ಸೋಮವಾರ, ಅಕ್ಟೋಬರ್ 18, 2021
27 °C

ಟಿಂಡರ್‌ ಯುಗದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್‌ ಹೊಸ ಭಾಷ್ಯ

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಮಹಿಳೆಗೆ ಮುಂದಾಳುತ್ವದ ಪ್ರೇರೇಪಣೆ ನೀಡುವಂತೆ, ನಿರೂಪಣೆಯ ಶೈಲಿಯನ್ನೇ ಬದಲಾಯಿಸುವ ಗುರಿಯೊಂದಿಗೆ ಮ್ಯಾಚೋ ಸ್ಪೋರ್ಟೋದಿಂದ ವಿನೂತನ ಪ್ರಚಾರಾಂದೋಲನ

ಹೊಸದಾದ ಮತ್ತು ಟ್ರೆಂಡಿ 'ಮಾಚೋ ಸ್ಪೋರ್ಟೋ' ಪ್ರಚಾರದಲ್ಲಿ ಭಾರತದ ಇಬ್ಬರು ಸಿನಿಮಾ ತಾರೆಯರಿದ್ದಾರೆ–ಅವರೇ ಮುದ್ದಾದ ಹಾಗೂ ಚೆಂದದ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್‌. ಈ ಪ್ರಚಾರವು ಹಿಂದಿನ ಅದ್ಭುತ ಜಾಹೀರಾತು, 'ಏ ತೊ ಬಡಾ ಟೋಯಿಂಗ್‌ ಹೈ' ನೆನಪಿಸುತ್ತ, ಈಗಮಾಚೋ ಸ್ಪೋರ್ಟೋಗಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದೆ. ಆ ಹಿಂದಿನ ಜಾಹೀರಾತನ್ನು ನೆನಪಿಸಿಕೊಳ್ಳುವುದಾದರೆ, ಅಲ್ಲಿ ಮಹಿಳೆಯ ಬಯಕೆಗಳ ಮೇಲೆ ವಿಷಯ ಕೇಂದ್ರೀಕರಿಸುವ ಮೂಲಕ ಸಿದ್ಧ ಮಾದರಿಗಳಿಂದ ಹೊರ ಬಂದಿತ್ತು. ಈ ಬಾರಿಯೂ ಸಹ ಹೊಸ ಪ್ರಚಾರದಲ್ಲಿ ಮಹಿಳೆಯ ದೃಷ್ಟಿಕೋನವನ್ನು ಉಲ್ಲಾಸಕರ ರೀತಿಯಲ್ಲಿ ಸಮರ್ಥಿಸಲಾಗಿದೆ.

ಈ ಜಾಹೀರಾತು ನವಯುಗದ ಮಹಿಳೆಯ ಪ್ರತಿಬಿಂಬವಾಗಿದೆ, ಆಕೆಯೇ ಇಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಪುರುಷ ಮತ್ತು ಮಹಿಳೆಯರ ನಡುವಿನ ಎಲ್ಲೆಗಳನ್ನು ಮರುವ್ಯಾಖ್ಯಾನಿಸಲಾಗಿದೆ. ಪುರುಷರ ಉಡುಪು ಜಾಹೀರಾತಿಗೆ ರಶ್ಮಿಕಾ ಮಂದಣ್ಣ ಅವರಂತಹ ಜನಪ್ರಿಯ ನಟಿಯನ್ನು ಆಯ್ಕೆ ಮಾಡಿರುವುದು ಅದನ್ನು ಸ್ಪಷ್ಟಪಡಿಸುತ್ತದೆ, ಇದು ಪುರುಷರ ಉಡುಪಿನ ಮುಂಚೂಣಿ ಬ್ರ್ಯಾಂಡ್‌ವೊಂದು ಅನುಸರಿಸಬಹುದಾದ ರೂಢಿಯನ್ನು ಮೀರಿದೆ. ಮಹಿಳೆಯ ದೃಷ್ಟಿಕೋನದ ಕುರಿತು ಚರ್ಚೆಯನ್ನು ಮುಂದುವರಿಸುವುದು ಇಲ್ಲಿನ ಉದ್ದೇಶವಾಗಿದೆ, ಹಾಗೇ ಮಹಿಳೆ ಮತ್ತು ಪುರುಷ ಇಬ್ಬರ ದೃಷ್ಟಿಕೋನಗಳತ್ತ ಕೇಂದ್ರೀಕರಿಸುವ ಮೂಲಕ ಸಿದ್ಧ ಮಾದರಿಗಳಿಂದ ಹೊರ ಬರುವುದಾಗಿದೆ.

 

ಈ ಪ್ರಚಾರಕ್ಕೆ ನೆಟಿಜನ್‌ಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ಮುದ್ದಾದ ಭಾವನೆಗಳು ಮತ್ತು ವಿಕ್ಕಿ ಕೌಶಲ್‌ ಲುಕ್‌ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಜಾಹೀರಾತಿನಲ್ಲಿ ಬಳಸಲಾಗಿರುವ ಬಣ್ಣಗಳು, ವಿಕ್ಕಿ ಕೊಡುವ ಸ್ಮೈಲ್ ಮತ್ತು ರಶ್ಮಿಕಾ ತೋರಿಸುವ ಭಾವನೆಗಳು ಸ್ನೇಹಮಯ ಜಗತ್ತಿನ ಪ್ರತಿಬಿಂಬವಾಗಿದೆ. ಅದು ಮಹಿಳೆಯ ದೃಷ್ಟಿಕೋನ ಮತ್ತು ಆಕೆಯ ಆಕಾಂಕ್ಷೆಗಳನ್ನು ಯಾರೊಬ್ಬರಿಗೂ ಇರುಸುಮುರುಸು ಉಂಟು ಮಾಡದ ರೀತಿಯಲ್ಲಿ ತೋರಿಸಲಾಗಿದೆ. 

ತಾನೇ ಮೊದಲು ಭಾವನೆಗಳನ್ನು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ತೋರದ, ಸಂಪೂರ್ಣ ಹೊಸದಾದ ಮತ್ತು ಪ್ರಗತಿಶೀಲ ಮಹಿಳೆಯ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ಜಾಹೀರಾತಿನೊಳಗೆ