ನಾಳೆ-ನಾಡಿದ್ದು ಬಸ್ ಸ್ಥಗಿತದ ಆತಂಕ, ಶಾಲೆ-ಕಾಲೇಜು ರಜೆ ನಿರ್ಧಾರ ಆಗಿಲ್ಲ

7
ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆಗೆ ವಿರೋಧ

ನಾಳೆ-ನಾಡಿದ್ದು ಬಸ್ ಸ್ಥಗಿತದ ಆತಂಕ, ಶಾಲೆ-ಕಾಲೇಜು ರಜೆ ನಿರ್ಧಾರ ಆಗಿಲ್ಲ

Published:
Updated:

ಬೆಂಗಳೂರು: ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಸಾರಿಗೆ ಇಲಾಖೆಯ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ಭಾರತ ಬಂದ್‌ಗೆ ಕರೆ ನೀಡಿವೆ.

ಹೀಗಾಗಿ ಎರಡು ದಿನ ರಾಜ್ಯದಾದ್ಯಂತ ಸರ್ಕಾರಿ ಬಸ್‌ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ಉಪಾಧ್ಯಕ್ಷ ಅನಂತ್ ಸುಬ್ಬರಾವ್ ತಿಳಿಸಿದ್ದಾರೆ.

ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತಾ ಕಾಯ್ದೆ ಜಾರಿಗೊಳಿಸುವುದು ಸೇರಿ 12 ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಟ್ರೇಡ್‌ ಯೂನಿಯನ್‌, ಇಂಡಿಯನ್ ಟ್ರೇಡ್‌ ಯೂನಿಯನ್ ಕಾಂಗ್ರೆಸ್‌ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಸಂಚಾರ ಸೇವೆ ಮೇಲೆ ವ್ಯತ್ಯಯ: ಆಟೋರಿಕ್ಷಾ, ಆ್ಯಪ್‌ ಆಧರಿತ ಟ್ಯಾಕ್ಸಿಗಳು, ಬ್ಯಾಂಕ್‌ ಸೇವೆ, ಲಾರಿ ಓಡಾಟ ಸ್ಥಗಿತಗೊಳ್ಳಲಿವೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ. ಅಂಬುಲೆನ್ಸ್‌, ಮೆಟ್ರೊ, ರೈಲು ಎಂದಿನಂತೆ ಇರಲಿದೆ. 

ಹೋಟೆಲ್‌ ಮಾಲೀಕರ ಸಂಘಟನೆ ತನ್ನ ನಿರ್ಧಾರ ಸ್ಪಷ್ಟಪಡಿಸಿಲ್ಲ. ಪರಿಸ್ಥಿತಿ ಅವಲೋಕಿಸಿ ಆಯಾ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. 

‘ರಾಷ್ಟ್ರಮಟ್ಟದ ಮುಷ್ಕರ ನಡೆಸುವ ಬಗ್ಗೆ ಕಾರ್ಮಿಕ ಸಂಘಟನೆ ಮುಖಂಡರು ಲಿಖಿತವಾಗಿ ತಿಳಿಸಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ನಾವೇನು ಮಾಡಬಹುದು ಎಂಬುದನ್ನು ಅವಲೋಕಿಸುತ್ತಿದ್ದೇವೆ. ಜನರಿಗೆ ತೊಂದರೆಯಾಗದಂತೆ ಮತ್ತು ಸಂಸ್ಥೆಯ ಆಸ್ತಿ, ಪಾಸ್ತಿ ಹಾನಿಗೊಳಗಾಗದಂತೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.  

ಬರಹ ಇಷ್ಟವಾಯಿತೆ?

 • 47

  Happy
 • 7

  Amused
 • 3

  Sad
 • 3

  Frustrated
 • 4

  Angry

Comments:

0 comments

Write the first review for this !