ಸ್ತನ ಕ್ಯಾನ್ಸರ್‌: ಒಂದು ತಿಂಗಳು ಉಚಿತ ಮ್ಯಾಮೋಗ್ರಫಿ

7

ಸ್ತನ ಕ್ಯಾನ್ಸರ್‌: ಒಂದು ತಿಂಗಳು ಉಚಿತ ಮ್ಯಾಮೋಗ್ರಫಿ

Published:
Updated:
Deccan Herald

ಬೆಂಗಳೂರು: ನಗರದ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ಒಂದು ತಿಂಗಳು ಉಚಿತವಾಗಿ ಸ್ತನ ಕ್ಯಾನ್ಸರ್‌ ತಪಾಸಣೆ ನಡೆಸಲಾಗುತ್ತದೆ.

‘ಅಕ್ಟೋಬರ್‌ ತಿಂಗಳ ಅಂತ್ಯದವರೆಗೂ ಉಚಿತವಾಗಿ ಮ್ಯಾಮೋಗ್ರಫಿ ಮಾಡುತ್ತೇವೆ. 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ತನ ಕ್ಯಾನ್ಸರ್‌ ಲಕ್ಷಣಗಳು ಕಂಡುಬಂದರೆ ಅವರು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಕ್ಯಾನ್ಸರ್‌ ಪತ್ತೆಯಾದರೆ, ಅವರಿಗೆ ಮುಂದಿನ ಚಿಕಿತ್ಸೆಯ ಮಾಹಿತಿಯನ್ನೂ ನೀಡಲಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳಿದರು.

ಅಕ್ಟೋಬರ್‌ನಲ್ಲಿ ‘ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ’ ತಿಂಗಳಾಗಿ ಆಚರಿಸಲಾಗುತ್ತದೆ. ಈ ಉದ್ದೇಶದಿಂದ ಕಿದ್ವಾಯಿ ಸಂಸ್ಥೆ ನಗರದ ಕೆಲ ಮಹಿಳೆಯರ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ.

‘ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್‌ ಪತ್ತೆಯಾದರೆ ಶೇ 80ಕ್ಕಿಂತ ಹೆಚ್ಚು ರೋಗಿಗಳು ಗುಣಮುಖರಾಗುತ್ತಾರೆ. ಇದಕ್ಕಾಗಿ ಜಾಗೃತಿ ಮುಖ್ಯ. ನಾವೇ ಸುಲಭವಾಗಿ ಸ್ತನ ಕ್ಯಾನ್ಸರ್‌ ಲಕ್ಷಣಗಳನ್ನು ಪತ್ತೆಹಚ್ಚಬಹುದು. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸ್ತನ ಕ್ಯಾನ್ಸರ್‌ಗೆ ಮೊದಲ ಸ್ಥಾನ

ಬೇರೆ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಸ್ತನ ಕ್ಯಾನ್ಸರ್‌ ರೋಗಿಗಳೇ ರಾಜ್ಯದಲ್ಲಿ ಹೆಚ್ಚಿದ್ದಾರೆ. ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಗೆ ವರ್ಷಕ್ಕೆ 10,000 ಸ್ತನ ಕ್ಯಾನ್ಸರ್‌ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. 1,000 ಹೊಸ ರೋಗಿಗಳು ಬರುತ್ತಿದ್ದಾರೆ’ ಎಂದು ರಾಮಚಂದ್ರ ಅವರು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ವರ್ಷಕ್ಕೆ 1 ಲಕ್ಷ ಕ್ಯಾನ್ಸರ್‌ ರೋಗಿಗಳಲ್ಲಿ 24 ಮಂದಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಪ್ರಮಾಣ 34ರಷ್ಟಿದೆ ಎಂದು ಅವರು ಹೇಳಿದರು.

ರೋಗದ ಲಕ್ಷಣಗಳು

* ಸ್ತನವನ್ನು ಮುಟ್ಟಿ ನೋಡಿದಾಗ ಗಂಟು ಕಂಡುಬಂದರೆ

* ಸ್ತನ ಗಾತ್ರದಲ್ಲಿ ಬದಲಾವಣೆ, ಕೀವು, ಹುಣ್ಣು

* ಸ್ತನದ ತೊಟ್ಟಿನಲ್ಲಿ ರಕ್ತ ಸ್ರಾವ

ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು

* ಒತ್ತಡದ ಜೀವನಶೈಲಿ, ಆಹಾರ ಕ್ರಮ, ದೇಹಕ್ಕೆ ವ್ಯಾಯಾಮ ಇಲ್ಲದಿರುವುದು, ಬೊಜ್ಜು

* ತಡವಾಗಿ ಮದುವೆ, ತಡವಾಗಿ ಮಕ್ಕಳನ್ನು ಮಾಡಿಕೊಳ್ಳುವುದು (35 ವರ್ಷದ ನಂತರ)

* ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್‌ ಇದ್ದರೆ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !