ಗುಂಡಿ ಮುಚ್ಚಿದ ಸೋಮಸಂದ್ರಪಾಳ್ಯ ನಿವಾಸಿಗಳು

ಬುಧವಾರ, ಜೂಲೈ 17, 2019
29 °C

ಗುಂಡಿ ಮುಚ್ಚಿದ ಸೋಮಸಂದ್ರಪಾಳ್ಯ ನಿವಾಸಿಗಳು

Published:
Updated:
Prajavani

ಬೊಮ್ಮನಹಳ್ಳಿ: ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ನಿವಾಸಿಗಳು ಮಾಡಿದ ಮನವಿಗೆ ಸ್ಪಂದಿಸದ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರತಿಭಟನಾರ್ಥವಾಗಿ ನಿವಾಸಿಗಳೇ ಗುಂಡಿ ಮುಚ್ಚಲು ಮುಂದಾಗಿದ್ದಾರೆ.

ಎಚ್‌ಎಸ್ಆರ್ ವಾರ್ಡ್‌ನ ಸೋಮಸಂದ್ರಪಾಳ್ಯದ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಅಡ್ಡಿ ಆಗಿತ್ತು. ರಸ್ತೆ ಪಡಿಸುವಂತೆ ಜಂಟಿ ಆಯುಕ್ತರು ಹಾಗೂ ಪಾಲಿಕೆ ಸದಸ್ಯರಿಗೆ ಎಂಟು ತಿಂಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಇದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ, ನಿವಾಸಿಗಳೇ ಹಣ ಸಂಗ್ರಹಿಸಿ ₹1 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚಲು ನಿರ್ಧರಿಸಿದ್ದಾರೆ.

20 ಶಾಲಾ – ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು. ಪ್ರತಿದಿನ ಸುಮಾರು 10 ಸಾವಿರ ಕಾರು ಮತ್ತು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಗುಂಡಿಗಳಿಂದಾಗಿ ಹಲವು ಬಾರಿ ಅಪಘಾತಗಳಾಗಿವೆ ಎಂದು ನಿವಾಸಿಗಳು ದೂರಿದರು.

‘ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯ ಮಿತಿ ಮೀರಿದೆ, ಪಾಲಿಕೆ ಸದಸ್ಯರೂ ಇತ್ತ ಸುಳಿದಿಲ್ಲ. ಸಮಸ್ಯೆ ಎಂದು ಜನ ಯಾರ
ಬಳಿ ಹೋಗಬೇಕು ಹೇಳಿ?’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಿವಾಸಿ ರಾಮಕೃಷ್ಣರೆಡ್ಡಿ.

‘ಸೋಮಸಂದ್ರಪಾಳ್ಯದ ಎರಡು ರಸ್ತೆಗಳಿಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದು ರಸ್ತೆ ದುರಸ್ತಿಗೆ ಅಡ್ಡಿಯಾಗಿದೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !