ಹೊರ ರಾಜ್ಯಗಳಿಗೆ ತನಿಖಾ ತಂಡಗಳು

ಮಂಗಳವಾರ, ಜೂನ್ 25, 2019
22 °C
ರೈಲು ನಿಲ್ದಾಣದಲ್ಲಿ ಗ್ರೆನೇಡ್ ಮಾದರಿ ವಸ್ತು ಪತ್ತೆ ಪ್ರಕರಣ: ಭದ್ರತೆ ಇನ್ನಷ್ಟು ಹೆಚ್ಚಳ

ಹೊರ ರಾಜ್ಯಗಳಿಗೆ ತನಿಖಾ ತಂಡಗಳು

Published:
Updated:

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗ್ರೆನೇಡ್ ಮಾದರಿಯ ವಸ್ತು ಪತ್ತೆಯಾದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ರೈಲ್ವೆ ಪೊಲೀಸರ ಎರಡು ವಿಶೇಷ ತಂಡಗಳು, ಹೊರ ರಾಜ್ಯಕ್ಕೆ ಹೋಗಿವೆ.

‘ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕ ವಸ್ತು ‘ಗ್ರೆನೇಡ್’ ಮಾದರಿಯಲ್ಲಿ ಇದೆ. ಆದರೆ, ಅದರಲ್ಲಿ ಯಾವುದೇ ಸ್ಫೋಟಕದ ಅಂಶವಿರಲಿಲ್ಲ’ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್ ಗುಳೇದ್ ಅವರು ತಿಳಿಸಿದ್ದಾರೆ.

‘ಆ ವಸ್ತು ಯಾವುದು, ಅದನ್ನು ತಂದವರು ಯಾರು ಎಂಬುದು ಇದುವರೆಗೂ ನಿಖರವಾಗಿ ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಲೆಂದು ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಆ ತಂಡದ ಸದಸ್ಯರೇ ಶುಕ್ರವಾರ ರಾತ್ರಿ ನಗರದಿಂದ ಪ್ರಯಾಣ ಆರಂಭಿಸಿ ಶನಿವಾರ ಬೆಳಿಗ್ಗೆ ಹೊರ ರಾಜ್ಯ ತಲುಪಿದ್ದಾರೆ.

‘ಮೇಲ್ನೋಟಕ್ಕೆ ಇದೊಂದು ಗ್ರೆನೇಡ್ ರೀತಿಯಲ್ಲೇ ಕಾಣುತ್ತಿದೆ. ಅದರ ಮೇಲೆ ಯಾವುದೇ ಬರಹ ಹಾಗೂ ಗುರುತು ಇಲ್ಲ. ಇಂಥ ಗ್ರೆನೇಡ್‌ಗಳನ್ನು ಹೊರ ರಾಜ್ಯಗಳಲ್ಲಿರುವ ಕೆಲವರು ತಯಾರು ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ತಂಡವು ಹೊರ ರಾಜ್ಯಕ್ಕೆ ಹೋಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರವೇಶ ದ್ವಾರ ಬಂದ್‌ಗೆ ಪತ್ರ: ನಿಲ್ದಾಣದ ಸುತ್ತಮುತ್ತ 9 ಕಡೆಯಿಂದ ಪ್ರಯಾಣಿಕರು ಒಳಗೆ ಬರಲು ದಾರಿ ಇದೆ. ಆ ಪೈಕಿ ಮುಖ್ಯ ಪ್ರವೇಶದ್ವಾರ ಹಾಗೂ ಓಕಳಿಪುರ ಬಳಿಯ ಪ್ರವೇಶದ್ವಾರದಲ್ಲಿ ಮಾತ್ರ ತಪಾಸಣೆ ಇದೆ. ಉಳಿದ ಏಳು ಕಡೆ ಯಾವುದೇ ತಪಾಸಣೆ ಇಲ್ಲ. ಆ ಏಳು ದಾರಿಗಳನ್ನು ಬಂದ್‌ ಮಾಡುವಂತೆ ಪೊಲೀಸರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

‘ನಿಲ್ದಾಣದಲ್ಲಿ ಈ ಹಿಂದೆ ಭದ್ರತೆಯಲ್ಲಿ ಸಾಕಷ್ಟು ಲೋಪಗಳು ಆಗಿವೆ. ಸಿ.ಸಿ.ಟಿ.ವಿ ಕ್ಯಾಮೆರಾಗಳು ಸಹ ನಿಷ್ಕ್ರಿಯಗೊಂಡಿದ್ದವು. ಈಗ ಆ ಲೋಪಗಳನ್ನು ಸರಿಪಡಿಸಲಾಗಿದ್ದು, ಶನಿವಾರದಿಂದ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಯೋಗಾಲಯದ ವರದಿ ಶೀಘ್ರ: ‘ನಿಲ್ದಾಣದಲ್ಲಿ ಸಿಕ್ಕ ಅನುಮಾನಾಸ್ಪದ ವಸ್ತುವನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಶೀಘ್ರದಲ್ಲೇ ವರದಿ ನೀಡಲಿದ್ದು, ಅದಾದ ಬಳಿಕವೇ ವಸ್ತು ಯಾವುದು ಎಂಬುದು ತಿಳಿಯಲಿದೆ’ ಎಂದು ಅಧಿಕಾರಿ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !