ಮಂಗಳವಾರ, ಮಾರ್ಚ್ 2, 2021
21 °C

ಡೇನ್ವರ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆದ ನಟ ಕಿಚ್ಚ ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪುರುಷರ ಪ್ರೀಮಿಯಂ ಫ್ರಾಗ್ರನ್ಸ್ ಬ್ರ್ಯಾಂಡ್ ಆಗಿರುವ ಡೇನ್ವರ್‌ಗೆ ಚಂದನವನದ ಖ್ಯಾತ ನಟ ಕಿಚ್ಚ ಸುದೀಪ್ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಈ ಸಹಯೋಗದೊಂದಿಗೆ ಡೇನ್ವರ್‌, ಡಿಯೊಡ್ರೆಂಟ್‌ ಹಾಗೂ ಮೆನ್ ಗ್ರೂವಿಂಗ್ ವಿಭಾಗದಲ್ಲಿ ಕರ್ನಾಟಕದಲ್ಲಿ ಪ್ರೀಮಿಯಂ ಬ್ರ್ಯಾಂಡ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶವನ್ನು ಹೊಂದಿದೆ.

ವೆಸೆಸಾ ಕೇರ್‌ನ ಡೇನ್ವರ್‌ ಪ್ರೀಮಿಯಂ ಬ್ರ್ಯಾಂಡ್ ಆಗಿದ್ದು ಪುರುಷರ ವಿವಿಧ ಬಗೆಯ ಸುಗಂಧದ್ರವ್ಯಗಳು ಹಾಗೂ ಡಿಯೊಡ್ರೆಂಟ್‌ಗಳನ್ನು ಹೊಂದಿದೆ.

ಸುದೀಪ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿರುವ ಬಗ್ಗೆ ಮಾತನಾಡಿರುವ ಡೇನ್ವರ್‌ನ ಮಾರುಕಟ್ಟೆ & ಮಾರಾಟ ವಿಭಾಗದ ನಿರ್ದೇಶಕ ಸೌರಭ್ ಗುಪ್ತಾ ‘ನಮ್ಮ ಬ್ರ್ಯಾಂಡ್ ಅಂಬಾಸಿಡರ್‌ಗಳಾದ ಶಾರುಖ್‌ ಖಾನ್ ಹಾಗೂ ಮಹೇಶ್‌ ಬಾಬು ಅವರಂತಹ ಮೇರುನಟರ ಜೊತೆಗಿನ ಸಹಯೋಗದಿಂದ ಹಿಂದಿ ಹಾಗೂ ತೆಲುಗು ಭಾಷಿಕರು ಇರುವ ಪ್ರದೇಶಗಳಲ್ಲಿ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಿದ್ದೇವೆ. ಈಗ ಕರ್ನಾಟಕದಲ್ಲಿಯೂ ನಮ್ಮ ಹೆಜ್ಜೆ ಗುರುತು ಮೂಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದಿದ್ದಾರೆ.

ಡೇನ್ವರ್‌ ಬಗ್ಗೆ ಮಾತನಾಡಿರುವ ನಟ ಕಿಚ್ಚ ಸುದೀಪ್ ‘ಆರಂಭದಿಂದಲೂ ಡೇನ್ವರ್‌ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ. ಇದು ವಿಶೇಷವಾಗಿ ಯುವ ಗ್ರಾಹಕರನ್ನು ತನ್ನತ್ತ ಸೆಳೆಯಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಈ ಬ್ರ್ಯಾಂಡ್‌ನ ಭಾಗವಾಗುತ್ತಿರುವುದು ನನಗೆ ಖುಷಿ ತಂದಿದೆ’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು