ಕಾರ್ಪೊರೇಟರ್‌ಗೆ ಶುಭಾಶಯ ಕೋರಿ ಫ್ಲೆಕ್ಸ್‌; ಎಫ್‌ಐಆರ್‌ ದಾಖಲು

7

ಕಾರ್ಪೊರೇಟರ್‌ಗೆ ಶುಭಾಶಯ ಕೋರಿ ಫ್ಲೆಕ್ಸ್‌; ಎಫ್‌ಐಆರ್‌ ದಾಖಲು

Published:
Updated:

ಬೆಂಗಳೂರು: ಪಾಲಿಕೆ ಸದಸ್ಯೆ ನಳನಿ ಎಂ.ಮಂಜು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್‌ ಅಳವಡಿಸಿದ್ದ ನಾರಾಯಣ್ ಎಂಬುವರ ವಿರುದ್ಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಲಗೆ ವಡೇರಹಳ್ಳಿ ಮುಖ್ಯರಸ್ತೆ, ಜಯಣ್ಣ ವೃತ್ತ ಹಾಗೂ ಎಂ.ಜಿ. ಬಡಾವಣೆಯಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಸ್ಥಳಕ್ಕೆ ಹೋಗಿದ್ದ ಬಿಬಿಎಂಪಿಯ ಎಇಇ ಎನ್‌.ಬಸವರಾಜು, ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಠಾಣೆಗೆ ದೂರು ನೀಡಿದ್ದರು.

ನೋಟಿಸ್‌ ಜಾರಿ: ಅನಧಿಕೃತವಾಗಿ ಫ್ಲೆಕ್ಸ್‌ ಹಾಕಿದ್ದ ಆರೋಪದಡಿ ಶೋಭಾ ಡೆವಲಪರ್ಸ್ ಹಾಗೂ ಸಲಾರ್ ಪುರಿಯಾ ಸಂಸ್ಥೆಗಳಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.

‘ಎರಡೂ ಸಂಸ್ಥೆಯವರು ರಾಮಮೂರ್ತಿನಗರದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಅದರ ತೆರವಿಗೆ ಹೋದ ಬಿಬಿಎಂಪಿ ಸಿಬ್ಬಂದಿ ಮೇಲೂ ಹಲ್ಲೆ ನಡೆದಿತ್ತು. ಆ ಸಂಬಂಧ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ. ಸಂಸ್ಥೆಯ ಪ್ರತಿನಿಧಿಗಳಿಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಲಾಗಿದೆ’ ಎಂದು ಪೊಲೀಸರು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !