ಬೆಂಗಳೂರು ಲೈಟ್‌ ಫೆಸ್ಟ್‌

7

ಬೆಂಗಳೂರು ಲೈಟ್‌ ಫೆಸ್ಟ್‌

Published:
Updated:
Deccan Herald

ಮನರಂಜನೆಯೊಂದಿಗೆ ಖರೀದಿಯನ್ನು ಪ್ರೋತ್ಸಾಹಿಸಲು ಗರುಡಾ ಮಾಲ್‌ ವರ್ಷಾಂತ್ಯಕ್ಕಾಗಿ ‘ಗ್ರೇಟ್‌ ಗರುಡಾ ಶಾಪಿಂಗ್‌ ಫೆಸ್ಟಿವಲ್‌’ ಆಯೋಜಿಸಿದೆ. ಇದನ್ನು ‘ಬೆಂಗಳೂರು ಲೈಟ್‌ ಫೆಸ್ಟಿವಲ್‌’ ಎಂಬ ಹೆಸರಿನಲ್ಲಿ ಆಚರಿಸುತ್ತಿದೆ. ಈಗಾಗಲೇ ಡಿಸೆಂಬರ್‌ 11ರಿಂದ ಉತ್ಸವ ಆರಂಭವಾಗಿದ್ದು, ಜನವರಿ 1ರವರೆಗೆ ನಡೆಯಲಿದೆ.

ಗರುಡಾ ಮಾಲ್‍ನ ಒಳಗಡೆ ಮತ್ತು ಹೊರಗಡೆ ವಿವಿಧ ದೀಪಗಳಿಂದ ಅಲಂಕೃತಗೊಂಡ ಪ್ರತಿಕೃತಿಗಳ ಜೊತೆಗೆ ಕ್ರಿಸ್‍ಮಸ್ ಹಬ್ಬದ ಅಲಂಕಾರಗಳು ಕೂಡ ಈ ಬಾರಿಯ ‘ಬೆಂಗಳೂರು ಲೈಟ್ ಫೆಸ್ಟಿವಲ್’ನ ಪ್ರಮುಖ ಆಕರ್ಷಣೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಎಲ್‍ಇಡಿ ದೀಪಗಳನ್ನು ಈ ಹಬ್ಬದ ಆಚರಣೆಯಲ್ಲಿ ಉಪಯೋಗಿಸಲಾಗುತ್ತಿದೆ. ಅಂತರರಾಷ್ಟ್ರೀಯ ದೀಪೋತ್ಸವದ, ಭಾರತೀಯ ಮಾದರಿಯನ್ನು ಈ ಬಾರಿ ಗರುಡಾ ಮಾಲ್‌ ಪ್ರಸ್ತುತಪಡಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

‘ಪ್ಯಾಲೇಸ್ ಆಫ್ ವಿಂಡ್ಸ್’, ‘ಹವಾ ಮಹಲ್’ ಎಂದೇ ಪ್ರಸಿದ್ಧವಾಗಿರುವ ಜೈಪುರದ ಅರಮನೆಯ ಪ್ರತಿಕೃತಿಯು ಮಾಲ್‌ನಲ್ಲಿ ಅನಾವರಣಗೊಂಡಿದೆ. ಈ ಪ್ರತಿಕೃತಿ 45 ಅಡಿ ಅಗಲ ಮತ್ತು 38 ಅಡಿ ಎತ್ತರ, ಜಗಮಗಿಸುವ ದೀಪಗಳೊಂದಿಗೆ ಮರು ಸೃಷ್ಟಿಸಲಾಗಿದೆ.

