ಸೋಮವಾರ, ಡಿಸೆಂಬರ್ 9, 2019
25 °C

ಇಟಿಎಫ್‌ನಲ್ಲಿ ಪಿಎಫ್‌ ಹೂಡಿಕೆ ಹೆಚ್ಚಳ

Published:
Updated:
ಇಟಿಎಫ್‌ನಲ್ಲಿ ಪಿಎಫ್‌ ಹೂಡಿಕೆ ಹೆಚ್ಚಳ

ನವದೆಹಲಿ: ಷೇರುಪೇಟೆಯ ಹೂಡಿಕೆ ನಿಧಿಗಳಲ್ಲಿನ (ಇಟಿಎಫ್‌) ಭವಿಷ್ಯ ನಿಧಿ ಸಂಘಟನೆಯ  ಹೂಡಿಕೆ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದಲ್ಲಿ  ₹ 45 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ.‘ಇಟಿಎಫ್‌ಗಳಲ್ಲಿನ ಹೂಡಿಕೆ ಪ್ರಮಾಣವನ್ನು ಶೇ 10ರಿಂದ ಶೇ 15ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ 2017–18ನೆ ಹಣಕಾಸು ವರ್ಷದಲ್ಲಿ ಹೂಡಿಕೆ ಪ್ರಮಾಣವು ₹ 45 ಸಾವಿರ ಕೋಟಿಗಳನ್ನು ದಾಟುವ ಸಾಧ್ಯತೆ ಇದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.ಮುಂದಿನ ತಿಂಗಳು ಬಡ್ಡಿ ದರ ನಿಗದಿ: ಪ್ರಸಕ್ತ ಹಣಕಾಸು ವರ್ಷದ (2017–18) ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಮುಂದಿನ ತಿಂಗಳು ಪ್ರಕಟಿಸುವ ನಿರೀಕ್ಷೆ ಇದೆ.‘ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ಕಾರ್ಮಿಕ ಸಚಿವಾಲಯವು ಅಂತಿಮ ನಿರ್ಧಾರಕ್ಕೆ ಬರಲಿದೆ’ ಎಂದು ಅವರು ತಿಳಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿನ ಭವಿಷ್ಯ ನಿಧಿಯ ವರಮಾನದ ಅಂದಾಜು ಆಧರಿಸಿ ಬಡ್ಡಿ ದರ ನಿಗದಿ ಮಾಡಲಾಗುವುದು. ಷೇರುಗಳಲ್ಲಿನ ಹೂಡಿಕೆಯಿಂದ ಶೇ 13.3ರಷ್ಟು ವರಮಾನ ಬರುವ ನಿರೀಕ್ಷೆ ಇದೆ.2015–16ನೆ ಸಾಲಿನ  ಶೇ 8.8ಕ್ಕೆ ಹೋಲಿಸಿದರೆ, 2016–17ನೆ ಸಾಲಿನ ಬಡ್ಡಿ ದರಗಳನ್ನು  ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಶೇ 8.65ಕ್ಕೆ ಇಳಿಸಿದೆ.ಈ ಬಾರಿಯೂ ಬಡ್ಡಿ ದರಗಳನ್ನು ಶೇ 0.25ರಷ್ಟು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಿಗೆ ಇರುವ ಬಡ್ಡಿದರಗಳ ಮಟ್ಟದಲ್ಲಿಯೇ ಪಿಎಫ್‌ ಬಡ್ಡಿ ದರಗಳೂ ಇರಬೇಕು ಎಂದು ಕಾರ್ಮಿಕ ಸಚಿವಾಲಯ ಪ್ರತಿಪಾದಿಸುತ್ತಿದೆ.

ಪ್ರತಿಕ್ರಿಯಿಸಿ (+)