೆ ಹೆಚ್ಚು ಲಾಭದ ದಿನ. ಅದೃಷ್ಟ ದೇವತೆ ನಿಮ್ಮ ಕೈ ಹಿಡಿದಿದ್ದಾಳೆ. ನಿಮ್ಮ ವ್ಯಾಪಾರ ವ್ಯವಹಾರಗಳು ಅಧಿಕ ವರಮಾನಗಳನ್ನು ತರಲಿವೆ. ಅನಗತ್ಯ ಖರೀದಿಯಲ್ಲಿ ದುಂದುವೆಚ್ಚ ಮಾಡದಿರಿ.
ಮಿಥುನ
ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ, ಅಭಿವೃದ್ಧಿಯ ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತವೆ. ಶಸ್ತ್ರಚಿಕಿತ್ಸಾ ವೈದ್ಯರಿಗೆ ರೋಗಿಯ ಕುಟುಂಬಸ್ಥರಿಂದ ಪ್ರಶಂಸೆ ಕೇಳಿ ಬರುವುದು.
ಕರ್ಕಾಟಕ
ನೀವು ಮಾಡಿದ ಹಳೆ ತಪ್ಪುಗಳನ್ನೇ ಮತ್ತೆ ಮತ್ತೆ ಹೇಳುವ ಮೂಲಕ ನಿಮ್ಮನ್ನು ಗಾಸಿಗೊಳಿಸುವ ಜನರು ನಿಮಗೆ ಇಂದು ಎದುರಾಗಬಹುದು. ನೀವು ನಿಮ್ಮ ವೈಯಕ್ತಿಕ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ.
ಸಿಂಹ
ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯವಿದೆ. ಹೆಚ್ಚಿನ ಜ್ಞಾನಸಂಪಾದನೆ ಬಗ್ಗೆ ಚಿಂತನೆ ನಡೆಯುವುದು. ದುರ್ಗಾ ದೇವಿಯನ್ನು ಆರಾಧಿಸಿದಲ್ಲಿ ಶುಭವು ಪ್ರಾಪ್ತಿಯಾಗುವುದು.
ಕನ್ಯಾ
ನಿಮ್ಮ ಸಮಾಜ ಸೇವೆಯನ್ನು ಕುಟುಂಬದವರು ಹಾಗೂ ಸಮಾಜದವರು ಗುರುತಿಸಿ ಶ್ಲಾಘಿಸುವರು. ಅನೇಕ ಕಡೆಯಿಂದ ಸಹಾಯ ಹಸ್ತಗಳು ಸಿಗುವವು. ಇದೇ ಪ್ರೇರಣೆಯೊಂದಿಗೆ ಮುಂದುವರಿಯಿರಿ.
ತುಲಾ
ಪತ್ತೇದಾರಿ ಕೆಲಸ ಮಾಡುವವರು ಕಾನೂನುಬಾಹಿರವಾದ ಮಾರ್ಗಗಳನ್ನು ಅನುಸರಿಸದಂತೆ ಕೆಲಸವನ್ನು ಮಾಡಿ. ಶಿಶುವಿನ ಜನನ ಕುಟುಂಬದಲ್ಲಿ ಸಂತೋಷಕ್ಕೆ ಕಾರಣವಾಗುತ್ತದೆ.
ವೃಶ್ಚಿಕ
ಪ್ರಭಾವಿ ವ್ಯಕ್ತಿಗಳ ಒಡನಾಟ ನಿಮಗೆ ಹೆಚ್ಚಿನ ಸ್ಥಾನಮಾನದ ಜೊತೆಯಲ್ಲಿ ಆಯಾಸವನ್ನು ತಂದು ಕೊಡಲಿದೆ. ಮಹತ್ತರವಾದುದನ್ನು ಸಾಧಿಸಲು ಕುಟುಂಬ ಹಾಗೂ ಸ್ವಸ್ಥಾನದಿಂದ ದೂರವಾಗುವ ಸಾಧ್ಯತೆಗಳಿವೆ.
ಧನು
ನಿಮ್ಮ ವ್ಯವಹಾರದಲ್ಲಿ ಅಡ್ಡಿ ಆತಂಕ ಎದುರಾದರೂ ಇಷ್ಟದೇವತೆಯ ಆರಾಧನೆಯಿಂದಾಗಿ ಸಹಜವಾಗಿ ಮುಂದುವರಿಯುವುದು. ಶತ್ರು ಬಾಧೆ ಈ ದಿನದಿಂದ ಹಂತ ಹಂತವಾಗಿ ನಿವಾರಣೆ ಆಗಲಿದೆ.
ಮಕರ
ವಾತ ಅಥವಾ ಪಿತ್ತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಾಣಾಯಾಮ ಉತ್ತಮವಾದುದು. ಉದ್ಯೋಗಕ್ಕಾಗಿ ಹೆಚ್ಚಿನ ಪರಿಶ್ರಮ ಮತ್ತು ದೇವರ ಕೃಪಾ ಕಟಾಕ್ಷ ಪಡೆಯಬೇಕಾಗುವುದು.
ಕುಂಭ
ನಿಮ್ಮನ್ನು ಅವಲಂಬಿಸಿಕೊಂಡು ಕೆಲಸ ಮಾಡುತ್ತಿರುವವರನ್ನು ಕಡೆಗಣಿಸುವುದು ಸರಿಯಲ್ಲ. ಸಮಯವನ್ನು ಅರಿತು ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ.
ಮೀನ
ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವ ನಿಮ್ಮ ವ್ಯಕ್ತಿತ್ವ ಎಲ್ಲರ ವಿರೋಧಕ್ಕೆ ಕಾರಣವಾಗುವುದು. ನಿಮ್ಮ ಮೇಲೆ ನಂಬಿಕೆ ಇಟ್ಟು ಮಾಡಿದಂತಹ ಉಪಕಾರವನ್ನು ಮರೆಯಬೇಡಿ. ರಾಜಕೀಯದಲ್ಲಿ ಪ್ರಭಾವ ಗಳಿಸಿಕೊಳ್ಳುವಿರಿ.
ADVERTISEMENT
ADVERTISEMENT