ಚಿಟ್ಟೆಗಳಿಂದ ಕೂಡಿದ ‘ಕ್ರಿಸ್‍ಮಸ್ ಟ್ರಿ’ ಗರುಡಾ ಮಾಲ್‍ನ ಮುಂಭಾಗದಲ್ಲಿದ್ದು, ಎಲ್ಲರನ್ನು ಸ್ವಾಗತಿಸುತ್ತಿದೆ. ಈ ಪ್ರತಿಕೃತಿ ಸುಮಾರು 60,000ಕ್ಕೂ ಹೆಚ್ಚು ಎಲ್‍ಇಡಿ ದೀಪಗಳಿಂದ ಬೆಳಗುತ್ತಿದೆ. ಸಂಜೆಯಾಗುತ್ತಿದ್ದಂತೆ ಇವುಗಳು ಅದ್ಭುತವಾಗಿ ಕಾಣುತ್ತವೆ. ಮತ್ತೊಂದು ದ್ವಾರದಲ್ಲಿ ಸಂಪೂರ್ಣವಾಗಿ ದೀಪಗಳಿಂದ ಅಲಂಕೃತಗೊಂಡ ಕ್ರಿಸ್‍ಮಸ್ ಆಭರಣಗಳ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಮಾಲ್‍ನ ಒಳಗಡೆ ಎಲ್‍ಇಡಿ ದೀಪಗಳ ಕ್ರಿಸ್‍ಮಸ್ ಮನೆ ನಿರ್ಮಾಣವಾಗಿದೆ. ಇದರ ಜೊತೆಗೆ ದೀಪಗಳಿಂದಲೇ ಅಲಂಕೃತಗೊಂಡ ಹೂವುಗಳು ಮಾಲ್‌ಗೆ ಬರುವವರನ್ನು ಸ್ವಾಗತಿಸಲಿವೆ.

ಸಾಮಾನ್ಯವಾಗಿ ಯುರೋಪಿನ ವಿವಿಧ ದೇಶಗಳಲ್ಲಿ ಕಂಡು ಬರುವ ಈ ರೀತಿಯ ಆಚರಣೆಯನ್ನು ಗರುಡಾ ಮಾಲ್‌ ಬೆಂಗಳೂರಿನಲ್ಲೂ ಪರಿಚಯಿಸಿದೆ. ಅಲ್ಲದೆ ಅದಕ್ಕೆ ಭಾರತೀಯ ಸೊಗಡಿನ ಸ್ಪರ್ಷವನ್ನೂ ನೀಡಿದೆ. ಈ ಪರೀಕಲ್ಪನೆಯನ್ನು ಯೋಜಿಸಿ ಜಾರಿಗೊಳಿಸುವುದಕ್ಕೆ ಮಾಲ್‌ನ ಆಡಳಿತ ಮಂಡಳಿಗೆ ಮೂರು ತಿಂಗಳೇ ಬೇಕಾಯಿತು. ಇದಕ್ಕಾಗಿ ಸುಮಾರು 200 ಕುಶಲ ಕರ್ಮಿಗಳು ಶ್ರಮಿಸಿದ್ದಾರೆ. ಕಲಾ ನಿರ್ದೇಶಕ ಮೋಹನ್‌ ಬಿ. ಕೆರೆ ಅವರು ಈ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.

ಜನವರಿ 1ರ ವರೆಗೆ ನಿತ್ಯ ₹ 1,000ಕ್ಕಿಂತ ಹೆಚ್ಚು ಖರೀದಿ ಮಾಡುವ ಅದೃಷ್ಟಶಾಲಿ ಗ್ರಾಹಕರೊಬ್ಬರಿಗೆ ಒಂದು ಚಿನ್ನದ ನಾಣ್ಯ ದೊರೆಯಲಿದೆ. ಈ ಶಾಪಿಂಗ್ ಫೆಸ್ಟಿವಲ್‍ನಲ್ಲಿ ಅತಿ ಹೆಚ್ಚು ಖರೀದಿ ಮಾಡಿದ ಅದೃಷ್ಟಶಾಲಿಗೆ ಅರ್ಧ ಕೆ.ಜಿ ಬಂಗಾರ ಉಡುಗೊರೆಯಾಗಿ ಸಿಗಲಿದೆ ಎಂದು ಗರುಡಾ ಮಾಲ್‌ನ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !