ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ

Published 8 ಜೂನ್ 2023, 16:16 IST
Last Updated 8 ಜೂನ್ 2023, 16:16 IST
ಅಕ್ಷರ ಗಾತ್ರ

ನವದೆಹಲಿ: ಬರೋಬ್ಬರಿ 27 ವರ್ಷಗಳ ನಂತರ ವಿಶ್ವ ಸುಂದರಿ ಸ್ಪರ್ಧೆಯು ಭಾರತದಲ್ಲಿ ನಡೆಯಲಿದೆ. ಬಹುನಿರೀಕ್ಷಿತ ಸ್ಪರ್ಧೆಯ 71ನೇ ಆವೃತ್ತಿಯು ಇದೇ ನವೆಂಬರ್‌ನಲ್ಲಿ ನಡೆಯಲಿದ್ದು, ಅಂತಿಮ ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಿದೆ.

‘ವಿಶ್ವಸುಂದರಿ ಸ್ಪರ್ಧೆ–2023 ಭಾರತದಲ್ಲಿ ನಡೆಯಲಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ. ವಿಭಿನ್ನ ಮತ್ತು ವೈವಿದ್ಯಮಯ ಸಂಸ್ಕೃತಿ, ವಿಶ್ವದರ್ಜೆಯ ಆಕರ್ಷಣೆಗಳು, ಅಭೂತಪೂರ್ವ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದೇವೆ’ ಎಂದು ಸಂಸ್ಥೆಯ ಮುಖ್ಯಸ್ಥೆ ಮತ್ತು ಸಿಇಒ ಜುಲಿಯಾ ಮೊರ್ಲೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಯಕ್ರಮದಲ್ಲಿ 130 ರಾಷ್ಟ್ರೀಯ ಚಾಂಪಿಯನ್‌ಗಳ ಸಾಧನೆಯು ಅನಾವರಣಗೊಳ್ಳಲಿದೆ. ಸುದೀರ್ಘ ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ 130 ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಭಾರತ, 1996ರಲ್ಲಿ ಕೊನೆಯದಾಗಿ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಆಯೋಜಿಸಿತ್ತು. ದೇಶವು ಈವರೆಗೆ ಆರು ಬಾರಿ ವಿಶ್ವಸುಂದರಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT