ಮೆಟ್ರೊ: ಉದ್ಯೋಗಿಗಳ ಕಡಿತ ಸಾಧ್ಯವೇ?

7

ಮೆಟ್ರೊ: ಉದ್ಯೋಗಿಗಳ ಕಡಿತ ಸಾಧ್ಯವೇ?

Published:
Updated:
Deccan Herald

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ (ಬಿಎಂಆರ್‌ಸಿಎಲ್‌) ಮಾನವ ಸಂಪನ್ಮೂಲ ಕಡಿತ ಸಾಧ್ಯವೇ? – ಇಂಥದ್ದೊಂದು ಸಾಧ್ಯಾಸಾಧ್ಯತೆಯ ಚಿಂತನೆ ನಿಗಮದಲ್ಲಿ ನಡೆದಿದೆ. ಇದಕ್ಕೆ ಕಾರಣ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು, 'ನಿಗಮದಲ್ಲಿ ಅನಗತ್ಯ ಮಾನವ ಸಂಪನ್ಮೂಲಕ್ಕೆ ಕಡಿವಾಣ ಹಾಕಬೇಕು’ ಎಂದು ಅ. 26ರಂದು ನಡೆದ ಸಭೆಯಲ್ಲಿ ಸೂಚಿಸಿದ್ದು.

‘ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟ’ ಎನ್ನುತ್ತಾರೆ ನಿಗಮದ ಅಧಿಕಾರಿಗಳು. ‘ಮೆಟ್ರೊ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದ ಮಾನವ ಸಂಪನ್ಮೂಲ ಬಳಕೆಯಾಗುವುದು ಭದ್ರತೆಗೆ. ಪ್ರಯಾಣಿಕರು ಮತ್ತು ಮೆಟ್ರೊ ಆಸ್ತಿ ಪಾಸ್ತಿಗಳ ರಕ್ಷಣೆಗಾಗಿ ಈ ಪ್ರಮಾಣದ ಭದ್ರತೆ ಅಗತ್ಯ. ಇದು ಮಾತ್ರವಲ್ಲ, ಇತರ ವಿಭಾಗಗಳಲ್ಲಿ ಟಿಕೆಟ್‌ ಕೌಂಟರ್‌, ಕಚೇರಿ ನಿರ್ವಹಣೆ, ಯೋಜನೆಗಳಲ್ಲಿ ಭಾಗಿಯಾಗಿರುವವರು ಎಲ್ಲರೂ ಅಗತ್ಯವೇ ಆಗಿದ್ದಾರೆ. ಇಷ್ಟೊಂದು ದೊಡ್ಡ ಯೋಜನೆಯಲ್ಲಿ ಮಾನವ ಸಂಪನ್ಮೂಲವನ್ನು ನಿರಾಕರಿಸುವುದು ಕಷ್ಟ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. 

‘ನಮ್ಮಲ್ಲಿರುವ ಮಾನವ ಸಂಪನ್ಮೂಲಕ್ಕೆ ವೃತ್ತಿಪರ ತರಬೇತಿ ನೀಡಲಾಗಿದೆ. ಯೋಜನೆ ವಿಸ್ತರಣೆಯಾಗುತ್ತಿದ್ದಂತೆಯೇ ಅವರನ್ನು ಆಯಾ ವಿಭಾಗದ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ತೆಗೆದುಹಾಕಿದರೆ ಅವರಿಗಾಗಿ ಮಾಡಿದ ತರಬೇತಿ ವೆಚ್ಚವೂ ವ್ಯರ್ಥವಾಗುತ್ತದೆ. ತೀರಾ ಅನಗತ್ಯವೆನಿಸಿದರೆ ಮಾತ್ರ ಅವರನ್ನು ತೆಗೆದುಹಾಕಲು ಅವಕಾಶವಿದೆ. ಅದಕ್ಕೂ ಹಲವು ಪ್ರಕ್ರಿಯೆಗಳಿವೆ. ಅದೇನಿದ್ದರೂ ಹಿರಿಯ ಅಧಿಕಾರಿಗಳ ನಿರ್ಧಾರ’ ಎಂದು ಅವರು ವಿವರಿಸಿದರು. 

ಸಮಸ್ಯೆಯೇನು?: ‘ಮೆಟ್ರೊದಲ್ಲಿ ಪ್ರತಿದಿನ ₹ 30 ಲಕ್ಷ ವರಮಾನ ಬರುತ್ತದೆ. ಆದರೆ, ಕಾರ್ಯಾಚರಣೆಗೆ ₹ 24 ಲಕ್ಷ ವೆಚ್ಚವಾಗುತ್ತಿದೆ. ಹೀಗಾಗಿ ಲಾಭ ಉಳಿಯುತ್ತಿಲ್ಲ. ಭದ್ರತಾ ಸಿಬ್ಬಂದಿ, ಟಿಕೆಟ್‌ ವಿತರಕರು ಸೇರಿದಂತೆ ಅನಗತ್ಯ ಮಾನವ ಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಬೇಕು. ಇದರಿಂದ ತಿಂಗಳಿಗೆ ಕನಿಷ್ಠ ₹ 5 ಕೋಟಿ ವೆಚ್ಚ ಉಳಿತಾಯವಾಗಲಿದೆ’ ಎಂದು ಪರಮೇಶ್ವರ ಅವರು ಅಂದು ನಡೆದ ಸಭೆಯಲ್ಲಿ ಹೇಳಿದ್ದರು.

‘ನಿಗಮದಲ್ಲೂ ಈಗ ಉದ್ಯೋಗಿಗಳ ಸಂಘಟನೆಗಳಿವೆ. ಏಕಾಏಕಿ ತೆಗೆದುಹಾಕುವುದೂ ಸುಲಭವಲ್ಲ. ದೊಡ್ಡ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಕಡಿತಗೊಳಿಸಿದರೆ ಉಳಿದವರ ಮೇಲೆ ಒತ್ತಡ ಉಂಟಾಗಲಿದೆ. ಇಡೀ ಮೆಟ್ರೊ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಉದ್ಯೋಗಿಯೊಬ್ಬರು ಹೇಳಿದರು. 

‘ಭದ್ರತೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಇಡೀ ಮೆಟ್ರೊ ವ್ಯವಸ್ಥೆ ಸುಗಮವಾಗಿ ಸಾಗುತ್ತಿರುವುದೇ ಭದ್ರತಾ ವ್ಯವಸ್ಥೆಯ ಮೇಲೆ. ನಿಲ್ದಾಣಗಳಲ್ಲಿ ಉಂಟಾಗುವ ಜನದಟ್ಟಣೆಯನ್ನು ನಿಯಂತ್ರಿಸುವುದು ಅಷ್ಟು ಸರಳವಾದ ಕೆಲಸ ಅಲ್ಲ. ಸಣ್ಣ ಅವಘಡವಾದರೂ ಇಡೀ ಮೆಟ್ರೊ ಭದ್ರತಾ ವ್ಯವಸ್ಥೆಯ ಮೇಲೆ ಸಂದೇಹ ಮೂಡುತ್ತದೆ. ಜನರಿಗೆ ಅಸುರಕ್ಷಿತ ಭಾವ ಸೃಷ್ಟಿಯಾಗುತ್ತದೆ’ ಎಂದು ಮೆಜೆಸ್ಟಿಕ್‌ ನಿಲ್ದಾಣದ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದರು.

ಅಂಕಿ ಅಂಶ
5 ,000 - ನಮ್ಮ ಮೆಟ್ರೊ ನೌಕರರ (ಕಾಯಂ, ಗುತ್ತಿಗೆ ಸೇರಿ) ಸಂಖ್ಯೆ
₹ 5 ಕೋಟಿ -ಮಾನವ ಸಂಪನ್ಮೂಲ ನಿರ್ವಹಣೆಗೆ ಪ್ರತಿ ತಿಂಗಳು ತಗಲುವ ವೆಚ್ಚ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !